ಬ್ರಿಕ್ಸ್ ಭೋಜನಕೂಟದಲ್ಲಿ ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ನವದೆಹಲಿಯ ಭಾರತ ಮಂಟಪದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಭೋಜನಕೂಟದಲ್ಲಿ ಜಾಗತಿಕ ನಾಯಕರು ಭಾರತದ ವಿಶಿಷ್ಟ ಸಿರಿಧಾನ್ಯ ಆಧಾರಿತ ಖಾದ್ಯಗಳನ್ನು ಸವಿದರು. ಸಾಂಪ್ರದಾಯಿಕ ಭಾರತೀಯ ಪಾಕಪದ್ಧತಿಗೆ ಒತ್ತು ನೀಡಿದ ಈ ಮೆನು, ಸಿರಿಧಾನ್ಯಗಳ ಮಹತ್ವವನ್ನು ವಿಶ್ವಕ್ಕೆ ಸಾರಿತು. ಪ್ರಧಾನಿ ಮೋದಿ ಭಾರತದ ಆಹಾರ ವೈವಿಧ್ಯತೆಯನ್ನು ಅತಿಥಿಗಳಿಗೆ ಪರಿಚಯಿಸಿದರು.
ನವದೆಹಲಿ, ಸೆಪ್ಟೆಂಬರ್ 13: ನವದೆಹಲಿಯ ಐತಿಹಾಸಿಕ ಭಾರತ ಮಂಟಪದಲ್ಲಿ ಆಯೋಜಿಸಲಾದ ಬ್ರಿಕ್ಸ್ ಶೃಂಗಸಭೆ 2026ರ ಭೋಜನಕೂಟದಲ್ಲಿ ಜಾಗತಿಕ ನಾಯಕರು ಭಾರತದ ಶ್ರೀಮಂತ ಸಾಂಪ್ರದಾಯಿಕ ಆಹಾರ ವೈವಿಧ್ಯತೆಯನ್ನು ಅನುಭವಿಸಿದರು.ಈ ವಿಶೇಷ ಭೋಜನಕೂಟದ ಪ್ರಮುಖ ಆಕರ್ಷಣೆಯೆಂದರೆ ಮೆನುವಿನಲ್ಲಿ ಸಿರಿಧಾನ್ಯಗಳಿಗೆ ನೀಡಿದ ಒತ್ತು.
ವ್ಲಾಡಿಮಿರ್ ಪುಟಿನ್, ಷಿ ಜಿನ್‌ಪಿಂಗ್ ಸೇರಿದಂತೆ ಹಲವು ಗಣ್ಯರು ಬ್ರಿಕ್ಸ್ ಸಮಾವೇಶಕ್ಕೆ ಆಗಮಿಸಿದ್ದು, ಅವರಿಗಾಗಿ ಆಯೋಜಿಸಲಾದ ಭರ್ಜರಿ ಭೋಜನವು ಸಿರಿಧಾನ್ಯಗಳಿಂದ ತಯಾರಿಸಿದ ವಿಶೇಷ ಖಾದ್ಯಗಳನ್ನು ಒಳಗೊಂಡಿತ್ತು. ಭಾರತದ ಈ ಸಾಂಪ್ರದಾಯಿಕ ಆಹಾರಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.
ಗುಜರಾತ್‌ನ ಪ್ರಸಿದ್ಧ ಖಾಂಡವಿ, ಮಿಲ್ಲೆ-ಫ್ಯೂಯಲ್, ಮಶ್ರೂಮ್ ಕಬಾಬ್, ಪನ್ನೀರ್ ಲಾಬ್ದಾರ್, ಮಿಲೆಟ್ ಪಲಾವ್, ಹಿಮಾಲಯದ ಮಶ್ರೂಮ್‌ನಿಂದ ತಯಾರಿಸಿದ ಗುಚ್ಚಿ ಮಾರ್ಮಿಕ್ ಮತ್ತು ಕ್ಯಾರೆಟ್ ಬೀನ್‌ನಂತಹ ವಿವಿಧ ಖಾದ್ಯಗಳನ್ನು ಅತಿಥಿಗಳಿಗೆ ಬಡಿಸಲಾಯಿತು. ಸಿಹಿ ಖಾದ್ಯಗಳಲ್ಲಿ ಜಿಲೇಬಿ ಮತ್ತು ಫ್ರೂಟ್ ಕ್ರೀಮ್ ಕೂಡ ಸೇರಿದ್ದವು. ಈ ಮೂಲಕ, ಬ್ರಿಕ್ಸ್ ಶೃಂಗಸಭೆಯು ಸಿರಿಧಾನ್ಯಗಳ ಜಾಗತಿಕ ಮಹತ್ವವನ್ನು ಸಾರಿತು. ಪ್ರಧಾನಿ ಮೋದಿ ಅವರು ಭಾರತದ ಆಹಾರ ವೈವಿಧ್ಯತೆಯನ್ನು ನಾಯಕರಿಗೆ ಪರಿಚಯಿಸಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

