ಪ್ರತಾಪ್ ಸಿಂಹ ಒಬ್ಬ ಪೊಲಿಟಿಕಲ್ ಟೆರರಿಸ್ಟ್: ಪ್ರೊ ಮಹೇಶ್‌ಚಂದ್ರ ಗುರು ವಾಗ್ದಾಳಿ
ಸಂಸದ ಪ್ರತಾಪ್ ಸಿಂಹ ನನ್ನ ಶಿಷ್ಯ. ಆತ ಒಬ್ಬ ಪೊಲಿಟಿಕಲ್ ಟೆರರಿಸ್ಟ್ ಎಂದು ಪ್ರೊ. ಮಹೇಶ್ ಚಂದ್ರ ಗುರು ವಾಗ್ದಾಳಿ ಮಾಡಿದ್ದಾರೆ. ನಗರದ ಮಾನಸ ಗಂಗೋತ್ರಿಯಲ್ಲಿ ನಡೆದ ಮಹಿಷ ದಸರಾ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪ್ರತಾಪ್ ಸಿಂಹ ವಿರುದ್ದ ಕಿಡಿಕಾರಿದ್ದಾರೆ.
ಮೈಸೂರು, ಸೆಪ್ಟೆಂಬರ್ 10: ಸಂಸದ ಪ್ರತಾಪ್ ಸಿಂಹ (Pratap Simha) ಒಬ್ಬ ಪೊಲಿಟಿಕಲ್ ಟೆರರಿಸ್ಟ್ ಎಂದು ಪ್ರೊ. ಮಹೇಶ್ ಚಂದ್ರ ಗುರು ವಾಗ್ದಾಳಿ ಮಾಡಿದ್ದಾರೆ. ನಗರದ ಮಾನಸ ಗಂಗೋತ್ರಿಯಲ್ಲಿ ನಡೆದ ಮಹಿಷ ದಸರಾ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪ್ರತಾಪ್ ಸಿಂಹ ನನ್ನ ಶಿಷ್ಯ. ಅವರ ತಂದೆ ಹರಿದ ಬಟ್ಟೆಯಲ್ಲಿ ನೋಡಲು ಬಂದಾಗ ತಂದೆಯನ್ನೇ ಜೀತದ ಆಳು ಎಂದಿದ್ದ. ಆ ಸಂದರ್ಭದಲ್ಲಿ ನಾನು ಥಳಿಸಿ ಬುದ್ದಿ ಹೇಳಿದ್ದೆ. ಪ್ರತಾಪ ಸಿಂಹ ಒಳ್ಳೆಯವರಿಗೆ ಹುಟ್ಟಿಲ್ಲ. ಈ ಸಮಯದಲ್ಲಿ ಪಾಪಿಗಳನ್ನು ಏಕೆ ನೆನೆಸಿಕೊಳ್ಳುವುದು ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos