ವಿಧ್ಯಾರ್ಥಿನಿಯರ ಜೊತೆ ಕ್ಯಾಬ್ ಚಾಲಕ ಅಸಭ್ಯ ವರ್ತನೆ; ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಗ್ರಾಮಸ್ಥರು

ವಿಧ್ಯಾರ್ಥಿನಿಯರ ಜೊತೆ ಕ್ಯಾಬ್ ಚಾಲಕ ಅಸಭ್ಯ ವರ್ತನೆ; ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಗ್ರಾಮಸ್ಥರು

TV9 Web
| Updated By: ವಿವೇಕ ಬಿರಾದಾರ

Updated on: Nov 26, 2022 | 1:03 PM

ವಿದ್ಯಾರ್ಥಿನಿಯರ ಜೊತೆ ಕ್ಯಾಬ್ ಚಾಲಕ ಅಸಭ್ಯವಾಗಿ ವರ್ತಿಸಿದ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ.

ಚಿಕ್ಕಮಗಳೂರು: ವಿದ್ಯಾರ್ಥಿನಿಯರ (Students) ಜೊತೆ ಕ್ಯಾಬ್ ಚಾಲಕ ಅಸಭ್ಯವಾಗಿ ವರ್ತಿಸಿದ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಆರೋಪಿ ಚಾಲಕನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ರಾಜಪ್ಪ ಕ್ಯಾಬ್​ನಲ್ಲಿ ಕಡೂರಿನಿಂದ ಶಿಕ್ಷಕಿಯರನ್ನು ಕರೆತರುತ್ತಿದ್ದನು. ಈ ಸಂಬಂಧ ರಾಜಪ್ಪ ಬೆಳಗ್ಗೆಯಿಂದ ಸಂಜೆವರೆಗೂ ಶಾಲೆ ಬಳಿಯೇ ಇರುತ್ತಿದ್ದನು. ಈ ವೇಳೆ ರಾಜಪ್ಪ ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ. ಆರೋಪಿ ರಾಜಪ್ಪ ವಿರುದ್ಧ ಸಖರಾಯಪಟ್ಣಣ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.