ಸಿಬಿಐ ದಾಳಿ: ಕರ್ನಾಟಕ ವಾಲ್ಮೀಕಿ ನಿಗಮ ಹಗರಣದಲ್ಲಿ ಬಿಜೆಪಿಗೂ ನಂಟು?
ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ Valmiki Scam) ವರ್ಗಾವಣೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ಬಳಿಕ ಇದೀಗ ಸಿಬಿಐ ದಾಳಿ ಮಾಡಿದೆ. ಹೌದು..ಬಳ್ಳಾರಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಗೋವಿಂದರಾಜಲು ಅವರ ಮನೆ ಮೇಲೆ ಸಿಬಿಐ ದಾಳಿ ಮಾಡಿದೆ. ಇಂದು ಬೆಳಗ್ಗೆ 3 ಕಾರುಗಳಲ್ಲಿ ಆಗಮಿಸಿ ದಾಳಿ ನಡೆಸಿದ್ದ CBI ಅಧಿಕಾರಿಗಳು, ಗೋವಿಂದರಾಜಲು ಮನೆಯಿಂದ ಕೆಲ ಮಹತ್ವದ ದಾಖಲೆಗಳನ್ನು ಮೂಟೆಯಲ್ಲಿ ಕೊಂಡೊಯ್ದಿದ್ದಾರೆ. ಹಾಗಾದ್ರೆ, ವಾಲ್ಮೀಕಿ ನಿಗಮದ ಹಗರಣದಲ್ಲಿ ಬಿಜೆಪಿಗೂ ನಂಟು ಇದೆಯಾ ಎನ್ನು ಪ್ರಶ್ನೆಗಳು ಉದ್ಭವಿಸಿವೆ.
ಬಳ್ಳಾರಿ, (ಸೆಪ್ಟೆಂಬರ್ 15): ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ Valmiki Scam) ವರ್ಗಾವಣೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ಬಳಿಕ ಇದೀಗ ಸಿಬಿಐ ದಾಳಿ ಮಾಡಿದೆ. ಹೌದು..ಬಳ್ಳಾರಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಗೋವಿಂದರಾಜಲು ಅವರ ಮನೆ ಮೇಲೆ ಸಿಬಿಐ ದಾಳಿ ಮಾಡಿದೆ. ಇಂದು ಬೆಳಗ್ಗೆ 3 ಕಾರುಗಳಲ್ಲಿ ಆಗಮಿಸಿ ದಾಳಿ ನಡೆಸಿದ್ದ CBI ಅಧಿಕಾರಿಗಳು, ಗೋವಿಂದರಾಜಲು ಮನೆಯಿಂದ ಕೆಲ ಮಹತ್ವದ ದಾಖಲೆಗಳನ್ನು ಮೂಟೆಯಲ್ಲಿ ಕೊಂಡೊಯ್ದಿದ್ದಾರೆ. ಹಾಗಾದ್ರೆ, ವಾಲ್ಮೀಕಿ ನಿಗಮದ ಹಗರಣದಲ್ಲಿ ಬಿಜೆಪಿಗೂ ನಂಟು ಇದೆಯಾ ಎನ್ನು ಪ್ರಶ್ನೆಗಳು ಉದ್ಭವಿಸಿವೆ.
ಈ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವರಾಗಿದ್ದ ಬಿ ನಾಗೇಂದ್ರ ಅವರ ತಲೆದಂಡವಾಗಿದ್ದು, ಇದನ್ನೇ ಇಟ್ಟುಕೊಂಡು ವಿಪಕ್ಷ ಬಿಜೆಪಿ ನಾಯಕರು ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ಮಾಡಿದ್ದರು. ಆದ್ರೆ, ಇದೀಗ ಇದೇ ಪ್ರಕರಣ ಸಂಬಂಧ ಬಿಜೆಪಿ ಮುಖಂಡನ ಮನೆ ಮೇಲೆ ಸಿಬಿಐ ದಾಳಿ ಮಾಡಿದ್ದು, ಈ ಹಗರಣದಲ್ಲಿ ಬಿಜೆಪಿಗೂ ನಂಟು ಇದೆಯಾ ಎನ್ನುವ ಚರ್ಚೆಗಳು ಶುರುವಾಗಿವೆ.
