G20 Summit 2023 Live: ದೆಹಲಿಯಲ್ಲಿ ನಡೆಯುತ್ತಿರುವ G20 ಶೃಂಗಸಭೆ 2023ರ ನೇರಪ್ರಸಾರ ಇಲ್ಲಿ ವೀಕ್ಷಿಸಿ
Delhi G20 Summit 2023: ದೆಹಲಿಯಲ್ಲಿ ಎರಡನೇ ದಿನದ ಜಿ20 ಶೃಂಗಸಭೆ ನಡೆಯುತ್ತಿದೆ. ಬೆಳಗ್ಗೆ 8.15ಕ್ಕೆ ರಾಜ್‌ಘಾಟ್‌ಗೆ ಅತಿಥಿಗಳು ತೆರಳಲಿದ್ದು ನಮನ ಸಲ್ಲಿಸಲಿದ್ದಾರೆ. ಇನ್ನು ಬೆಳಗ್ಗೆ 9ರಿಂದ 9.20ರವರೆಗೆ ಮಹತ್ಮ ಗಾಂಧಿ ಸಮಾಧಿಗೆ ಅತಿಥಿಗಳು ನಮನ ಸಲ್ಲಿಸಿ ಮಹಾತ್ಮ ಗಾಂಧಿ ಸಮಾಧಿ ಬಳಿ ಶಾಂತಿ ಗೀತೆ ಗಾಯನದಲ್ಲಿ ಭಾಗಿಯಾದ್ರು.
ಬಹು ನಿರೀಕ್ಷಿತ G20 ಶೃಂಗಸಭೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಜಿ20 ಶೃಂಗಸಭೆಯ ಎರಡನೇ ದಿನದಂದು ರಾಜ್ಘಾಟ್ನಲ್ಲಿರುವ ಮಹಾತ್ಮ ಗಾಂಧಿ ಸಮಾಧಿಗೆ ಜಿ20 ನಾಯಕರು ನಮನ ಸಲ್ಲಿಸುತ್ತಿದ್ದಾರೆ. ಯುಕೆ ಪಿಎಂ ರಿಷಿ ಸುನಕ್, ಯುಎಸ್ ಅಧ್ಯಕ್ಷ ಜೋ ಬಿಡೆನ್, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಜಪಾನ್ ಪಿಎಂ ಫ್ಯೂಮಿಯೊ ಕಿಶಿಡಾ, ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್ ಯೋಲ್, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್, ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ರಾಜ್‌ಘಾಟ್‌ಗೆ ಆಗಮಿಸಿದ್ದಾರೆ. ಜಿ20 ಶೃಂಗಸಭೆಯ ಲೈವ್ ಇಲ್ಲಿ ವೀಕ್ಷಿಸಿ
Latest Videos