ಬಿಜೆಪಿ ಪ್ರತಿಭಟನೆಗೆ ವಿಜಯೇಂದ್ರ ಗೈರು: ಶಾಸಕ ಯತ್ನಾಳ್ ಏನ್ ಹೇಳಿದ್ರು ನೋಡಿ
ಮಾಜಿ ಶಾಸಕ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇವತ್ತಿನ ಬಿಜೆಪಿ ಪ್ರತಿಭಟನೆಗೆ ಬಿವೈ ವಿಜಯೇಂದ್ರ ಯಾಕೆ ಬಂದಿರಲಿಲ್ಲ ಅಂತಾ ಲಿಂಬಾವಳಿರನ್ನು ಕೇಳಿ ಗೊತ್ತಾಗುತ್ತದೆ. ಅದಕ್ಕೆ ಬೇರೆ ಕಾರಣ ಇದೆ ಎಂದು ಹೇಳಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 26: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಇಂದು ವಿಧಾನಸೌಧದಲ್ಲಿ ಬಿಜೆಪಿ ಪ್ರತಿಭಟನೆ ಮಾಡಲಾಗಿದೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಗೈರಾಗಿದ್ದರು. ಈ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Yatnal), ಇವತ್ತಿನ ಬಿಜೆಪಿ ಪ್ರತಿಭಟನೆಗೆ ವಿಜಯೇಂದ್ರ ಯಾಕೆ ಅಂತಾ ಲಿಂಬಾವಳಿರನ್ನು ಕೇಳಿ ಗೊತ್ತಾಗುತ್ತದೆ. ಹಿಂದೂ ಸಮಾಜದ ಎಲ್ಲಾ ವರ್ಗದವರ ಸಂಘಟನೆ ಮಾಡುತ್ತೇವೆ. ಸಿದ್ದರಾಮಯ್ಯ ಸರ್ಕಾರ ಕೇವಲ ಮುಸ್ಲಿಮರ ಓಲೈಕೆ ಮಾಡುತ್ತಿದೆ. ರಾಯಣ್ಣ ಬ್ರಿಗೇಡ್ಗೆ ಆರ್ಸಿಬಿ ಅಂತಾ ಏನೂ ಹೆಸರು ಇಟ್ಟಿಲ್ಲ. ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಅಂತಾ ನಾವು ಸೀಮಿತಗೊಳಿಸಿಲ್ಲ. ಬಿಜೆಪಿಯಲ್ಲಿ ಎಷ್ಟು ಬಣ ಇವೆ ಅಂತಾ ಸಿದ್ದರಾಮಯ್ಯಗೆ ಬೇಕಾಗಿಲ್ಲ. ನಿಮ್ಮಲ್ಲಿ ಎಷ್ಟು ಬಣಗಳಿವೆ ಅಂತಾ ನೋಡಿಕೊಳ್ಳಿ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos