ಬೆಂಗಳೂರಲ್ಲಿ ಟೋಯಿಂಗ್ ಅವಶ್ಯಕತೆ ಕುರಿತು ಪರಿಶೀಲಿಸುತ್ತೇವೆ: ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ
ಟೋಯಿಂಗ್ (Towing) ಬಗ್ಗೆ ಪರಿಶೀಲನೆಗೆ ಹೈಕೋರ್ಟ್ ಕಾಲಾವಕಾಶ ನೀಡಿರುವ ಹಿನ್ನಲೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿ ಎಲ್ಲೆಲ್ಲಿ ಟೋಯಿಂಗ್ ಅವಶ್ಯಕತೆ ಇದೆ ಅನ್ನೋ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.
ಬೆಂಗಳೂರು: ಟೋಯಿಂಗ್ (Towing) ಬಗ್ಗೆ ಪರಿಶೀಲನೆಗೆ ಹೈಕೋರ್ಟ್ ಕಾಲಾವಕಾಶ ನೀಡಿರುವ ಹಿನ್ನಲೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿ ಎಲ್ಲೆಲ್ಲಿ ಟೋಯಿಂಗ್ ಅವಶ್ಯಕತೆ ಇದೆ ಅನ್ನೋ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು. ಯಾವ ಪದ್ಧತಿ, ಮಾರ್ಗದರ್ಶನದಡಿ ಟೋಯಿಂಗ್ ಬಳಕೆ ಆಗಬೇಕು. ಈ ಅಂಶಗಳ ಬಗ್ಗೆ ಪರಿಶೀಲಿಸಿ ಪೊಲೀಸ್ ಇಲಾಖೆ ಕ್ರಮಕೈಗೊಳ್ಳುತ್ತೆವೆ ಎಂದು ಹೇಳಿದರು.
ಹಿನ್ನೆಲೆ ನಗರದಲ್ಲಿ ವಾಹನಗಳಿಗೆ ಟೋಯಿಂಗ್ ಮಾಡುವುದನ್ನು ಸರ್ಕಾರ ಸ್ಥಗಿತಗೊಳಿಸಿದ ಹಿನ್ನೆಲೆ ಟೋಯಿಂಗ್ ವಾಹನ ಮಾಲೀಕರು, ಕಾರ್ಮಿಕರ ಸಂಘ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದವು. ರಿಟ್ ಅರ್ಜಿಯಲ್ಲಿ ಆಂಧ್ರಪ್ರದೇಶ, ತೆಲಂಗಾಣ ಮಾದರಿಯ ಟೋಯಿಂಗ್ ಬೇಕು ಎಂದು ಹೈಕೋರ್ಟ್ಗೆ ಮನವಿ ಮಾಡಿದ್ದವು. ಸಂಘದ ಮನವಿ ಕುರಿತು ತೀರ್ಮಾನ ಕೈಗೊಳ್ಳಲು ಸರ್ಕಾರ ವಿಳಂಬ ಮಾಡುತ್ತಿರುವುದಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
ಹೈಕೋರ್ಟ್ ಏಕಸದಸ್ಯ ಪೀಠ 6 ವಾರಗಳಲ್ಲಿ ಸಂಘದ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಸಂವಿಧಾನ ಬಯಸಿದ್ದ ಕಲ್ಯಾಣ ರಾಜ್ಯ ಸಾಕಾರಗೊಂಡಿಲ್ಲ. ಸರ್ಕಾರದ ನಡೆಯನ್ನು ಕಂಡು ಹೈಕೋರ್ಟ್ ಡಿ.ವಿ.ಗುಂಡಪ್ಪನವರ ಮಂಕುತಿಮ್ಮನ ಕಗ್ಗ ಉಲ್ಲೇಖಿಸಿತ್ತು.
‘ಸರ್ಕಾರ ಹರಿಗೋಲು, ತೆರಸುಳಿಗಳತ್ತಿತ್ತ’ ‘ಸುರೆ ಕುಡಿದವರು ಕೆಲರು ಹುಟ್ಟು ಹಾಕುವರು’ ‘ಬಿರುಗಾಳಿ ಬೀಸುವುದು, ಜನರೆದ್ದು ಕುಣಿಯುವುದು’ ‘ಉರುಳದಿಹದಚ್ಚರಿಯೋ ಮಂಕುತಿಮ್ಮ’ ಎಂದು ನ್ಯಾ.ಕೃಷ್ಣ ಎಸ್.ದೀಕ್ಷಿತ್ ಡಿ.ವಿ.ಜಿಯವರ ಸಾಹಿತ್ಯ ಉಲ್ಲೇಖಿಸಿದ್ದಾದ್ದರು.