ರಾಮನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು ಉಸ್ತುವಾರಿ ಸಚಿವ ಡಾ ಅಶ್ವಥ್ ನಾರಾಯಣಗೌಡ

ರಾಮನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು ಉಸ್ತುವಾರಿ ಸಚಿವ ಡಾ ಅಶ್ವಥ್ ನಾರಾಯಣಗೌಡ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 11, 2022 | 8:52 PM

ರಾಮನಗರದ ಅಭಿವೃದ್ಧಿ ಯೋಜನೆಗಳು ಶೇಕಡಾ 100 ರಷ್ಟು ಅನುಷ್ಠಾನಕ್ಕೆ ತರುವ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಲಾಯಿತು ಮತ್ತು ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ಅಧಿಕಾರಿಗಳ ಶ್ರಮವನ್ನು ಶ್ಲಾಘಿಸಲಾಯಿತು, ಲೋಪಗಳು ಕಂಡುಬಂದ ಕಡೆ ಜಾಗ್ರತೆಯಿಂದ ಕೆಲಸ ಮಾಡಲ ಸಲಹೆ ನೀಡಲಾಯಿತು ಎಂದು ಸಚಿವರು ಹೇಳಿದರು.

ಉನ್ನತ ಶಿಕ್ಷಣ (Higher Education) ಮತ್ತು ರಾಮನಗರ ಜಲ್ಲಾ ಉಸ್ತುವಾರಿ ಸಚಿವ (Ramanagar district in chare minister) ಡಾ ಸಿ ಎನ್ ಅಶ್ವಥ್ ನಾರಾಯಣ ಗೌಡ (Dr CN Ashwath Narayangowda) ಅವರು ಶುಕ್ರವಾರ ರಾಮನಗರನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಸಚಿವರು ಜಿಲ್ಲೆಯ ಎಲ್ಲ ಇಲಾಖೆಗಳ ನಿಗದಿತ ಕಾರ್ಯಕ್ರಮಗಳ ಪ್ರಗತಿಯನ್ನು ಪರಿಶೀಲಿಸಲಾಯಿತು ಮತ್ತು ಅವುಗಳ ಪ್ರಗತಿ ಎಷ್ಟರಮಟ್ಟಿಗೆ ಆಗಿದೆ, ಕೆಲಸದಲ್ಲಿ ಯಾವುದಾದರೂ ಅಡಚಣೆ ಎದುರಾಗುತ್ತಿದೆಯೇ ಮುಂತಾದ ವಿಷಯಗಳ ಬಗ್ಗೆ ಸ್ಪಷ್ಟತೆಯನ್ನು ಪಡೆದುಕೊಳ್ಳಲಾಯಿತು ಎಂದು ಹೇಳಿದರು. ಜಾರಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ಚುರುಕುಗೊಳಸಿ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ನಿಶ್ಚಯಿಸಲಾಯಿತು. ರಾಮನಗರದ ಅಭಿವೃದ್ಧಿ ಯೋಜನೆಗಳು ಶೇಕಡಾ 100 ರಷ್ಟು ಅನುಷ್ಠಾನಕ್ಕೆ ತರುವ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಲಾಯಿತು ಮತ್ತು ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ಅಧಿಕಾರಿಗಳ ಶ್ರಮವನ್ನು ಶ್ಲಾಘಿಸಲಾಯಿತು, ಲೋಪಗಳು ಕಂಡುಬಂದ ಕಡೆ ಜಾಗ್ರತೆಯಿಂದ ಕೆಲಸ ಮಾಡಲ ಸಲಹೆ ನೀಡಲಾಯಿತು ಎಂದು ಸಚಿವರು ಹೇಳಿದರು.

ಹಿಜಾಬ್ ವಿವಾದ ಕುರಿತಂತೆ ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶವೊಂದನ್ನು ನೀಡಿರುವುದರಿಂದ ಕಾನೂನು ಸುವ್ಯವಸ್ಥೆಯನ್ನು ನೋಡಿಕೊಂಡು ಹಂತಹಂತವಾಗಿ ಶಾಲೆಗಳನ್ನು ಪ್ರಾರಂಭಿಸುವ ಆದೇಶ ನೀಡುವುದಾಗಿ ಸಚಿವರು ಹೇಳಿದರು.

ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆಯಾ ಜಿಲ್ಲೆಗಳಲ್ಲಿನ ಸ್ಥಿತಿಗತಿ ನೋಡಿಕೊಂಡು, ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಒಂದು ನಿರ್ಣಯಕ್ಕೆ ಬರಲಾಗುವುದು ಮತ್ತು ಅದಷ್ಟು ಬೇಗ ಕಾಲೇಜುಗಳನ್ನು ಪ್ರಾರಂಭಿಸುವ ಪ್ರಯತ್ನ ಮಾಡಲಾಗುವುದು ಅಂತ ಸಚಿವ ಡಾ ಅಶ್ವಥ್ ನಾರಾಯಣಗೌಡ ಹೇಳಿದರು.

ಇದನ್ನೂ ಓದಿ:   ರಾಮನಗರದಲ್ಲಿ 3 ವರ್ಷದಿಂದ ಮಲಗಿದ್ದವರು ಈಗ ರಾಜಕೀಯ ಮಾಡ್ತಿದ್ದಾರೆ: ಡಿಕೆ ಬ್ರದರ್ಸ್​ಗೆ ಕುಟುಕಿದ ಹೆಚ್​ಡಿ ಕುಮಾರಸ್ವಾಮಿ
.