Rave party: ಜೆಡಿ ಗಾರ್ಡನ್ ರೇವ್ ಪಾರ್ಟಿ -ಬಳ್ಳಾರಿ ಮೂಲದ ಗಣಿ ಉದ್ಯಮಿ ಪುತ್ರ ಸೇರಿದಂತೆ ಪ್ರಭಾವಿ ಪುತ್ರರು ಭಾಗಿ?

CCB: ಸೆಪ್ಟೆಂಬರ್ 6 ರಂದು ಬಿಐಎಎಲ್ ಏರ್​ ಪೋರ್ಟ್ ಠಾಣಾ ವ್ಯಾಪ್ತಿಯಲ್ಲಿ ಜೆಡಿ ಗಾರ್ಡನ್ ರೆಸಾರ್ಟ್ ನಲ್ಲಿ ಪಾರ್ಟಿ ಆಯೋಜಿಸಿದ್ದರ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಮುಂದೆ ಅದು ಸಿಸಿಬಿ ಗೆ ಹಸ್ತಾಂತರಗೊಂಡಿತ್ತು.

Rave party: ಜೆಡಿ ಗಾರ್ಡನ್ ರೇವ್ ಪಾರ್ಟಿ -ಬಳ್ಳಾರಿ ಮೂಲದ ಗಣಿ ಉದ್ಯಮಿ ಪುತ್ರ ಸೇರಿದಂತೆ ಪ್ರಭಾವಿ ಪುತ್ರರು ಭಾಗಿ?
ಜೆಡಿ ಗಾರ್ಡನ್ ರೇವ್ ಪಾರ್ಟಿ -ಬಳ್ಳಾರಿ ಮೂಲದ ಗಣಿ ಉದ್ಯಮಿ ಪುತ್ರ ಸೇರಿದಂತೆ ಪ್ರಭಾವಿ ಪುತ್ರರು ಭಾಗಿ?
Follow us
| Updated By: ಸಾಧು ಶ್ರೀನಾಥ್​

Updated on:Sep 16, 2022 | 4:11 PM

ಬೆಂಗಳೂರು: ರಾಜಧಾನಿಯ ಹೊರವಲಯದಲ್ಲಿರುವ ಸಾದಹಳ್ಳಿ ಜೆಡಿ ಗಾರ್ಡನ್ ರೆಸಾರ್ಟ್ ನಲ್ಲಿ ರೇವ್ ಪಾರ್ಟಿ ನಡೆದಿದೆ! ಪ್ರಭಾವಿ ಗಣಿ ಉದ್ಯಮಿ ಪುತ್ರ ಸೇರಿದಂತೆ ಪ್ರಭಾವಿ ರಾಜಕಾರಣಿಗಳ ಪುತ್ರರು ಈ ರೇವ್ ಪಾರ್ಟಿಯಲ್ಲಿ (Rave party) ಭಾಗಿಯಾಗಿದ್ದಾರೆ. ಆದರೆ ಸಿಸಿಬಿ ಪೊಲೀಸರು (CCB) ಪ್ರಭಾವಿಗಳ ಪುತ್ರರನ್ನು ರಕ್ಷಿಸಲು ಮುಂದಾಗಿದ್ದು, ಪ್ರಕರಣ ಮುಚ್ಚಿಹಾಕಲು ಪ್ಲಾನ್‌ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸೆಪ್ಟೆಂಬರ್ 6 ರಂದು ಬಿಐಎಎಲ್ ಏರ್​ ಪೋರ್ಟ್ ಠಾಣಾ ವ್ಯಾಪ್ತಿಯಲ್ಲಿ (BIAL Airport) ಜೆಡಿ ಗಾರ್ಡನ್ ರೆಸಾರ್ಟ್ ನಲ್ಲಿ ಪಾರ್ಟಿ ಆಯೋಜಿಸಿದ್ದರ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಮುಂದೆ ಅದು ಸಿಸಿಬಿ ಗೆ ಹಸ್ತಾಂತರಗೊಂಡಿತ್ತು. ಹೊರ ದೇಶದ-ಹೊರ ರಾಜ್ಯದ ಯುವತಿಯರ ಕರೆ ತಂದು ವೇಶ್ಯಾವಾಟಿಕೆ ನಡೆದಿತ್ತು. ಆ ವೇಳೆ ಯುವತಿಯರು ವೀಸಾ-ಪಾಸ್ ಪೋರ್ಟ್ ಹಾಜರುಪಡಿಸಿಲ್ಲ. ಹಾಗಾಗಿ ಮಾನವ ಕಳ್ಳಸಾಕಣೆ ಕಾಯ್ದೆ ಅಡಿ ಎಫ್ ಐಆರ್ ದಾಖಲಾಗಿತ್ತು. ಜೆಡಿ ಗಾರ್ಡನ್ ಮಾಲೀಕ ಶ್ರೀನಿವಾಸ್ ಸುಬ್ರಮಣ್ಯ ಸೇರಿದಂತೆ 9 ಆರೋಪಿಗಳ ವಿರುದ್ದ ಮಾತ್ರ ಕೇಸ್ ದಾಖಲು ಮಾಡಿಕೊಳ್ಳಲಾಗಿತ್ತು.

ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿಯಾದ ಬೆನ್ನಲ್ಲೇ ಠಾಣಾ ವ್ಯಾಪ್ತಿ ಬಿಐಎಎಲ್ ಏರ್​ ಪೋರ್ಟ್ ಠಾಣಾ ವ್ಯಾಪ್ತಿಯಿಂದ ಚಿಕ್ಕಜಾಲ ಠಾಣಾ ವ್ಯಾಪ್ತಿಗೆ ಬದಲಾವಣೆಗೊಂಡಿತ್ತು. ಬಳ್ಳಾರಿ ಮೂಲದ ಗಣಿ ಉದ್ಯಮಿ ಪುತ್ರ ನಿತಿನ್ ಬಚಾವ್ ಮಾಡುವ ಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. 40 ಕ್ಕೂ ಹೆಚ್ಚು ಜನರು ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದರೂ ಸಹ ಕೇವಲ 9 ಜನರ ವಿರುದ್ದ ಕೇಸ್ ದಾಖಲಾಗಿದೆ. ಹಾಗಾಗಿ ಈ ಬೆಳವಣಿಗೆಗಳು ಇದೀಗ ಸಂಶಯಕ್ಕೆ ಎಡೆಮಾಡಿಕೊಡ್ತಿದೆ.

Published On - 3:42 pm, Fri, 16 September 22

ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ