AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಂಗಾಯತರ ಮಧ್ಯೆ ಜಾತಿ ಜಟಾಪಟಿ ತಂದ ಜಾತಿ ಗಣತಿ: ಪಂಚಮಸಾಲಿಗಳ ಮನೆಗೆ ಸ್ಟಿಕ್ಕರ್ ಅಭಿಯಾನ ಆರಂಭಿಸಿದ ವಚನಾನಂದ ಶ್ರೀ

ಲಿಂಗಾಯತರ ಮಧ್ಯೆ ಜಾತಿ ಜಟಾಪಟಿ ತಂದ ಜಾತಿ ಗಣತಿ: ಪಂಚಮಸಾಲಿಗಳ ಮನೆಗೆ ಸ್ಟಿಕ್ಕರ್ ಅಭಿಯಾನ ಆರಂಭಿಸಿದ ವಚನಾನಂದ ಶ್ರೀ

Ganapathi Sharma
|

Updated on: Sep 20, 2025 | 2:56 PM

Share

ರಾಜ್ಯದಲ್ಲಿ ಜಾತಿ ಗಣತಿ ಗೊಂದಲ ಜೋರಾಗಿದೆ. ಅದರಲ್ಲೂ ವೀರಶೈವ ಲಿಂಗಾಯತ ಮತ್ತು ಒಳಪಂಗಡಗಳಲ್ಲಿ ಇದು ತೀರ್ವ ಸ್ವರೂಪ ಪಡೆದಿವೆ. ಕೆಲವರು ಪ್ರತ್ಯೇಕ ಲಿಂಗಾಯತ ಧರ್ಮ ಅಂತ ಹೇಳ್ತಿದ್ದರೆ, ಕೆಲವರು ಹಿಂದೂ ಧರ್ಮ ಅಂತ ಬರೆಸಬೇಕು ಅಂತ ಹೇಳ್ತಿದ್ದಾರೆ. ಈ ಮಧ್ಯೆ, ಜಾತಿ ಗಣತಿ ವೇಳೆ ಹಿಂದೂ ಧರ್ಮ ಎಂದೇ ನಮೂದಿಸಲು ಸೂಚನೆ ನೀಡಲಾಗಿದೆ. ಆದರೆ, ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಹಾಗೂ ಪಂಚಮಸಾಲಿ ಲಿಂಗಾಯತ ಎಂದು ಬರೆಸುವ ಕುರಿತಾದ ಜಟಾಪಟಿ ಮುಂದುವರಿದಿದೆ.

ಹುಬ್ಬಳ್ಳಿ, ಸೆಪ್ಟೆಂಬರ್ 20: ಕೊನೆಗೂ ಜಾತಿ ಗಣತಿ ವೇಳೆ ಹಿಂದೂ ಧರ್ಮ ಎಂದು ಬರೆಸುವ ವಿಚಾರದಲ್ಲಿ ಲಿಂಗಾಯತರು ಒಮ್ಮತಕ್ಕೆ ಬಂದರೂ ಜಾತಿ ಜಟಾಪಟಿ ಜೋರಾಗಿದೆ. ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕೆಂಬುದು ಒಂದು ಬಣದ ಆಗ್ರಹವಾದರೆ, ಪಂಚಮಸಾಲಿ ಲಿಂಗಾಯತ ಎಂದು ಬರೆಯಬೇಕೆಂದು ಇನ್ನು ಕೆಲವರು ಆಗ್ರಹಿಸಿದ್ದಾರೆ. ಲಿಂಗಾಯತ ಪಂಚಮಸಾಲಿ ಎಂದು ಜಾತಿ ಕಾಲಂನಲ್ಲಿ ನಮೂದಿಸುವಂತೆ ವಚನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಮನೆ ಮನೆ ಸ್ಟಿಕ್ಕರ್ ಅಭಿಯಾನ ಆರಂಭಿಸಲಾಗಿದೆ. ಸುಮಾರು 1 ಲಕ್ಷ ಸ್ಟಿಕ್ಕರ್ ಅಂಟಿಸುವ ಗುರಿ ಹೊಂದಲಾಗಿದೆ. ಜಿಲ್ಲೆ ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ವಚನಾನಂದ ಶ್ರೀ ತಿಳಿಸಿದ್ದಾರೆ.