‘ಅಪ್ಪನ ಫ್ರೆಂಡ್ಸ್ ಬಣ್ಣ ಬೇಗ ಬಯಲಾಯ್ತು’; ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಅಸಮಾಧಾನ
‘ಅಪ್ಪನ ಸ್ನೇಹಿತರ ನಿಜವಾದ ಮುಖ ಏನು ಎಂಬುದು ನನಗೆ ಆದಷ್ಟು ಬೇಗ ಗೊತ್ತಾಯಿತು. ಅವರು ಹಾಕುತ್ತಿರುವುದು ಸಿಹಿನೋ ಅಥವಾ ವಿಷನೋ ಎಂಬುದು ತಿಳಿಯಿತು’ ಎಂದು ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಹೇಳಿದ್ದಾರೆ.
ಕನ್ನಡದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರಿಗೆ ಚಿತ್ರರಂಗದ ಹಲವರ ಜೊತೆ ಸ್ನೇಹ ಇತ್ತು. ಅವರು ಅನಾರೋಗ್ಯದಿಂದ ಮೃತಪಟ್ಟಾಗ ಆ ಸ್ನೇಹಿತರೆಲ್ಲ ನೆರವಿಗೆ ಬರುತ್ತಾರೆ ಎಂಬ ನಂಬಿಕೆ ಕೂಡ ಇತ್ತು. ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಕೆಲವರು ಹೇಳಿಕೊಂಡಿದ್ದರು. ಆದರೆ ಆ ಪೈಕಿ ಬಹುತೇಕರ ನಿಜವಾದ ಮುಖ ಏನು ಎಂಬುದು ಬಯಲಾಗಿದೆ ಎಂದು ರಕ್ಷಕ್ ನೇರವಾಗಿಯೇ ಆರೋಪಿಸಿದ್ದಾರೆ. ಟಿವಿ9ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಅಪ್ಪನ ಸ್ನೇಹಿತರು ಎಂದು ಹೇಳಿಕೊಂಡಿದ್ದ ಬಹುತೇಕರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಅಪ್ಪನ ಸ್ನೇಹಿತರ ನಿಜವಾದ ಮುಖ ಏನು ಎಂಬುದು ನನಗೆ ಆದಷ್ಟು ಬೇಗ ಗೊತ್ತಾಯಿತು. ಅವರು ಹಾಕುತ್ತಿರುವುದು ಸಿಹಿನೋ ಅಥವಾ ವಿಷನೋ ಎಂಬುದು ತಿಳಿಯಿತು. ಇದು ಬೇಗ ಗೊತ್ತಾಗಿದ್ದು ಒಳ್ಳೆಯದೇ ಆಯ್ತು. ಅಂಥವರಿಗೆಲ್ಲ ದೊಡ್ಡ ಥ್ಯಾಂಕ್ಸ್’ ಎಂದು ರಕ್ಷಕ್ ಹೇಳಿದ್ದಾರೆ. ‘ಎಲ್ಲರ ಮುಂದೆ ನಾನು ಚೆನ್ನಾಗಿ ಬದುಕಿ ತೋರಿಸುತ್ತೇನೆ’ ಅಂತ ಅವರು ಸವಾಲು ಹಾಕಿದ್ದಾರೆ.
ಇದನ್ನೂ ಓದಿ:
ಹೆಬ್ಬಾಳ: ಬುಲೆಟ್ ಪ್ರಕಾಶ್ ಮಗ ರಕ್ಷಕ್ ಮೇಲೆ ಮಂಗಳಮುಖಿಯರಿಂದ ದಾಳಿ; ಪ್ರಕರಣ ದಾಖಲು
ನಿರಂತರ ಬೆದರಿಕೆ; ದರ್ಶನ್ ಹಿಂಬಾಲಕ ವಿರುದ್ಧ ಸೈಬರ್ ಪೊಲೀಸರಿಗೆ ಇಂದ್ರಜಿತ್ ದೂರು