ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳಸಾಗಣೆ ಯತ್ನ: 93 ಜಾನುವಾರುಗಳ ರಕ್ಷಿಸಿದ BSF ಪಡೆ

ಮೇಘಾಲಯದ ಗಡಿ ಭಾಗದಲ್ಲಿ ಅಕ್ರಮವಾಗಿ ದುಷ್ಕರ್ಮಿಗಳು ಜಾನುವಾರು ಕಳ್ಳಸಾಗಣೆ ಪ್ರಯತ್ನ ಮಾಡಿದ್ದಾರೆ. ಇದನ್ನು ಬಿಎಸ್‌ಎಫ್ ಪಡೆ ವಿಫಲಗೊಳಿಸಿದ್ದಾರೆ. ಮೇಘಾಲಯದ ಅಂತರಾಷ್ಟ್ರೀಯ ಗಡಿಯಲ್ಲಿ 93 ಜಾನುವಾರು ಬಿಎಸ್‌ಎಫ್ ರಕ್ಷಸಿದೆ.

Follow us
ಅಕ್ಷಯ್​ ಪಲ್ಲಮಜಲು​​
|

Updated on: Dec 30, 2023 | 2:28 PM

ಶಿಲ್ಲಾಂಗ್, ಡಿ.30: ಮೇಘಾಲಯದಲ್ಲಿ ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್‌ಎಫ್) ಪಡೆಗಳು ಗಡಿ ಮಾತ್ರವಲ್ಲ ಇಂತಹ ಅಕ್ರಮ ಸಾಗಣೆಗಳನ್ನು ತಡೆಯುವಲ್ಲಿಯು ತುಂಬಾ ಕಾರ್ಯಪ್ರವೃತ್ತರಾಗಿರುತ್ತಾರೆ. ಮೇಘಾಲಯದ ಗಡಿ ಭಾಗದಲ್ಲಿ ಅಕ್ರಮವಾಗಿ ದುಷ್ಕರ್ಮಿಗಳು ಜಾನುವಾರು ಕಳ್ಳಸಾಗಣೆ ಪ್ರಯತ್ನ ಮಾಡಿದ್ದಾರೆ. ಇದನ್ನು ಬಿಎಸ್‌ಎಫ್ ಪಡೆ ವಿಫಲಗೊಳಿಸಿದ್ದಾರೆ. ಮೇಘಾಲಯದ ಅಂತರಾಷ್ಟ್ರೀಯ ಗಡಿಯಲ್ಲಿ 93 ಜಾನುವಾರು ಬಿಎಸ್‌ಎಫ್ ರಕ್ಷಸಿದೆ. ಮೂಲಗಳ ಪ್ರಕಾರ, ಪಶ್ಚಿಮ ಜೈನ್ತಿಯಾ ಹಿಲ್ಸ್‌ನ ಗಡಿ ಪ್ರದೇಶದ ಮೂಲಕ ಜಾನುವಾರುಗಳನ್ನು ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಇದೀಗ ಹಲವುಗಳನ್ನು ಬಿಎಸ್‌ಎಫ್ ಪಡೆ ರಕ್ಷಣೆ ಮಾಡಿದೆ. ಈ ಜಾನುವಾರುಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳಸಾಗಣೆಯನ್ನು ತಡೆಯಲು ಬಿಎಸ್‌ಎಫ್ ಹಲವಾರು ಕ್ರಮಗಳನ್ನು ಕೈಗೊಂಡಿದೆ ಮತ್ತು ಹಲವಾರು ಕಳ್ಳಸಾಗಣೆ ತಡೆಯುವಲ್ಲಿ ಯಶಸ್ವಿಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ