SSLCಯಲ್ಲೂ ಇಷ್ಟು ಪ್ರಶ್ನೆ ಇರಲ್ಲ, ಆಯೋಗದವರಿಗೆ ತಲೆ ಇಲ್ಲವಾ: ಆರ್ ಅಶೋಕ್ ಕಿಡಿ
ರಾಜ್ಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಸಂಕೀರ್ಣ ಪ್ರಶ್ನೆಗಳ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. SSLCಯಲ್ಲೂ ಇಷ್ಟು ಪ್ರಶ್ನೆ ಇರಲ್ಲ, ಆಯೋಗದವರಿಗೆ ತಲೆ ಇಲ್ಲವಾ ಎಂದು ಕಿಡಿಕಾರಿದ್ದಾರೆ.
ವಿಜಯಪುರ, ಅಕ್ಟೋಬರ್ 04: ಎಸ್ಎಸ್ಎಲ್ಸಿಯಲ್ಲೂ ಇಷ್ಟು ಪ್ರಶ್ನೆ ಇರಲ್ಲ, ಆಯೋಗದವರಿಗೆ ತಲೆ ಇಲ್ಲವಾ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashoka) ವಾಗ್ದಾಳಿ ಮಾಡಿದ್ದಾರೆ. ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ್ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾನ ಮರ್ಯಾದೆ ಇಟ್ಟುಕೊಂಡು ಪ್ರಶ್ನೆಗಳನ್ನು ಸೇರಿಸಬೇಕಿತ್ತು. ಹಳ್ಳಿಯಲ್ಲಿರೋ ಕೂಲಿ ಮಾಡುವವರಿಗೆ ಇಷ್ಟು ಪ್ರಶ್ನೆಗಳನ್ನು ಕೇಳಿದ್ರೆ ಹೇಗೆ? ಡಿಸಿಎಂ ಡಿ.ಕೆ.ಶಿವಕುಮಾರ್‌ಗೇ ಪ್ರಶ್ನೆಗಳಿಗೆ ಉತ್ತರಿಸಲು ಆಗಲ್ಲ, ಇನ್ನು ಸಾಮಾನ್ಯರಿಗೆ ಉತ್ತರ ಕೊಡಲು ಆಗತ್ತಾ ಎಂದು ಪ್ರಶ್ನಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
