ಹಿಜಾಬ್ ಧರಿಸಿ ಬಿ ಎಸ್ಸಿ ನರ್ಸಿಂಗ್ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಬ್ರಿಮ್ಸ್ ಅನುಮತಿ ನಿರಾಕರಿಸಿತು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 11, 2022 | 10:50 PM

ಅಧಿಕಾರಿಗಳು ಕೋರ್ಟಿನ ಮೌಖಿಕ ಅದೇಶದ ಮೇರೆಗೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ್ದಾರೆ. ಸರ್ಕಾರ ಆದೇಶ ಹೊರಡಿಸುವವರೆಗೆ ಅವರು ಕಾಯಬೇಕಿತ್ತು. ಬೇರೆ ಸಂದರ್ಭದಲ್ಲಾಗಿದ್ದರೆ ಅವರು ಕೋರ್ಟಿನ ಆದೇಶವನ್ನು ಕಾರ್ಯರೂಪಕ್ಕೆ ತರಲು ವರ್ಷಗಳನ್ನು ತೆಗೆದುಕೊಳ್ಳುತ್ತಾರೆ, ಎಂದು ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಬೀದರ್ ಜಿಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆ (Bidar Institute of Medical Sciences) ಹಿಜಾಬ್ (Hijab) ಧರಿಸಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ (examination centre) ಬಂದ ವಿದ್ಯಾರ್ಥಿನಿಯರಿಗೆ ಅವಕಾಶ ನೀಡದೆ ಸುದ್ದಿಯಲ್ಲಿದೆ. ಫೆಬ್ರುವರಿ 10ರಂದು ಬಿಎಸ್ಸಿ ನರ್ಸಿಂಗ್ ಪರೀಕ್ಷೆ ಬರೆಯಲು ಹಿಜಾಬ್ ಧರಿಸಿ ಬಂದಿದ್ದ ಸುಮಾರು ಹತ್ತು ವಿದ್ಯಾರ್ಥಿನಿಯರಿಗೆ ಬ್ರಿಮ್ಸ್ ಅಧಿಕಾರಿಗಳು ಪರೀಕ್ಷಾ ಕೋಣೆಯೊಳಗೆ ಹೋಗಲು ಬಿಟ್ಟಿಲ್ಲ. ಬ್ರಿಮ್ಸ್ ನಿರ್ದೇಶಕ ಚಂದ್ರಕಾಂತ ಚಿಲ್ಲರಗಿ ಅವರು ಸಂಸ್ಥೆಯ ಸಿಬ್ಬಂದಿ ರಾಜ್ಯ ಹೈಕೋರ್ಟ್ ಫೆಬ್ರುವರಿ 10 ರಂದು ನೀಡಿದ ಮೌಖಿಕ ಆದೇಶವನ್ನು ಪಾಲಿಸಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿದರು. ಬೀದರ ಮುಸ್ಲಿಂ ಸಮುದಾಯದ ಜನ ಬ್ರಿಮ್ಸ್ ಸಂಸ್ಥೆಯ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು ಅಧಿಕಾರಿಗಳು ಅವಸರದ ದೋರಣೆ ಅನುಸರಿಸುತ್ತಿದ್ದಾರೆ ಎಂದಿದ್ದಾರೆ. ಅಧಿಕಾರಿಗಳು ಕೋರ್ಟಿನ ಮೌಖಿಕ ಅದೇಶದ ಮೇರೆಗೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ್ದಾರೆ. ಸರ್ಕಾರ ಆದೇಶ ಹೊರಡಿಸುವವರೆಗೆ ಅವರು ಕಾಯಬೇಕಿತ್ತು. ಬೇರೆ ಸಂದರ್ಭದಲ್ಲಾಗಿದ್ದರೆ ಅವರು ಕೋರ್ಟಿನ ಆದೇಶವನ್ನು ಕಾರ್ಯರೂಪಕ್ಕೆ ತರಲು ವರ್ಷಗಳನ್ನು ತೆಗೆದುಕೊಳ್ಳುತ್ತಾರೆ, ಎಂದು ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿರುವವರಿಗೆ ಶುಕ್ರವಾರ ಪರೀಕ್ಷೆ ಇರಲಿಲ್ಲ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಅವರ ಮುಂದಿನ ಪರೀಕ್ಷೆ ಮಂಗಳವಾರ ಇದೆ.

ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ರಾಜ್ಯ ಹೈಕೋರ್ಟ್ ತಾನು ತೀರ್ಪು ನೀಡದವರೆಗೆ ಧಾರ್ಮಿಕತೆಯನ್ನು ಪ್ರತಿಬಿಂಬಿಸುವ ಯಾವುದೇ ಬಗೆಯ ಉಡುಪುಗಳನ್ನು ಧರಿಸಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಬಾರದು ಎಂದು ಮಧ್ಯಂತರ ಆದೇಶವನ್ನು ಗುರುವಾರ ನೀಡಿದೆ.

ಇದನ್ನೂ ಓದಿ:   ವಿಧಾನಸಭಾ ಚುನಾವಣೆ ಗಮನದಲ್ಲಿರಿಸಿ ಹಿಜಾಬ್ ವಿವಾದ ಸೃಷ್ಟಿಸಲಾಗಿದೆ: ಎಸ್​ಡಿಪಿಐನ ಅತಾವುಲ್ಲಾ ಜೋಕಟ್ಟೆ ಹೇಳಿಕೆ