ಪ್ರಾಣಿ ಬೇಟೆಗೆ ಇಟ್ಟಿದ್ದ ನಾಡ ಬಾಂಬ್ ತಿಂದ ಎಮ್ಮೆ ಬಾಯಿ ಛಿದ್ರ..ನರಳಿ ನರಳಿ ಪ್ರಾಣಬಿಟ್ಟಿತು

Updated on: Feb 04, 2025 | 3:59 PM

ಹಸುಗಳ ಮೇಲೆ ದಾಳಿ ಪ್ರಕರಣ ಬೆನ್ನಲ್ಲೇ ಇದೀಗ ಪ್ರಾಣಿ ಬೇಟೆಗೆ ಇಟ್ಟಿದ್ದ ನಾಡ ಬಾಂಬ್ ತಿಂದ ಎಮ್ಮೆ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಹುಲ್ಲು ಮೇಯುತ್ತಿದ್ದಾಗ ನಾಡಬಾಂಬ್ ತಿಂದಿದೆ. ಆ ವೇಳೆ ಬಾಯಲ್ಲೇ ನಾಡಬಾಂಬ್ ಸ್ಫೋಟಗೊಂಡಿದ್ದು, ಬಾಯಿ ಛಿದ್ರ ಛಿದ್ರವಾಗಿದೆ. ಬಳಿಕ ನರಳಿ ನರಳಿ ಪ್ರಾಣ ಬಿಟ್ಟಿದೆ. ಈ ಬಗ್ಗೆ ದುಷ್ಕರ್ಮಿಗಳ ವಿರುದ್ಧ ಕ್ರಮವಾಗಬೇಕೆಂದು ಜನರು ಒತ್ತಾಯಿಸಿದ್ದಾರೆ.

ಹಾವೇರಿ, (ಫೆಬ್ರವರಿ 04): ಕಾಡುಹಂದಿ ಬೇಟೆಯಾಡಲು ಇಟ್ಟಿದ್ದ ನಾಡ ಬಾಂಬ್ ತಿಂದು ಎಮ್ಮೆ ತೀವ್ರವಾಗಿ ಗಾಯಗೊಂಡಿದ್ದು, ನರಳಿ ನರಳಿ ಪ್ರಾಣ ಬಿಟ್ಟಿದೆ. ಈ ದುರ್ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹೊಸಕೊಪ್ಪದಲ್ಲಿ ನಡೆದಿದೆ. ರೈತ ಬಾಷಾಸಾಬ್ ಬಂಕಾಪುರಗೆ ಸೇರಿದ ಎಮ್ಮೆ ಹುಲ್ಲು ಮೇಯುತ್ತಿದ್ದಾಗ ನಾಡಬಾಂಬ್ ತಿಂದಿದೆ. ಈ ವೇಳೆ ನಾಡಬಾಂಬ್ ಎಮ್ಮೆ ಬಾಯಲ್ಲೇ ಸ್ಫೋಟಗೊಂಡಿದೆ. ಇದರಿಂದ ಎಮ್ಮೆ ಬಾಯಿ ಛಿದ್ರ ಛಿದ್ರವಾಗಿದ್ದು, ಬಳಿಕ ನರಳಿ ನರಳಿ ಸಾವನ್ನಪ್ಪಿದೆ. ಯಾರೋ ದುಷ್ಕರ್ಮಿಗಳು ಕಾಡು ಹಂದಿ ಬೇಟೆಗಾಗಿ ನಾಡಬಾಂಬ್ ಇಟ್ಟಿದ್ದು ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More