ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣ: ಠಾಣೆಗೆ ಭೇಟಿ ನೀಡಿ ಚರ್ಚೆ ನಡೆಸಿದ ಪ್ರಮೋದ್ ಮುತಾಲಿಕ್, ದಿಡ್ಡಿ ಆಂಜನೇಯ ದೇಗುಲದಲ್ಲಿ ವಿಶೇಷ ಪೂಜೆ
ಹಳೇ ಹುಬ್ಬಳ್ಳಿ ಗಲಾಟೆ ಸಂಬಂಧ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿದ್ದು, ಬಂಧಿತ ಮೌಲ್ವಿ ವಸೀಂ ಪಠಾಣ್ಗೆ ಬಾಂಗ್ಲಾದ ಲಿಂಕ್ ಇದೆ. ಹಳೇ ಹುಬ್ಬಳ್ಳಿಯಲ್ಲಿ ಗಲಾಟೆ ಹಿಂದೆ ಕಾಂಗ್ರೆಸ್ನ ಕೈವಾಡವಿದೆ. ಕಾಂಗ್ರೆಸ್ ಮುಖಂಡ ಅಲ್ತಾಫ್ ಹಳ್ಳೂರನನ್ನು ಬಂಧಿಸಬೇಕು.
ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಹಳೇ ಹುಬ್ಬಳ್ಳಿ ಠಾಣೆಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭೇಟಿ ನೀಡಿದ್ದಾರೆ. ಹಾಗೂ ಸಂಚಾರ, ಅಪರಾಧ ವಿಭಾಗ ಡಿಸಿಪಿ ಗೋಪಾಲ್ ಜತೆ ಪ್ರಕರಣದ ಕುರಿತು ಠಾಣೆಯಲ್ಲಿ ಚರ್ಚ ನಡೆಸಿದ್ದಾರೆ. ಬಳಿಕ ಗಲಭೆ ವೇಳೆ ದಾಳಿಗೊಳಗಾದ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಹಳೇ ಹುಬ್ಬಳ್ಳಿ ಠಾಣೆ ಪಕ್ಕದಲ್ಲಿರುವ ದಿಡ್ಡಿ ಆಂಜನೇಯ ದೇಗುಲದ ಮೇಲೆ ಪುಂಡರು ಕಲ್ಲೆಸೆದಿದ್ದರು. ಹೀಗಾಗಿ ದೇವಸ್ಥಾನಕ್ಕೆ ಮುತಾಲಿಕ್ ಭೇಟಿ ನೀಡಿದ್ದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಹಳೇ ಹುಬ್ಬಳ್ಳಿಯಲ್ಲಿ ಗಲಾಟೆ ಹಿಂದೆ ಕಾಂಗ್ರೆಸ್ನ ಕೈವಾಡವಿದೆ ಇನ್ನು ಹಳೇ ಹುಬ್ಬಳ್ಳಿ ಗಲಾಟೆ ಸಂಬಂಧ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿದ್ದು, ಬಂಧಿತ ಮೌಲ್ವಿ ವಸೀಂ ಪಠಾಣ್ಗೆ ಬಾಂಗ್ಲಾದ ಲಿಂಕ್ ಇದೆ. ಹಳೇ ಹುಬ್ಬಳ್ಳಿಯಲ್ಲಿ ಗಲಾಟೆ ಹಿಂದೆ ಕಾಂಗ್ರೆಸ್ನ ಕೈವಾಡವಿದೆ. ಕಾಂಗ್ರೆಸ್ ಮುಖಂಡ ಅಲ್ತಾಫ್ ಹಳ್ಳೂರನನ್ನು ಬಂಧಿಸಬೇಕು. ಕಿಡಿಗೇಡಿಗಳು ಪೊಲೀಸರನ್ನೇ ಹತ್ಯೆಗೈಯ್ಯಲು ಪ್ರಯತ್ನಿಸಿದ್ದಾರೆ. ಬಂಧಿತ ವಸೀಂ ರಜಾ ಅಕಾಡೆಮಿಯ ಅಧ್ಯಕ್ಷನಾಗಿದ್ದಾನೆ. ರಜಾ ಅಕಾಡೆಮಿ ಮೂಲ ಬಾಂಗ್ಲಾದಲ್ಲಿದೆ, ತನಿಖೆಯಾಗಬೇಕು. ಇಂಥವರ ವಿರುದ್ಧ ಕ್ರಮಕೈಗೊಳ್ಳಲು ಬಿಜೆಪಿ ಸರ್ಕಾರ ಹೆದರುತ್ತಿದೆ. ನೀವು ಕೂಡ ಬುಲ್ಡೋಜರ್ ತೆಗೆದುಕೊಂಡು ಬನ್ನಿ ಎಂದು ಮುತಾಲಿಕ್ ಆಗ್ರಹಿಸಿದ್ದಾರೆ.
ವಾಸಿಂ ಪಠಾಣ್ ಜೊತೆ ಇಬ್ಬರು ರೌಡಿ ಶೀಟರ್ ಬಂಧಿಸಿದ್ದಾರೆ. ಹಿಂದೂಗಳು ಮತ್ತು ಪೊಲೀಸರನ್ನ ಭಯ ಬೀಳಿಸುವ ಉದ್ದೇಶವಿದೆ. ಜೀವದ ಹಂಗು ತೊರೆದು ಪೊಲೀಸರು ಕೆಲಸ ಮಾಡಿದ್ದಾರೆ. ಗೋಪನಕೊಪ್ಪ, ಮಂಟೂರ, ಗಣೇಶಪುರದಿಂದ ಬಂದಿದ್ದಾರೆ. ಗಲಭೆ ಮಾಡಲು ಮೊದಲೇ ಪ್ಲ್ಯಾನ್ ಅನ್ನೋದಕ್ಕೆ ಸಾಕ್ಷಿ ಇದೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. ಬಂಧಿತರ ವಿರುದ್ಧ ಕೋಕಾ ಆ್ಯಕ್ಟ್ ಹಾಕಿ ಒದ್ದು ಒಳಗೆ ಹಾಕಲಿ. ಬಿಜೆಪಿಯವರು ಈಗಲಾದರು ಗಂಡಸ್ತನ ತೋರಿಸಲಿ. ಹುಬ್ಬಳ್ಳಿ ಗಲಭೆಗೆ ವಾಟ್ಸಾಪ್ ಸ್ಟೇಟಸ್ ಒಂದು ನೆಪ ಮಾತ್ರ. ಮಸೀದಿ ಮೇಲೆ ಭಗವಾ ದ್ವಜಾ ಹಾರಿಸಿದ್ರೆ ತಪ್ಪೇನು. ಕೇಸರಿ ಹಿಜಾಬ್ ಹಾಕೊಂಡು ಓಡಾಡ್ತೀರಿ. ವಿದ್ಯಾರ್ಥಿಗಿ ಬಹಳ ಟಾರ್ಚರ್ ಕೊಟ್ಟಿದ್ದಾರೆ. ಅವರ ಮನೆ ಮುಂದೆ ಒಬ್ಬ ಗುಂಡಾ ಇದಾನೆ. ಅವರ ಮನೆ ಮುಂದೆ ಮಾಂಸ ಎಸೆಯುತ್ತಾರೆ. ಕಾಶ್ಮೀರ ತರಹ ಇಲ್ಲಿ ಓಡಿಸಬೇಕು ಅನ್ನೋ ಪ್ಲ್ಯಾನ್ ಇದು. ಹುಬ್ಬಳ್ಳಿ ಗಲಭೆಯ ಹಿಂದೆ MIM ಕಾಂಗ್ರೆಸ್ ಇದೆ ಎಂದು ಮುತಾಲಿಕ್ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ ಇನ್ನು ಮತ್ತೊಂದು ಕಡೆ ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ನಿಂದ ಗಲಭೆಯಾದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಹುಬ್ಬಳ್ಳಿ ಗಲಭೆ ವಿಚಾರವಾಗಿ ಕಠಿಣ ಕ್ರಮಕ್ಕೆ ಸಲಹೆ ನೀಡಿದ್ದೆ. ರಾಜ್ಯದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಇನ್ನೂ 1 ವರ್ಷಪೂರ್ತಿ ನಡೆಯುತ್ತದೆ, ನಾನು ಮೊದಲೇ ಹೇಳಿದ್ದೆ. ರಾಜ್ಯದಲ್ಲಿ ಬೆಂಕಿ ಹಚ್ಚಲು ಬಿಜೆಪಿ ಪಕ್ಷ ಹೊರಟಿದೆ. ಕಾಣದ ಕೈಗಳು ಹೇಳಿದಂತೆ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಅದಕ್ಕೆ ಕಾಂಗ್ರೆಸ್ನ ಒಂದು ಗುಂಪು ಸಾಥ್ ಕೊಟ್ಟಿದೆ. ಕಳೆದ 2 ತಿಂಗಳಿಂದ ಗಲಭೆ, ಗಲಾಟೆ ತಡೆಯಲು ಸರ್ಕಾರ ವಿಫಲವಾಗಿದೆ. ಪ್ರಚೋದನಕಾರಿ ಹೇಳಿಕೆ ನೀಡುವವರನ್ನು ಮೊದಲು ಬಂಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಐಸಿಯುನಲ್ಲಿ ಭುವಿ: ಸಾನಿಯಾಗೆ ತಿರುಮಂತ್ರ ಆಯ್ತು ಪ್ಲ್ಯಾನ್; ಮುಂದಿದೆ ಮಾರಿ ಹಬ್ಬ
ಸ್ಲಂ ಬೋರ್ಡ್ ಮನೆಗಳನ್ನು ಖಾಲಿ ಮಾಡಿಸಲು ಯತ್ನ: ಸಂಸದ ಡಿಕೆ ಸುರೇಶ್ ವಿರುದ್ಧ ನಿವಾಸಿಗಳ ಆಕ್ರೋಶ