ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿಅರ್ ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ, ತೆಲುಗು ನಟಿ ಹೇಮಾ ಮತ್ತು ಇತರ ನಟಿಯರು ಭಾಗಿ

|

Updated on: May 20, 2024 | 10:24 AM

ಪೊಲೀಸರು 17 ಎಂಡಿಎಂಎ ಮಾತ್ರೆ ಮತ್ತು ಕೊಕೇನ್ ಅಲ್ಲಿಂದ ವಶಪಡಿಸಿಕೊಂಡಿದ್ದಾರೆ. ಆಂದ್ರಪ್ರದೇಶದ ಶಾಸಕರೊಬ್ಬರ ಕಾರ್ ಪಾರ್ಕಿಂಗ್ ಪಾಸ್ ಪಾರ್ಟಿ ನಡೆಯುತ್ತಿದ್ದ ಸ್ಥಳದಿಂದ ಬರಾಮತ್ತಾಗಿದೆ. ಎಲೆಕ್ಟ್ರಾನಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಜಿಅರ್ ಫಾರ್ಮ್ ಹೌಸ್ ಯಾರಿಗೆ ಸೇರಿದ್ದು ಅನ್ನೋದು ಇನ್ನೂ ಗೊತ್ತಾಗಿಲ್ಲ.

ಬೆಂಗಳೂರು: ನಗರದ ಹೊರವಲಯ ಫಾರ್ಮ್ ಹೌಸ್ ಗಳಲ್ಲಿ, ರೆಸಾರ್ಟ್ ಗಳಲ್ಲಿ ರೇವ್ ಪಾರ್ಟಿಗಳು (rave party) ನಡೆಯೋದು ಇದು ಮೊದಲನೇಯದಲ್ಲ ಕೊನೆಯದೂ ಅಲ್ಲ, ಅವು ನಿಯಮಿತವಾಗಿ ನಡಯುತ್ತಿರುತ್ತವೆ ಮತ್ತು ಪ್ರತಿಷ್ಠಿತರು ಇಲ್ಲವೇ ಅವರ ಮಕ್ಕಳು ಪಾಲ್ಗೊಂಡಿರುತ್ತಾರೆ. ಹೆಂಡ, ಹೆಣ್ಣು, ಡ್ರಗ್ಸ್ ಜೊತೆ ಮೋಜು ಮಸ್ತಿ ರೇವ್ ಪಾರ್ಟಿಗಳ ಉದ್ದೇಶವಾಗಿರುತ್ತದೆ. ನಿನ್ನೆ ರಾತ್ರಿ ನಗರದ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ಜಿಅರ್ ಫಾರ್ಮ್ ಹೌಸ್ ನಲ್ಲಿ (GR farmhouse) ಪಾರ್ಟಿ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಸಿಬಿ ದಾಳಿ ನಡೆಸಿದಾಗ ಆಂಧ್ರ ಪ್ರದೇಶ ಮತ್ತು ಬೆಂಗಳೂರು ಮೂಲದ ಸುಮಾರು 100 ಕ್ಕೂ ಹೆಚ್ಚು ಜನ ಇದರಲ್ಲಿ ಭಾಗಿಯಾಗಿದ್ದು ಗೊತ್ತಾಗಿದೆ. ಅವರಲ್ಲಿ ತೆಲುಗು ನಟಿ ಹೇಮಾ (Telugu actor Hema) ಸೇರಿದಂತೆ ಕೆಲ ಬೇರೆ ನಟಿಯರೂ ಇದ್ದರು. ಪೊಲೀಸರು 17 ಎಂಡಿಎಂಎ ಮಾತ್ರೆ ಮತ್ತು ಕೊಕೇನ್ ಅಲ್ಲಿಂದ ವಶಪಡಿಸಿಕೊಂಡಿದ್ದಾರೆ. ಆಂದ್ರಪ್ರದೇಶದ ಶಾಸಕರೊಬ್ಬರ ಕಾರ್ ಪಾರ್ಕಿಂಗ್ ಪಾಸ್ ಪಾರ್ಟಿ ನಡೆಯುತ್ತಿದ್ದ ಸ್ಥಳದಿಂದ ಬರಾಮತ್ತಾಗಿದೆ. ಎಲೆಕ್ಟ್ರಾನಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಜಿಅರ್ ಫಾರ್ಮ್ ಹೌಸ್ ಯಾರಿಗೆ ಸೇರಿದ್ದು ಅನ್ನೋದು ಇನ್ನೂ ಗೊತ್ತಾಗಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ ಆರೋಪ: ಯೂಟ್ಯೂಬರ್ ಎಲ್ವಿಶ್ ಯಾದವ್ ಬಂಧನ