ಅಪ್ರಾಪ್ತನೆಂದು ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದ ಕಳ್ಳ: 18 ವರ್ಷ ತುಂಬುತ್ತಿದ್ದಂತೆ ಕೇಕ್​​​ ಕಟ್​ ಮಾಡಿ ಜೈಲಿಗೆ ಕಳುಹಿಸಿದ ಪೊಲೀಸರು

Updated on: Feb 25, 2026 | 1:21 PM

ಬ್ರೆಜಿಲ್‌ನ ರಿಯೊ ಗ್ರಾಂಡೆ ದೊ ನಾರ್ಟೆಯಲ್ಲಿ, ಪೊಲೀಸರು ಕಾರು ಬಿಡಿಭಾಗ ಕಳ್ಳ ಪೌಲೊ ರೋಡ್ರಿಗೋ ದಾಸ್ ನೆವೆಸ್‌ನ 18ನೇ ಹುಟ್ಟುಹಬ್ಬಕ್ಕಾಗಿ ಕಾದರು. ಆತ ವಯಸ್ಕನಾಗುತ್ತಿದ್ದಂತೆ ಬಂಧಿಸಿ, ಪೊಲೀಸ್ ಠಾಣೆಯಲ್ಲಿ ಕೇಕ್ ಕತ್ತರಿಸಿ, "ಹ್ಯಾಪಿ ಬರ್ತ್‌ಡೇ" ಹಾಡಿ ವಿಚಿತ್ರವಾಗಿ ಆಚರಿಸಿದರು. ಬಳಿಕ ಆತನನ್ನು ಜೈಲಿಗೆ ಕಳುಹಿಸಿದರು. ಬ್ರೆಜಿಲ್ ಕಾನೂನಿನ ಅಡಿ ಅಪ್ರಾಪ್ತರ ಬಂಧನಕ್ಕಿದ್ದ ಮಿತಿಯನ್ನು ಇದು ಎತ್ತಿ ತೋರಿಸುತ್ತದೆ.

ಬ್ರೆಜಿಲ್‌ನ ರಿಯೊ ಗ್ರಾಂಡೆ ದೊ ನಾರ್ಟೆ (Rio Grande do Norte) ಪ್ರಾಂತ್ಯದಲ್ಲಿ ವಿಚಿತ್ರ ಮತ್ತು ಸ್ವಾರಸ್ಯಕರ ಘಟನೆ ನಡೆದಿದೆ. ಪೌಲೊ ರೋಡ್ರಿಗೋ ದಾಸ್ ನೆವೆಸ್ (Paulo Rodrigo das Neves) ಎಂಬ ಯುವಕ ದೀರ್ಘಕಾಲದಿಂದ ಬ್ರೆಜಿಲ್ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ. ಈತ ಕಾರುಗಳ ಸೌಂಡ್ ಸಿಸ್ಟಮ್ ಮತ್ತು ಇತರ ಬಿಡಿಭಾಗಗಳನ್ನು ಕಳವು ಮಾಡುತ್ತಿದ್ದ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಈತನ ಕೃತ್ಯಗಳು ಹಲವಾರು ಬಾರಿ ಸೆರೆಯಾಗಿದ್ದವು. ಆದರೆ, ಬ್ರೆಜಿಲ್‌ನ ಕಾನೂನಿನ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಗಂಭೀರ ಅಪರಾಧಗಳಿಗಾಗಿ ಬಂಧಿಸಿ ಜೈಲಿಗೆ ಹಾಕಲು ಸಾಧ್ಯವಿರಲಿಲ್ಲ. ಪೌಲೊ ತನ್ನ 18ನೇ ವರ್ಷಕ್ಕೆ ಕಾಲಿಡುವ ದಿನದವರೆಗೂ ಪೊಲೀಸರು ಕಾದು ಕುಳಿತಿದ್ದರು. ಆತ 18ನೇ ವರ್ಷಕ್ಕೆ ಕಾಲಿಟ್ಟ ತಕ್ಷಣವೇ ಪೊಲೀಸರು ಆತನ ಮನೆಗೆ ದಾಳಿ ಮಾಡಿ ಬಂಧಿಸಿದ್ದಾರೆ. ಬಂಧನದ ನಂತರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಆತನಿಗೆ ಒಂದು ಸರ್ಪ್ರೈಸ್ ನೀಡಿದರು. ಕೇಕ್ ಮತ್ತು ಕೋಕಾಕೋಲಾ ತಂದು ಪೊಲೀಸರು ಆತನ ಸುತ್ತಲೂ ನಿಂತು ವ್ಯಂಗ್ಯವಾಗಿ “ಹ್ಯಾಪಿ ಬರ್ತ್ ಡೇ” ಹಾಡನ್ನು ಹಾಡಿದ್ದಾರೆ. ಈ ಅವಮಾನಕರ ಮತ್ತು ವಿಚಿತ್ರ ಹುಟ್ಟುಹಬ್ಬದ ಆಚರಣೆಯ ವೇಳೆ ಆತನ ತಾಯಿಯೂ ಅಲ್ಲೇ ಇದ್ದರು. ಕೇಕ್ ಕತ್ತರಿಸಿದ ನಂತರ ಪೊಲೀಸರು ಆತನಿಗೆ ಕೈಕೋಳ ತೊಡಿಸಿ ಜೈಲಿಗೆ ಕಳುಹಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More