ವಿಧಾನಸೌಧದ ಆವರಣದಲ್ಲಿ ಹೋಳಿ ಹಬ್ಬದ ರಂಗಿನಾಟ ಆಡಿದ ವಿಜಯೇಂದ್ರ ಮತ್ತು ಬಿಜೆಪಿ ಶಾಸಕರು
ಎಲ್ಲರಿಂದ ಬಣ್ಣ ಹಚ್ಚಿಸಿಕೊಂಡು ತಾನೂ ಎಲ್ಲರಿಗೆ ಬಣ್ಣ ಹಚ್ಚಿ ಮಾಧ್ಯಮಗಳೊಂದಿಗೆ ಮಾತಾಡಿದ ವಿಜಯೇಂದ್ರ ನಾಡಿನ ಜನತೆಗೆ ಹೋಳಿಹಬ್ಬದ ಶುಭಾಷಯ ಕೋರಿದರು. ಅವರಿಗಿಂತ ಮೊದಲು ಶಾಸಕ ಜನಾರ್ಧನರೆಡ್ಡಿ ಹಬ್ಬದ ವಿಶ್ ಮಾಡಿದರು. ಇವರೆಲ್ಲ ಬಣ್ಣದಾಟದಲ್ಲಿ ಸಂಭ್ರಮಿಸುತ್ತಿರುವಾಗಲೇ ಕಂದಾಯ ಕೃಷ್ಣ ಭೈರೇಗೌಡ ಅಲ್ಲಿಂದ ಅವಸರದಲ್ಲಿ ಪಾರಾಗುವುದನ್ನು ನೋಡಬಹುದು.
ಬೆಂಗಳೂರು ಮಾರ್ಚ್ 14: ಇವತ್ತು ಹೋಳಿ ಹಬ್ಬದ ಸಂಭ್ರಮ, ದೇಶದೆಲ್ಲೆಡೆ ಜನ ರಂಗಿನಾಟ ಆಡಿದರು. ನಮ್ಮ ಜನಪ್ರತಿನಿಧಿಗಳು ದೂರ ಉಳಿಯುವುದು ಸಾಧ್ಯವೇ? ವಿಧಾನಸಭೆಯಿಂದ ಹೊರಬರುತ್ತಿದ್ದಂತೆಯೇ ಬಿಜೆಪಿಯ ಶಾಸಕರು ಸಾಂಕೇತಿಕವಾಗಿ ಒಬ್ಬರಿಗೊಬ್ಬರು ಬಣ್ಣಹಚ್ಚಿ ಸಂಭ್ರಮಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಗಾಲಿ ಜನಾರ್ಧನ ರೆಡ್ಡಿ, ಶರಣು ಸಲಗರ, ಟಿಎ ಶ್ರೀವತ್ಸ ಮೊದಲಾದವರನ್ನು ದೃಶ್ಯಗಳಲ್ಲಿ ನೋಡಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Holi: ಅನ್ಯರ ನಿಂದನೆಗೇ ಇರುವ ಹಬ್ಬ ಹೋಳಿ ಹುಣ್ಣಿಮೆ!