ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಿ ದುರಂತ ಅಂತ್ಯಕಂಡ ಸಹೋದರರು

Updated By: ರಮೇಶ್ ಬಿ. ಜವಳಗೇರಾ

Updated on: Oct 26, 2025 | 4:04 PM

ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನು ಕಾಪಾಡಲು ಹೋದ ಇಬ್ಬರು ಸಹೋದರರು ನೀರು ಪಾಲಾಗಿರುವ ಘಟನೆ ಮೈಸೂರಿನ ಬಡಗಲಹುಂಡಿಯ ಉಪನಾಲೆಯಲ್ಲಿ ನಡೆದಿದೆ. ಬಡಗಲಹುಂಡಿ ಗ್ರಾಮದ ರಮೇಶ್ ಮಗನಾದ ನವವಿವಾಹಿತ ನಂದನ್ (25), ರಮೇಶ್ ಸಹೋದರನ ಪುತ್ರ ರಾಕೇಶ್ (20) ಜೀವ ಕಳೆದುಕೊಂಡವರು. ಈ ಇಬ್ಬರು ಸಹೋದರರ ಮಕ್ಕಳು ಆಗಿದ್ದಾರೆ.

ಮೈಸೂರು, (ಅಕ್ಟೋಬರ್ 26): ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನು ಕಾಪಾಡಲು ಹೋದ ಇಬ್ಬರು ಸಹೋದರರು ನೀರು ಪಾಲಾಗಿರುವ ಘಟನೆ ಮೈಸೂರಿನ ಬಡಗಲಹುಂಡಿಯ ಉಪನಾಲೆಯಲ್ಲಿ ನಡೆದಿದೆ. ಬಡಗಲಹುಂಡಿ ಗ್ರಾಮದ ರಮೇಶ್ ಮಗನಾದ ನವವಿವಾಹಿತ ನಂದನ್ (25), ರಮೇಶ್ ಸಹೋದರನ ಪುತ್ರ ರಾಕೇಶ್ (20) ಜೀವ ಕಳೆದುಕೊಂಡವರು. ಈ ಇಬ್ಬರು ಸಹೋದರರ ಮಕ್ಕಳು ಆಗಿದ್ದಾರೆ. ಮಂಜು ಎನ್ನುವ ಬಾಲಕ ವರಣ ನಾಲೆಯಲ್ಲಿ ಈಜಲು ಹೋಗಿದ್ದ. ಈ ವೇಳೆ ನೀರಿನಲ್ಲಿ ಮಂಜು ಮುಳುಗುತ್ತಿರುವುದನ್ನು ಸಹೋದರರಿರಬ್ಬರು ನೋಡಿದ್ದರು. ಗೊಬ್ಬರ ತೆಗೆದುಕೊಂಡು ನಾಲೆಯ ಮೇಲ್ಭಾಗದಲ್ಲಿ ಹೋಗುತ್ತಿದ್ದ ಸಹೋದರರು ತಕ್ಷಣ ನೀರಿಗೆ ಹಾರಿ ಮುಳುಗುತ್ತಿದ್ದವನನ್ನ ರಕ್ಷಣೆ ಮಾಡಿದ್ದಾರೆ. ಆದರೆ ದುರದೃಷ್ಟವಶಾತ್ ನಂದನ್ ಹಾಗೂ ರಾಕೇಶ್ ನೀರು ಪಾಲಾಗಿದ್ದಾರೆ. ಮೃತ ನಂದನ್, ರಾಕೇಶ್ ಇಬ್ಬರೂ ಅಣ್ಣ-ತಮ್ಮಂದಿರ ಮಕ್ಕಳಾಗಿದ್ದು ಸಂಬಂಧದಲ್ಲಿ ಸಹೋದರರಾಗಿದ್ದರು. ಇದೀಗ ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.