ಇಂದಿರಾನಗರದ ಗೂಂಡಾ ಮತ್ತು ಬ್ಯಾಟಿಂಗ್ ಮೇಸ್ಟ್ರೋ ದ್ರಾವಿಡ್ ಕೋಚಿಂಗ್ ಬಿಟ್ಟು ಕನ್ನಡದ ಮೇಷ್ಟ್ರಾಗಿದ್ದು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 10, 2021 | 8:22 PM

ಎಲ್ಲಿಸ್ ಸೋಮವಾರದಂದು ಬೆಂಗಳೂರಿಗೆ ಬಂದಿದ್ದಾಗ ಇಂದಿರಾನಗರದಲ್ಲಿ ರಾಹುಲ್ ದ್ರಾವಿಡ್ ಅವರನ್ನು ಭೇಟಿಯಾದರು. ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿನ ಒಂದು ವಿಶಿಷ್ಟ ಆಯಾಮ ಕಡೆ ಗಮನ ಹರಿಸುವುದು ಎಲ್ಲಿಸ್ಅವರ ಜಾಯಾಮಾನ ಅಂತ ಕಾಣುತ್ತದೆ

 

ಕೋಚಿಂಗ್ ಬಿಟ್ಟು ಟೀಚಿಂಗ್ ವೃತ್ತಿಗಿಳಿದ್ರಾ ರಾಹುಲ್ ದ್ರಾವಿಡ್? ಗಾಬರಿಯಾಗುವ ಸಂಗತಿ ತಾನೆ? ಎರಡು-ಮೂರು ತಿಂಗಳು ನಂತರ ಭಾರತದ ಸೀನಿಯರ್ ಟೀಮಿನ ಕೋಚ್ ಆಗಲಿದ್ದಾರೆ ಎಂಬ ನಿರೀಕ್ಷೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯಲ್ಲಿರುವುದರಿಂದ ದ್ರಾವಿಡ್ಗೆ ಯಾಕೆ ನಿರ್ಧಾರ ತೆಗೆದುಕೊಂಡರು ಅನಿಸೋದು ಸಹಜವೇ. ಆದರೆ, ಅಭಿಮಾನಿಗಳಿ ಖಂಡಿತವಾಗಿಯೂ ಗಾಬರಿಯಾಗಬೇಕಿಲ್ಲ. ಅವರು ಟೀಚರ್ ಅದೂ ಕನ್ನಡದ ಟೀಚರ್ ಅಗಿದ್ದು ಕೇವಲ ಒಬ್ಬ ವ್ಯಕ್ತಿಗೆ ಮಾತ್ರ. ಭಾರತದ ಬ್ರಿಟಿಷ್ ರಾಯಭಾರಿ ಅಲೆಕ್ಸ್ ಎಲ್ಲಿಸ್ ಜಾಲಿ ಸ್ವಭಾವದ ವ್ಯಕ್ತಿಯಾಗಿದ್ದಾರೆ. ಬೇರೆ ಡಿಪ್ಲೊಮ್ಯಾಟ್ ರೀತಿ ಯಾವಾಗಲೂ ಗಂಭೀರವಾದ ಮುಖಮುದ್ರೆ ಹೊಂದದೆ, ಎಲ್ಲರೊಂದಿಗೆ ಸುಲಭವಾಗಿ ಬೆರೆಯುತ್ತಾ, ತಮಾಷೆ ಮಾಡುತ್ತಿರುತ್ತಾರೆ. ಮೊನ್ನೆ ಅವರು ಮೈಸೂರಿನಲ್ಲಿ ದೋಸೆ ತಿಂದಿದ್ದು ನಿಮಗೆ ನೆನಪಿದೆಯಲ್ವಾ?

ಸರಿ, ಎಲ್ಲಿಸ್ ಸೋಮವಾರದಂದು ಬೆಂಗಳೂರಿಗೆ ಬಂದಿದ್ದಾಗ ಇಂದಿರಾನಗರದಲ್ಲಿ ರಾಹುಲ್ ದ್ರಾವಿಡ್ ಅವರನ್ನು ಭೇಟಿಯಾದರು. ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿನ ಒಂದು ವಿಶಿಷ್ಟ ಆಯಾಮ ಕಡೆ ಗಮನ ಹರಿಸುವುದು ಎಲ್ಲಿಸ್ಅವರ ಜಾಯಾಮಾನ ಅಂತ ಕಾಣುತ್ತದೆ. ಮೈಸೂರಿನಲ್ಲಿ ಕೈಯಿಂದ ದೋಸೆ ತಿನ್ನುವುದನ್ನು ಕಲಿತ ಅವರಿಗೆ ಬೆಂಗಳೂರಿನಲ್ಲಿ ಕನ್ನಡ ಪದ ಕಲಿಯುವ ಆಸೆ ಹುಟ್ಟಿತು. ಹಾಗಾಗೇ ಕೋಚ್ ಅವರನ್ನು ಟೀಚರ್ ಮಾಡಿಕೊಂಡರು.

ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ ಜಾರಿಯಲ್ಲಿರುವುದರಿಂದ ಕ್ರಿಕೆಟ್ ಪದವನ್ನೇ ತನಗೆ ಕಲಿಸಬೇಕೆಂದು ಅವರು ದ್ರಾವಿಡ್ಗೆ ದುಂಬಾಲು ಬಿದ್ದರು. ರನ್ ಕದಿಯಬೇಕಾದರೆ ನಿಮ್ಮ ಜೊತೆ ಆಟಗಾರನಿಗೆ ಏನು ಹೇಳ್ತೀರಿ ಅಂತ ಅವರು ಕೇಳಿದಾಗ ಕನ್ನಡಿಗೆ ದ್ರಾವಿಡ್ ‘ಬೇಗ ಓಡಿ’ ಅಂತ ಹೇಳಿದರು. ಆ ಎರಡು ಪದಗಳನ್ನು ಕನ್ನಡದಲ್ಲಿ ಉಚ್ಛರಿಸಿದ ನಂತರ ಎಲ್ಲಿಸ್ ಅವರು ಇಂಗ್ಲಿಷ್​ಗೂ ತರ್ಜುಮೆ ಮಾಡಿದರು.

ಈ ದೃಶ್ಯ ಬಹಳ ಸುಂದರವಾಗಿದೆ ಮತ್ತು ಮನಸ್ಸಿಗೆ ಮುದ ನೀಡುತ್ತದೆ. ನೀವೇ ನೋಡಿ.

ಇದನ್ನೂ ಓದಿ: Viral Video: ಗಾಳಿಯಲ್ಲಿ ತೇಲುತ್ತಿರುವ ಮಗುವನ್ನು ಕಂಡು ಗಾಬರಿಗೊಂಡ ತಾಯಿ! ಮುಂದೇನಾಯ್ತು? ವಿಡಿಯೋ ನೋಡಿ