Karnataka Budget 2024: ರೈತ ವಿರೋಧಿ, ಅಭಿವೃದ್ಧಿ ಶೂನ್ಯ ಮತ್ತು ರಾಜ್ಯವನ್ನು 20 ವರ್ಷ ಹಿಂದಕ್ಕೆ ಒಯ್ಯುವ ಬಜೆಟ್: ಬಿವೈ ವಿಜಯೇಂದ್ರ
Karnataka Budget 2024: ಕೇವಲ ತಮ್ಮ ಜವಾಬ್ದಾರಿಗಳಿಂದ ನುಣಚಿಕೊಳ್ಳಲು ನಿಷ್ಪ್ರಯೋಜಕ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ, ಆಯವ್ಯಯ ಪಟ್ಟಿಗೆ ಇರುವ ಪಾವಿತ್ರ್ಯತೆ ಹಾಳುಮಾಡಿದ್ದಾರೆ ಎಂದ ವಿಜಯೇಂದ್ರ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸದೆ ಅವರಿಗೆ ನೀಡಿದ್ದ ಭರವಸೆಯನ್ನು ಗಾಳಿಗೆ ತೂರಿದ್ದಾರೆ ಎಂದರು.
ಬೆಂಗಳೂರು: ರಾಜಕಾರಣದಲ್ಲಿ ಅಪಾರ ಅನುಭವ ಇರುವ ಮತ್ತು ತಮ್ಮ ರಾಜಕೀಯ ಬದುಕಿನ 15 ನೇ ಬಜೆಟ್ ಮಂಡಿಸಿದ ಒಬ್ಬ ಮುಖ್ಯಮಂತ್ರಿ ಇಷ್ಟು ಕೆಟ್ಟ ಬಜೆಟ್ ಮಂಡನೆ ಮಾಡಿಯಾರು ಅಂತ ಯಾರೂ ನಿರೀಕ್ಷಿಸಿರಲಿಲ್ಲ ಎಂದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹೇಳಿದರು. ವಿಧಾನಸೌಧದ ಬಳಿ ಮಾಧ್ಯಮಗಳನ್ನುದ್ದೇಶಿಸಿ ಮಾತಾಡಿದ ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಂಡಿಸಿರುವ ಬಜೆಟ್ ರೈತ ವಿರೋಧಿ (anti-farmer), ಅಭಿವೃದ್ಧಿ ಶೂನ್ಯ ಬಜೆಟ್ ಅಗಿದೆ, ಬಜೆಟ್ ಪ್ರಸ್ತಾವನೆಗಳಲ್ಲಿ ಯುವಕರಿಗೆ ಮತ್ತು ಮಹಿಳೆಯರಿಗೆ ಯಾವುದೇ ಯೋಜನೆಗಳಿಲ್ಲ, ಇಂಥ ಬಜೆಟ್ ಮಂಡಿಸುವ ಮೂಲಕ ಸಿದ್ದರಾಮಯ್ಯ ರಾಜ್ಯವನ್ನು 20 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆ ಎಂದು ವಿಜಯೇಂದ್ರ ಹೇಳಿದರು. ಕೇವಲ ತಮ್ಮ ಜವಾಬ್ದಾರಿಗಳಿಂದ ನುಣಚಿಕೊಳ್ಳಲು ನಿಷ್ಪ್ರಯೋಜಕ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ, ಆಯವ್ಯಯ ಪಟ್ಟಿಗೆ ಇರುವ ಪಾವಿತ್ರ್ಯತೆ ಹಾಳುಮಾಡಿದ್ದಾರೆ ಎಂದ ವಿಜಯೇಂದ್ರ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸದೆ ಅವರಿಗೆ ನೀಡಿದ್ದ ಭರವಸೆಯನ್ನು ಗಾಳಿಗೆ ತೂರಿದ್ದಾರೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ