AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka By Poll Results; ಉಪ ಚುನಾವಣೆಗಳ ಫಲಿತಾಂಶ ಹಲವು ಅಂಶಗಳನ್ನು ಸಾಬೀತು ಮಾಡಿದೆ: ಪ್ರದೀಪ್ ಈಶ್ವರ್

Karnataka By Poll Results; ಉಪ ಚುನಾವಣೆಗಳ ಫಲಿತಾಂಶ ಹಲವು ಅಂಶಗಳನ್ನು ಸಾಬೀತು ಮಾಡಿದೆ: ಪ್ರದೀಪ್ ಈಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 23, 2024 | 1:05 PM

Share

ಉಪ ಚುನಾವಣೆಗಳಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಸ್ಪರ್ಧಿಸಿ ಸೋತಿದ್ದಾರೆ, ಶಿವಕುಮಾರ್ ಅವರು ಮನೇಲಿ ಕೂತು ಟಿವಿಯಲ್ಲಿ ಫಲಿತಾಂಶಗಳನ್ನು ವೀಕ್ಷಿಸುತ್ತಿದ್ದಾರೆ, ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ನಡೆಯುವುದಿಲ್ಲವೆಂದು ಈ ಉಪ ಚುನಾವಣೆ ಸಾಬೀತು ಮಾಡಿದೆ ಎಂದು ಪ್ರದೀಪ್ ಈಶ್ವರ್ ಹೇಳಿದರು.

ಬೆಂಗಳೂರು: ವಿಧಾನಸಭಾ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ಗೆಲ್ಲೋದು ಖಚಿತವಾಗಿದೆ. ಫಲಿತಾಂಶಗಳ ಟ್ರೆಂಡ್ ಗೊತ್ತಾದ ಬಳಿಕ ನಗರದಲ್ಲಿ ಮಾಧ್ಯಮಗಳೊಡನೆ ಮಾತಾಡಿದ ಶಾಸಕ ಪ್ರದೀಪ್ ಈಶ್ವರ್, ಎಕ್ಸಿಟ್ ಪೋಲ್ ಗಳು ಬೇರೆ ಕತೆ ಹೇಳಿದ್ದವು ಅದರೆ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುತ್ತಿದೆ, ಸಿಪಿ ಯೋಗೇಶ್ವರ್ ಕ್ಷೇತ್ರದಲ್ಲಿ ಬಹಳ ಶ್ರಮ ಪಟ್ಟಿದ್ದಾರೆ, ಡಿಕೆ ಶಿವಕುಮಾರ್ ಜೊತೆ ಎರಡು ವಾರ ಕೆಲಸ ಮಾಡಿದೆ, ಅವರ ಬದ್ಧತೆ ಅನುಕರಣೀಯವಾದ್ದು, ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ನಾಯಕರು ಇಲ್ಲಸಲ್ಲದ ಆರೋಪ ಮಾಡಿದ ಈ ಚುನಾವಣೆಯು ಎರಡು ಅಂಶಗಳನ್ನು ಪ್ರೂವ್ ಮಾಡಿದೆ-ಸಿದ್ದರಾಮಯ್ಯ ಅಹಿಂದದ ಪ್ರಶ್ನಾತೀತ ನಾಯಕ ಮತ್ತು ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚಿಕ್ಕಬಳ್ಳಾಪುರ: ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ