ಬೆಂಗಳೂರು: ಸಾಕು ನಾಯಿ ಮರಿ ಮೇಲೆ ಕ್ಯಾಬ್ ಚಲಾಯಿಸಿ ವಿಕೃತಿ, ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

| Updated By: ಆಯೇಷಾ ಬಾನು

Updated on: Aug 08, 2024 | 12:18 PM

ಬೆಂಗಳೂರು ನಗರ ಜಿಲ್ಲೆ ಯಲಹಂಕದ ಮಾರುತಿ ನಗರ 17 ನೇ ಕ್ರಾಸ್ ನಲ್ಲಿ ಜುಲೈ 31ರಂದು ಸಾಕು ನಾಯಿ ಮರಿಯ ಮೇಲೆ ಕಾರು ಹರಿದಿದೆ. ಕಾರು ಚಾಲಕ ಅಮಾನವೀಯವಾಗಿ ಕಾರು ಹತ್ತಿಸಿ ಪರಾರಿಯಾಗಿದ್ದ. ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನಾಯಿ ಮಾಲೀಕ ದೂರು ದಾಖಲಿಸಿದ್ದಾರೆ. ದೂರಿನ ಬಳಿಕ ಚಾಲಕ ಮಾಲೀಕನ ಬಳಿ ಬಂದು ಕ್ಷಮೆ ಕೇಳಿದ್ದಾನೆ.

ಬೆಂಗಳೂರು, ಆಗಸ್ಟ್​.08: ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾಕು ನಾಯಿ (Dog) ಮೇಲೆ ಕಾರೊಂದು ಹರಿದುಕೊಂಡು ಹೋಗಿದ್ದು ಅಮಾನವೀಯ ಕೃತ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ಯಲಹಂಕದ ಮಾರುತಿ ನಗರದಲ್ಲಿ ಕಳೆದ ಜುಲೈ 31 ರಂದು ರಸ್ತೆಯಲ್ಲಿ ಓಡಾಡುತ್ತಿದ್ದ ಸಾಕು ನಾಯಿ ಮೇಲೆ ಕಾರು ಹರಿದಿದೆ. ಘಟನೆ ಸಂಬಂಧ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ನಾಯಿ ಮಾಲೀಕ ದೂರು ನೀಡಿದ್ದು ಕಾರು ಚಾಲಕ ಕ್ಷಮೆ ಕೇಳಿದ್ದಾನೆ. ಮತ್ತೊಂದೆಡೆ ಕೆಲ ಕ್ಯಾಬ್ ಚಾಲಕರು ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆ ಅಂತ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ಯಲಹಂಕದ ಮಾರುತಿ ನಗರ 17 ನೇ ಕ್ರಾಸ್ ನಲ್ಲಿ ಜುಲೈ 31ರಂದು ಸಾಕು ನಾಯಿ ಮರಿಯ ಮೇಲೆ ಕಾರು ಹರಿದಿತ್ತು. ಕಾರು ಚಾಲಕ ಸ್ವಲ್ಪವೂ ಮಾನವೀಯತೆ ತೋರದೆ ನಾಯಿಯ ಮೇಲೆ ಕಾರು ಹತ್ತಿಸಿ ಕಾರನ್ನು ನಿಲ್ಲಿಸದೇ ಹೋಗಿದ್ದ. ಘಟನೆ ನಡೆದ ನಾಲ್ಕು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ನಾಯಿ ಸಾವನ್ನಪಿದೆ. ನಾಯಿ ಸಾವಿನ ಬಳಿಕ ಮಾಲೀಕ ಸಿಸಿ ಕ್ಯಾಮರಾ ಚೆಕ್ ಮಾಡಿದ್ದು ನಾಯಿ ಮೇಲೆ ಕ್ಯಾಬ್ ಹರಿದಿರುವ ದೃಶ್ಯ ಪತ್ತೆಯಾಗಿದೆ. ಇದರಿಂದ ಆಕ್ರೋಶಗೊಂಡ ಮಾಲೀಕ ನಾಯಿ ಮೇಲೆ ಕಾರು ಹತ್ತಿದ್ರು ಕಾರು ನಿಲ್ಲಿಸದೆ ಹೋಗಿದಕ್ಕೆ ದೂರು ದಾಖಲಿಸಿದ್ದಾರೆ. ದೂರು ನೀಡ್ತಿದ್ದಂತೆ ಕಾರು ಚಾಲಕ ನಿನ್ನೆ ನಾಯಿ ಮಾಲೀಕನ ಬಳಿ ಬಂದು ಕ್ಷಮೆ ಕೇಳಿದ್ದಾರೆ. ಈ ವೇಳೆ ಕಾರು ಚಾಲಕನಿಗೆ ಮಾನವೀಯತೆ ಇಲ್ವಾ ಅಂತ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರು ಹತ್ತಿದಾಗಲೇ ಕಾರು ನಿಲ್ಲಿಸಿ ಚಿಕಿತ್ಸೆ ನೀಡಿದ್ರೆ ನಾಯಿ ಮರಿ ಉಳಿಯುತ್ತಿತ್ತು ಅಂತ ಮಾಲೀಕ ಆಕ್ರೋಶ ಹೊರ ಹಾಕಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow us on