ಬುಲೆಟ್ ಪ್ರಕಾಶ್ ಪುತ್ರ ನಟಿಸಿದ ಮೊದಲ ಸಿನಿಮಾ ರಿಲೀಸ್; ಇಲ್ಲಿದೆ ರಕ್ಷಕ್ ಪ್ರತಿಕ್ರಿಯೆ
Bullet Prakssh | Rakshak: ಮೊದಲ ಸಿನಿಮಾಗೆ ಜನರು ತೋರಿಸುತ್ತಿರುವ ಪ್ರೀತಿ ಕಂಡು ರಕ್ಷಕ್ ಖುಷಿ ಆಗಿದ್ದಾರೆ. ಈ ವೇಳೆ ಅವರು ತಂದೆಯನ್ನು ಸ್ಮರಿಸಿಕೊಂಡಿದ್ದಾರೆ.
ಜಡೇಶ್ ಕೆ. ಹಂಪಿ ನಿರ್ದೇಶನದ ‘ಗುರು ಶಿಷ್ಯರು’ (Guru Shishyaru) ಸಿನಿಮಾ ಇಂದು (ಸೆ.23) ಬಿಡುಗಡೆ ಆಗಿದೆ. ಶರಣ್ ಮತ್ತು ನಿಶ್ವಿಕಾ ನಾಯ್ಡು ನಟನೆಯ ಈ ಚಿತ್ರದಲ್ಲಿ ಬುಲೆಟ್ ಪ್ರಕಾಶ್ (Bullet Prakssh) ಪುತ್ರ ರಕ್ಷಕ್ ಕೂಡ ನಟಿಸಿದ್ದಾರೆ. ಇದು ಅವರ ಮೊದಲ ಸಿನಿಮಾ. ಬೆಂಗಳೂರಿನ ನರ್ತಕಿ ಥಿಯೇಟರ್ನಲ್ಲಿ ಚಿತ್ರ ನೋಡಲು ಬಂದ ಅವರು ಟಿವಿ9 ಜತೆ ಮಾತನಾಡಿದ್ದಾರೆ. ಮೊದಲ ಸಿನಿಮಾಗೆ ಜನರು ತೋರಿಸುತ್ತಿರುವ ಪ್ರೀತಿ ಕಂಡು ರಕ್ಷಕ್ (Rakshak) ಖುಷಿ ಆಗಿದ್ದಾರೆ. ಈ ವೇಳೆ ಅವರು ತಂದೆಯನ್ನು ಸ್ಮರಿಸಿಕೊಂಡಿದ್ದಾರೆ.