ತಾಳಿ ಕಟ್ಟುತಿದ್ದಂತೆ ವಧುವನ್ನು ಪರೀಕ್ಷೆ ಕೇಂದ್ರಕ್ಕೆ ಕರೆತಂದ ವರ, ಮದುವೆ ಉಡುಗೆಯಲ್ಲೇ ಪರೀಕ್ಷೆ
ಶಿವಮೊಗ್ಗದ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ ಸತ್ಯವತಿ ಅವರು ಬೆಳಗ್ಗೆ ಮಾಂಗಲ್ಯಧಾರಣೆ ಮಾಡಿಸಿಕೊಂಡು ಬಳಿಕ ಸಿದಾ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದಿದ್ದಾರೆ. ಇನ್ನು ವಿಶೇಷವೆಂದರೆ ನವ ವರ ತನ್ನ ಹೆಂಡತಿಯನ್ನ ಪರೀಕ್ಷಾ ಕೇಂದ್ರದವರೆಗೆ ಬಂದು ಬಿಟ್ಟು ಹೋಗಿದ್ದಾರೆ. ನವವಧು ಪರೀಕ್ಷೆ ಬರೆದು ಮತ್ತೆ ಕಲ್ಯಾಣ ಮಂಟಪಕ್ಕೆ ತೆರಳಲಿದರು. ಪರೀಕ್ಷೆ ಮುಗಿದ ನಂತರ ಮುಂದಿನ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದ್ದಾರೆ.
ಶಿವಮೊಗ್ಗ, ಸೆ.10: ಮದುವೆ ಅಂದರೆ ಜೀವನದಲ್ಲಿ ಒಂದು ಬಾರಿ ಬರುವ ಅಮೃತ ಘಳಿಗೆ. ಹೀಗಾಗಿ ಮದುವೆ ದಿನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತೆ. ಅಲ್ಲದೆ ಮದುವೆಯ ಹಿಂದಿನ ಕೆಲ ದಿನಗಳು ಮತ್ತು ಮದುವೆಯ ದಿನದಂದು ದಂಪತಿಗೆ ಯಾವುದೇ ಇನ್ನಿತರ ಕೆಲಸಗಳನ್ನು ಮಾಡಲು ಬಿಡುವುದಿಲ್ಲ. ವಧು ಮಂಟಪದಿಂದ ಸೀದಾ ವರನ ಮನೆಗೆ ಕಾಲಿಡಬೇಕು ಎಂಬ ಸಂಪ್ರದಾಯವೂ ಕೆಲ ಕಡೆ ಇದೆ. ಆದರೆ ಇಲ್ಲೊಬ್ಬ ವಧು ಮದುವೆ ಮಂಟಪದಿಂದಲೇ ಪರೀಕ್ಷೆ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದಿದ್ದಾರೆ.
ಶಿವಮೊಗ್ಗದ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ ಸತ್ಯವತಿ ಅವರು ಬೆಳಗ್ಗೆ ಮಾಂಗಲ್ಯಧಾರಣೆ ಮಾಡಿಸಿಕೊಂಡು ಬಳಿಕ ಸಿದಾ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದಿದ್ದಾರೆ. ಇನ್ನು ವಿಶೇಷವೆಂದರೆ ನವ ವರ ತನ್ನ ಹೆಂಡತಿಯನ್ನ ಪರೀಕ್ಷಾ ಕೇಂದ್ರದವರೆಗೆ ಬಂದು ಬಿಟ್ಟು ಹೋಗಿದ್ದಾರೆ. ನವವಧು ಪರೀಕ್ಷೆ ಬರೆದು ಮತ್ತೆ ಕಲ್ಯಾಣ ಮಂಟಪಕ್ಕೆ ತೆರಳಲಿದರು. ಪರೀಕ್ಷೆ ಮುಗಿದ ನಂತರ ಮುಂದಿನ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದ್ದಾರೆ. ಇಂದು ಎಕನಾಮಿಕ್ಸ್ ಪರೀಕ್ಷೆ ಹಿನ್ನೆಲೆ ಪರೀಕ್ಷೆ ತಪ್ಪಿಸಿಕೊಳ್ಳಲಾಗದೆಂದು ತಾಳಿ ಕಟ್ಟು ತಿದ್ದಂತೆ ನವ ವರ ವಧುವನ್ನು ಕಮಲಾ ನೆಹರು ಕಾಲೇಜಿನ ಪರೀಕ್ಷೆ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದು ಪರೀಕ್ಷೆ ಮುಗಿಯುತ್ತಿದ್ದಂತೆ ವಾಪಾಸ್ ಮಂಟಪಕ್ಕೆ ಹೋಗಿ ಮುಂದಿನ ಶಾಸ್ತ್ರಗಳನ್ನು ಮಾಡಿದ್ದಾರೆ.
ಚೆನ್ನೈ ಮೂಲದ ಪ್ರಿಯಕರ ಫ್ರಾನ್ಸಿಸ್ ನೊಂದಿಗೆ ಸತ್ಯವತಿ ಅವರು ಮನೆಯಲ್ಲೇ ಸರಳ ವಿವಾಹವಾದರು. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಫ್ರಾನ್ಸಿಸ್, ಎಂಜಿನಯರ್ ಪದವೀಧರ. ಸೋಷಿಯಲ್ ಮೀಡಿಯಾ ಮೂಲಕ ಪರಿಚಯವಾದ ಇವರು ಇನ್ಸ್ಟಾಗ್ರಾಮ್ನಲ್ಲಿ ಎರಡು ವರ್ಷ ಚಾಟಿಂಗ್ ಮಾಡುತ್ತ ಪ್ರೀತಿಗೆ ಜಾರಿದ್ದರು. ಸದ್ಯ ಹಿರಿಯರಿಗೆ ಒಪ್ಪಿಸಿ ಸರಳ ವಿವಾಹವಾದರು.