ಝಗಮಗಿಸಿದ ಬೃಂದಾವನ: ಕಾವೇರಿ ಆರತಿಯಲ್ಲಿ ಭಕ್ತಿ ಪರಾಕಾಷ್ಠೆ, ವಿಡಿಯೋ ನೋಡಿ

Updated on: Sep 27, 2025 | 11:45 AM

ಡಿಸಿಎಂ ಡಿ.ಕೆ ಶಿವಕುಮಾರರ ಆಸೆಯಂತೆ ಕಾವೇರಿ ಆರತಿಗೆ ಚಾಲನೆ ಸಿಕ್ಕಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಎಆರ್​ಎಸ್​ನ ಬೃಂದಾವನದಲ್ಲಿ ಕಾವೇರಿ ಮೂರ್ತಿಗೆ ಆರತಿ ಬೆಳಗಿ ಪೂಜೆ ಸಲ್ಲಿಸುವುದರ ಮೂಲಕ ಈ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಈ ವೇಳೆ ಡಿಕೆ ಶಿವಕುಮಾರ್ ಮಾತನಾಡಿ, ಮುಂದಿನ ದಿನಗಲಲ್ಲಿ ಇನ್ನೂ ಬೃಹತ್ ಮಟ್ಟದಲ್ಲಿ ಕಾವೇರಿ ಆರತಿ ನಡೆಸುವುದಾಗಿ ಹೇಳಿದರು.

ಮಂಡ್ಯ, ಸೆಪ್ಟೆಂಬರ್ 27: ಡಿಸಿಎಂ ಡಿ.ಕೆ ಶಿವಕುಮಾರ್ ಕನಸಿನಂತೆ ಕಾವೇರಿ ಆರತಿಗೆ ಚಾಲನೆ ಸಿಕ್ಕಿದೆ. ಜಿಲ್ಲೆಯ ಶ್ರೀರಂಗಪಟ್ಟಣದ ಕೆಆರ್​ಎಸ್​ನ ಬೃಂದಾವನದಲ್ಲಿ ಗಂಗಾರತಿಯ ಮಾದರಿಯಲ್ಲಿ ಕಾವೇರಿ ಆರತಿ ನಡೆಸಲಾಗುತ್ತಿದೆ. ಗೋಧೋಳಿ ಮುಹೂರ್ತದಲ್ಲಿ ಕಾವೇರಿ ಮೂರ್ತಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಲಾಯಿತು. ಜೀವನದಿಗೆ ಮಂತ್ರಘೋಷಗಳ ನಮನದೊಂದಿಗೆ ಕಾವೇರಿ ಆರತಿ ಅದ್ಧೂರಿಯಾಗಿ ಆರಂಭವಾಯಿತು. ಆರತಿಗೆ ಚಾಲನೆ ನೀಡಿ ಮಾತನಾಡಿದ ಡಿ.ಕೆ ಶಿವಕುಮಾರ್ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದಲ್ಲಿ ಕಾವೇರಿ ಆರತಿ ಮಾಡುವುದಾಗಿ ಹೇಳಿದರು. ಇದರ ದೃಶ್ಯಾವಳಿಗಳು ಇಲ್ಲಿವೆ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.