ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ 49ನೇ ಹುಟ್ಟುಹಬ್ಬ ಸಂಭ್ರಮ, ತಂದೆ ಯಡಿಯೂರಪ್ಪ ಆಶೀರ್ವಾದ

|

Updated on: Nov 05, 2024 | 12:42 PM

ಬರ್ತ್​ಡೇ ಬಾಯ್ ವಿಜಯೇಂದ್ರ ಇಂದು ಬೆಳಗ್ಗೆ ಮಾಡಿದ ಮೊದಲ ಕೆಲಸವೆಂದರೆ ಅವರ ತಂದೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರವರ ನಿವಾಸಕ್ಕೆ ತೆರಳಿ ಅವರ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದ್ದು. ತಮ್ಮ ಈ ಸಂತಸವನ್ನು ಅವರು ತಮ್ಮ ಎಕ್ಸ್ ಹ್ಯಾಂಡಲ್​ನಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿ ಮತ್ತು ಬಿಜೆಪಿ ಕಾರ್ಯಕರ್ತರು ವಿಜಯೇಂದ್ರ ನಿವಾಸದ ಬಳಿ ಆಗಮಿಸಿ ಶುಭ ಹಾರೈಸಿದರು. ಕೆಲ ಕಾರ್ಯಕರ್ತರು ಕೇಕ್ ಹೊತ್ತು ತಂದಿರುವುದನ್ನು ಇಲ್ಲಿ ನೋಡಬಹುದು. ಕೇಕ್ ಕಟ್ ಮಾಡಿದ ವಿಜಯೇಂದ್ರ ಅದನ್ನು ತಂದ ಅಭಿಮಾನಿಗಳಿಗೆ ತಿನ್ನಿಸುತ್ತಾರೆ. ಫೋನ್ ಮುಖಾಂತರವೂ ಹಲವಾರು ಜನ ವಿಜಯೇಂದ್ರಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಜ್ಯಪಾಲರಿಂದ ಪ್ರಾಸಿಕ್ಯೂಷನ್​ಗೆ ಅನುಮತಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿವೈ ವಿಜಯೇಂದ್ರ ಆಗ್ರಹ