ಹಿಜಾಬ್ ವಿವಾದ ಕಾಂಗ್ರೆಸ್-ಎಸ್ ಡಿಪಿಐ-ಕಮ್ಯುನಿಸ್ಟ್ ಪಕ್ಷ ಒಕ್ಕೂಟದ ಕುತಂತ್ರ ಎಂದರು ನಳಿನ್ ಕುಮಾರ್ ಕಟೀಲ್

ಹಿಜಾಬ್ ವಿವಾದ ಕಾಂಗ್ರೆಸ್-ಎಸ್ ಡಿಪಿಐ-ಕಮ್ಯುನಿಸ್ಟ್ ಪಕ್ಷ ಒಕ್ಕೂಟದ ಕುತಂತ್ರ ಎಂದರು ನಳಿನ್ ಕುಮಾರ್ ಕಟೀಲ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 12, 2022 | 4:15 PM

ಹಿಜಾಬ್ ವಿವಾದವನ್ನು ಶಾಂತಿಪೂರ್ಣವಾಗಿ ಬಗೆಹರಿಸಬೇಕಿದೆ. ರಾಜ್ಯ ಹೈಕೋರ್ಟ್ ಅಂತಿಮ ತೀರ್ಪು ನೀಡುವವರೆಗೆ ಧಾರ್ಮಿಕತೆಯನ್ನು ಬಿಂಬಸುವ ವಸ್ತ್ರಗಳನ್ನು ಧರಿಸಿ ವಿದ್ಯಾರ್ಥಿಗಳು ಶಾಲೆಗೆ ಹೋಗಬಾರದೆಂದು ಹೇಳಿದ್ದು ರಾಜ್ಯ ಬಿಜೆಪಿ ಸರ್ಕಾರ ಅದನ್ನು ಪಾಲಿಸುತ್ತಿದೆ ಎಂದು ಕಟೀಲ್ ಹೇಳಿದರು.

ಹಿಜಾಬ್ ವಿವಾದ (hijab row) ಪ್ರಕರಣ ಅಂತ್ಯಗೊಳ್ಳುವ ಲಕ್ಷಣಗಳು ಕಾಣುತ್ತಿವೆಯಾದರೂ ರಾಜಕೀಯ ಪಕ್ಷಗಳು ಪರಸ್ಪರ ದೂಷಿಸುವ ಕೆಲಸ ನಿಲ್ಲಿಸುವ ಸೂಚನೆಗಳು ಮಾತ್ರ ಕಾಣುತ್ತಿಲ್ಲ. ಟಿವಿ9 ವರದಿಗಾರರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರನ್ನು ಶನಿವಾರ ಬೆಂಗಳೂರಿನಲ್ಲಿ ಮಾತಾಡಿಸಿದಾಗ, ಸದರಿ ಪ್ರಕರಣವು ರಾಷ್ಟ್ರ ಮತ್ತು ಅಂತರರಾಷ್ತ್ರೀಯ ಮಟ್ಟದಲ್ಲಿ ಚರ್ಚೆಯಾಗುವಂತಾಗಲು ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ಎಸ್ ಡಿ ಪಿ ಐಗಳು (SDPI) ಸೇರಿ ನಡೆಸಿದ ಕುತಂತ್ರವೇ ಕಾರಣವೆಂದು ಹೇಳಿದರು. ಇದು ನಿಸ್ಸಂದೇಹವಾಗಿ ಪೂರ್ವ-ನಿಯೋಜಿತ ಕೃತ್ಯವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಕಾರಣ ಅದನ್ನು ಅಸ್ಥಿರಗೊಳಿಸಲು ಮತ್ತು ರಾಜ್ಯದಲ್ಲಿ ಅತಂತ್ರ ಸ್ಥಿತಿ ತಲೆದೋರುವಂತಾಗಲು ಈ ಮೂರು ಪಕ್ಷಗಳ ಒಕ್ಕೂಟ ಪ್ರಯತ್ನಿಸುತ್ತಿದೆ ಎಂದು ಕಟೀಲ್ ಹೇಳಿದರು.

ಮುಂದುವರಿದು ಮಾತಾಡಿದ ಕಟೀಲ್ ಅವರು, ಯಾವುದೋ ಒಂದು ಶಾಲೆಯಲ್ಲಿ ಶನಿವಾರದಂದು ಮುಸ್ಲಿಂ ಸಮುದಾಯದ ಕೆಲ ಮಕ್ಕಳು ನಮಾಜ್ ಮಾಡಿರುವ ಘಟನೆ ವರದಿಯಾಗಿದೆ, ಇದು ಮಕ್ಕಳು ಮಾಡುವ ಕೆಲಸವಲ್ಲ, ಶಾಲೆಗೆ ಹೋದ ಮೇಲೆ ನಮಾಜ್ ಮಾಡಿ ಅಂತ ಯಾರೋ ಅವರ ತಲೆಯಲ್ಲಿ ತುಂಬಿ ಕಳಿಸಿದ್ದಾರೆ. ಮುಗ್ಧ ಮಕ್ಕಳನ್ನು ಹೇಗೆಲ್ಲ ಬಳಸಿಕೊಳ್ಳಲಾಗುತ್ತಿದೆ ಅನ್ನೋದನ್ನು ನಾವು ಗಮನಿಸಬೇಕಿದೆ. ಶಾಲೆಗೆ ಎಲ್ಲ ಧರ್ಮದ ಮಕ್ಕಳು ಬರುತ್ತಾರೆ, ಅದು ಸರಸ್ವತಿಯ ದೇಗುಲ, ಆದರೆ ಶಾಲೆಯ ಪಾವಿತ್ರ್ಯವನ್ನು ಹಾಳು ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಟೀಲ್ ಹೇಳಿದರು.

ಹಿಜಾಬ್ ವಿವಾದವನ್ನು ಶಾಂತಿಪೂರ್ಣವಾಗಿ ಬಗೆಹರಿಸಬೇಕಿದೆ. ರಾಜ್ಯ ಹೈಕೋರ್ಟ್ ಅಂತಿಮ ತೀರ್ಪು ನೀಡುವವರೆಗೆ ಧಾರ್ಮಿಕತೆಯನ್ನು ಬಿಂಬಸುವ ವಸ್ತ್ರಗಳನ್ನು ಧರಿಸಿ ವಿದ್ಯಾರ್ಥಿಗಳು ಶಾಲೆಗೆ ಹೋಗಬಾರದೆಂದು ಹೇಳಿದ್ದು ರಾಜ್ಯ ಬಿಜೆಪಿ ಸರ್ಕಾರ ಅದನ್ನು ಪಾಲಿಸುತ್ತಿದೆ ಎಂದು ಕಟೀಲ್ ಹೇಳಿದರು. ಶಾಲೆಗಳಲ್ಲಿ ಪ್ರತ್ಯೇಕತೆ ಬೇಡ, ಶಾಲೆಗಳಿಗೆ ಎಲ್ಲ ಧರ್ಮದ ಮಕ್ಕಳು ಅವರಲ್ಲಿ ಸಮಾನತೆಯ ಭಾವ ಮೂಡಲು ಸಮವಸ್ತ್ರಗಳು ನೆರವಾಗುತ್ತವೆ, ನಮ್ಮ ಸರ್ಕಾರದ ನಿಲುವು ಕೂಡ ಇದೇ ಆಗಿದೆ ನಳಿನ್ ಕುಮಾರ್ ಕಟೀಲ್ ಹೇಳಿದರು.

ಇದನ್ನೂ ಓದಿ:   Hijab Row: ‘ಹಿಜಾಬ್ ವಿವಾದದ ಕುರಿತು ವಿದೇಶಗಳ ಪ್ರೇರೇಪಿತ ಹೇಳಿಕೆಗಳನ್ನು ಸ್ವಾಗತಿಸುವುದಿಲ್ಲ’- ವಿದೇಶಾಂಗ ಸಚಿವಾಲಯ