ಚಿಕ್ಕೋಡಿ: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು: ಪವಾಡಸದೃಶ್ಯವಾಗಿ ಬದುಕುಳಿದ ಚಾಲಕ
ಕಾರು ನದಿಗೆ ಬೀಳುತ್ತಿದ್ದಂತೆ ಸ್ಥಳೀಯರಿಂದ ಚಾಲಕನ ರಕ್ಷಣೆ ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗ್ರಾಮಸ್ಥರು ಟ್ರ್ಯಾಕ್ಟರ ಮೂಲಕ ಕಾರನ್ನು ಹೊರ ತೆಗೆದಿದ್ದಾರೆ.
ಚಿಕ್ಕೋಡಿ: ಚಾಲಕನ ನಿಯಂತ್ರಣ ತಪ್ಪಿ ಕಾರು (Car) ನದಿಗೆ ಬಿದ್ದಿರುವಂತಹ ಘಟನೆ ಚಿಕ್ಕೋಡಿ ತಾಲೂಕಿನ ದೂದಗಂಗಾ ನದಿಯ ದಾನವಾಡ-ದತ್ತವಾಡ ಸೇತುವೆ ಬಳಿ ನಡೆದಿದೆ. ಕಾರಿನಲ್ಲಿದ್ದ ಚಾಲಕ ಹಾಗೂ ಕಾರನ್ನು ಹಗ್ಗದ ಸಹಾಯದಿಂದ ಸ್ಥಳೀಯರು ಹೊರ ತೆಗೆದಿದ್ದಾರೆ. ಮಹಾರಾಷ್ಟ್ರದ ಪುಣೆಯಿಂದ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮಕ್ಕೆ ಬಂದಿದ್ದ ಚಾಲಕ, ಬಾಡಿಗೆ ಆಧಾರದಲ್ಲಿ ಪ್ಯಾಸೆಂಜರ್ಸ್ ಬಿಡಲು ಚಾಲಕ ಬಂದಿದ್ದ. ಪ್ಯಾಸೆಂಜರ್ಸ್ಗಳನ್ನ ಬಿಟ್ಟು ವಾಪಸ್ ತೆರಳುವಾಗ ಘಟನೆ ನಡೆದಿದೆ. ಕಾರು ನದಿಗೆ ಬೀಳುತ್ತಿದ್ದಂತೆ ಸ್ಥಳೀಯರಿಂದ ಚಾಲಕನ ರಕ್ಷಣೆ ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗ್ರಾಮಸ್ಥರು ಟ್ರ್ಯಾಕ್ಟರ ಮೂಲಕ ಕಾರನ್ನು ಹೊರ ತೆಗೆದಿದ್ದಾರೆ. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೆಳಗಾವಿಯಲ್ಲಿ ಮಳೆ ಬಿಡುವು ಕೊಟ್ಟರು ನರೆ ಭೀತಿ ನಿಂತ್ತಿಲ್ಲ. ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದ ಜಮೀನುಗಳಿಗೆಲ್ಲಾ ಬಳ್ಳಾರಿ ನಾಲಾ ನೀರು ನುಗ್ಗಿದೆ. ನೂರಾರು ಏಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತ, ಕಬ್ಬು ನೀರು ಪಾಲಾಗಿದೆ. ಬಾಸುಮತಿ ಅಂತಲೇ ಫೇಮಸ್ ಆಗಿದ್ದ, ಭತ್ತ ನೀರಿನಲ್ಲಿ ಮುಳುಗಡೆಯಾಗಿದೆ.
ಇದನ್ನೂ ಓದಿ: ಜೆಡಿ(ಎಸ್) ಶಾಸಕ ರೇವಣ್ಣ ಈ ಬಾರಿ ಕೂಗಾಡಲು ಆರಿಸಿಕೊಂಡಿದ್ದು ಪ್ರತಿಭಟನೆಗೆ ಕುಳಿತ ಅಂಗನವಾಡಿ ಕಾರ್ಯಕರ್ತೆಯರನ್ನು!