AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಬ್ಬಾಳ: ಬುಲೆಟ್ ಪ್ರಕಾಶ್ ಮಗ ರಕ್ಷಕ್ ಮೇಲೆ ಮಂಗಳಮುಖಿಯರಿಂದ ದಾಳಿ; ಪ್ರಕರಣ ದಾಖಲು

ಕನ್ನಡದ ಖ್ಯಾತ ನಟ ದಿ.ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಮುಂಗಳಮುಖಿಯರಿಂದ ದಾಳಿಗೆ ಒಳಗಾಗಿದ್ದಾರೆ. ಈ ಕುರಿತು ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಬ್ಬಾಳ: ಬುಲೆಟ್ ಪ್ರಕಾಶ್ ಮಗ ರಕ್ಷಕ್ ಮೇಲೆ ಮಂಗಳಮುಖಿಯರಿಂದ ದಾಳಿ; ಪ್ರಕರಣ ದಾಖಲು
ರಕ್ಷಕ್ (ಸಂಗ್ರಹ ಚಿತ್ರ)
Follow us
TV9 Web
| Updated By: shivaprasad.hs

Updated on: Sep 08, 2021 | 10:28 AM

ಹಾಸ್ಯ ನಟ ದಿ. ಬುಲೆಟ್ ಪ್ರಕಾಶ್ ಮಗ ರಕ್ಷಕ್ ಮೇಲೆ ಮಂಗಳಮುಖಿಯರಿಂದ ದಾಳಿgಎ ಒಳಗಾಗಿದ್ದಾರೆ. ಬೆಂಗಳೂರಿನ ಹೆಬ್ಬಾಳ ಬಳಿ‌ ನಿನ್ನೆ ರಾತ್ರಿ ಘಟನೆ ನಡೆದಿದ್ದು, ಕೆಲವು ಮಂಗಳಮುಖಿಯರು ದಾಳಿ ನಡೆಸಿರುವ ಆರೋಪ ಮಾಡಲಾಗಿದೆ. ರಾತ್ರಿ 9 ಗಂಟೆಗೆ ಜಿಮ್ ಮುಗಿಸಿ ರಕ್ಷಕ್ ವಾಪಸಾಗುತ್ತಿದ್ದಾಗ, ಅವರ ಬ್ಯಾಗ್ಅನ್ನು ಮಂಗಳಮುಖಿಯರು ಎಳೆದಿದ್ದಾರೆ. ಆಗ ಬೈಕ್‌ನಿಂದ ಕೆಳಗೆ ಬಿದ್ದು ರಕ್ಷಕ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಬೈಕ್ ಸ್ಥಳದಲ್ಲಿಯೇ ಬಿಟ್ಟು ರಕ್ಷಕ್ ಓಡಿಹೋಗಿ, ಪೊಲೀಸರ ಸಹಾಯದಿಂದ ಅವರು ಬೈಕ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತಂತೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಕರಣವೇನು?

ನಿನ್ನೆ (ಸೆಪ್ಟೆಂಬರ್ 07) ರಾತ್ರಿ 9 ಗಂಟೆಗೆ ಜಿಮ್ ಮುಗಿಸಿ ರಕ್ಷಕ್ ಮನೆಗೆ ವಾಪಸ್ ಆಗ್ತಿದ್ದರು. ಈ ವೇಳೆ ಹೆಬ್ಬಾಳ ಪ್ಲೈ ಓವರ್ ಬಳಿ ಘಟನೆ ನಡೆದಿದೆ ಎನ್ನಲಾಗಿದೆ.  ರಕ್ಷಕ್ ಬ್ಯಾಗ್ ಹಿಡಿದು ಮಂಗಳಮುಖಿಯರು ಎಳೆದಿದ್ದಾರೆ. ಆಗ ಬೈಕ್​ನಿಂದ ಕೆಳಗೆ ಬಿದ್ದ ರಕ್ಷಕ್ ಕಾಲಿಗೆ ತರಚಿದ ಗಾಯಗಳಿದ್ದು, ಗಾಡಿಯೂ ಡ್ಯಾಮೇಜ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಂಗಳ ಮುಖಿಯರ ದಾಳಿಯಿಂದ ತಪ್ಪಿಸಿಕೊಳ್ಳಲು ಫ್ಲೈ ಓವರ್ ಮೇಲೆ ಗಾಡಿ ಬಿಟ್ಟು ರಕ್ಷಕ್ ಓಡಿಹೋಗಿದ್ದಾರೆ. ಬಳಿಕ ಹೆಬ್ಬಾಳ ಪೊಲೀಸರ ಸಹಾಯದಿಂದ ಬೈಕ್ ತೆಗೆದುಕೊಂಡು ರಕ್ಷಕ್ ಮರಳಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

Drug Case: ಸಿಸಿಬಿ ಚಾರ್ಜ್​ಶೀಟ್​ನಲ್ಲಿ ಆಂಕರ್ ಅನುಶ್ರೀ ಹೆಸರು ಉಲ್ಲೇಖ; ಅವರು ಡ್ರಗ್ಸ್ ಸೇವಿಸುತ್ತಿದ್ದರು ಎಂದು ಆರೋಪಿ ಹೇಳಿಕೆ

’ಇನ್ಮುಂದೆ ಅಫ್ಘಾನ್​​ನಲ್ಲಿ ಪ್ರತಿಯೊಂದು ವಿಚಾರದಲ್ಲೂ ಪವಿತ್ರ ಷರಿಯಾ ಕಾನೂನು ಅನ್ವಯ..‘-ತಾಲಿಬಾನಿಗಳಿಂದ ಅಧಿಕೃತ ಪ್ರಕಟಣೆ

(Bullet Prakash son Rakshak is attacked by transgenders)