ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ ಆರೋಪ: ಯೂಟ್ಯೂಬರ್ ಎಲ್ವಿಶ್ ಯಾದವ್ ಬಂಧನ

Big Boss OTT Winner Elvish Yadav Arrested: ಖ್ಯಾತ ಯೂಟ್ಯೂಬರ್ ಮತ್ತು ಬಿಗ್ ಬಾಸ್ ಒಟಿಟಿಯ ವಿಜೇತ ಎಲ್ವಿಶ್ ಯಾದವ್ ಅವರನ್ನು ವನ್ಯಜೀವಿ ಕಾಯ್ದೆ ಅಡಿ ಪೊಲೀಸರು ಬಂಧಿಸಿದ್ದಾರೆ. ರೇವ್ ಪಾರ್ಟಿಗಳಲ್ಲಿ ಹಾವಿನ ವಿಷದ ವ್ಯವಸ್ಥೆ ಮಾಡುತ್ತಿದ್ದ ಆರೋಪ ಎಲ್ವಿಶ್ ಯಾದವ್ ಮೇಲಿದೆ. ಜೊತೆಗೆ ತಮ್ಮ ಕೆಲ ಯೂಟ್ಯೂಬ್ ವಿಡಿಯೋಗಳಿಗೆ ಶೂಟ್ ಮಾಡುವಾಗ ಹಾವುಗಳನ್ನು ಬಳಸಿಕೊಂಡ ಆರೋಪವೂ ಇದೆ. ಹಾವಿನ ವಿಷ ಪೂರೈಕೆ ಮಾಡುತ್ತಿದ್ದ ಐವರನ್ನು ಈ ಹಿಂದೆ ಬಂಧಿಸಲಾಗಿತ್ತು.

ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ ಆರೋಪ: ಯೂಟ್ಯೂಬರ್ ಎಲ್ವಿಶ್ ಯಾದವ್ ಬಂಧನ
ಎಲ್ವಿಶ್ ಯಾದವ್
Follow us
|

Updated on:Mar 17, 2024 | 5:36 PM

ನವದೆಹಲಿ, ಮಾರ್ಚ್ 17: ರೇವ್ ಪಾರ್ಟಿಯೊಂದರಲ್ಲಿ ಹಾವಿನ ವಿಷದ (snake venom) ವ್ಯವಸ್ಥೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎಲ್ವಿಶ್ ಯಾದವ್ (Elvish Yadav) ಅವರನ್ನು ಪೊಲೀಸರು ಬಂಧಿಸಿದ್ದಾರೆ. ವನ್ಯಜೀವಿ ಕಾಯ್ದೆ (wildlife act) ಅಡಿಯಲ್ಲಿ ನೋಯ್ಡಾದಲ್ಲಿ ಎಲ್ವಿಶ್ ಯಾದವ್ ಸೇರಿದಂತೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ವಾರ ನಡೆದ ರೇವ್ ಪಾರ್ಟಿಗಳಲ್ಲಿ ಹಾವಿನ ವಿಷವನ್ನು ಇವರು ವ್ಯವಸ್ಥೆ ಮಾಡಿದರೆಂದು ಆರೋಪಿಸಲಾಗಿದೆ.

ಪೊಲೀಸರು ಈ ಪ್ರಕರಣ ಸಂಬಂಧ ನವೆಂಬರ್ 3ರಂದು ನೋಯ್ಡಾದ ಸೆಕ್ಟರ್ 51ರಲ್ಲಿ ಬಾಂಕ್ವೆಟ್ ಹಾಲ್​ವೊಂದರಲ್ಲಿ ದಾಳಿ ಮಾಡಿ ಐವರನ್ನು ಬಂಧಿಸಿದ್ದರು. ಅವರ ಪೈಕಿ ನಾಲ್ವರು ಹಾವಾಡಿರಾಗಿದ್ದರು. ಈ ದಾಳಿಯಲ್ಲಿ ಒಂಬತ್ತು ಹಾವುಗಳು ಹಾಗೂ ಅವುಗಳ ವಿಷವನ್ನು ಪೊಲೀಸರು ಜಫ್ತಿ ಮಾಡಿದ್ದರು. ಹಾವಿ ವಿಷವನ್ನು ಮತ್ತೇರಿಸಲು ಬಳಸಲಾಗುತ್ತದೆ. ರೇವ್ ಪಾರ್ಟಿಗಳಲ್ಲಿ ಇತರ ಮಾದಕ ವಸ್ತುಗಳ ಜೊತೆ ಹಾವಿನ ವಿಷ ಕೂಡ ಬಳಸಬಹುದು.

ಇದನ್ನೂ ಓದಿ: ಹಾಸ್ಟೆಲ್​ನಲ್ಲಿ ನಮಾಜ್​ ಮಾಡುತ್ತಿರುವ ವೇಳೆ ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ

ಈ ಪ್ರಕರಣದಲ್ಲಿ ಬಂಧಿತರಾದವರಲ್ಲಿ ಎಲ್ವಿಶ್ ಯಾದವ್ ಆರನೆಯರು. ಬಿಗ್ ಬಾಸ್ ಒಟಿಟಿಯ ಕಳೆದ ಬಾರಿಯ ಸೀಸನ್​ನಲ್ಲಿ ಎಲ್ವಿಶ್ ಯಾದವ್ ವಿಜೇತರಾಗಿದ್ದಾರೆ. ರೇವ್ ಪಾರ್ಟಿಗಳಲ್ಲಿ ಎಲ್ವಿಶ್ ಯಾದವ್ ಹಾವುಗಳನ್ನು ಬಳಸಿ ವಿಡಿಯೋ ಶೂಟ್ ಕೂಡ ಮಾಡಿದ್ದರೆನ್ನಲಾಗಿದೆ. ಖ್ಯಾತ ಯೂಟ್ಯೂಬರ್ ಕೂಡ ಆಗಿರುವ ಎಲ್ವಿಶ್ ತನ್ನ ಚಾನಲ್​ನ ಹಲವು ವಿಡಿಯೋಗಳಿಗೆ ಹಾವನ್ನು ಬಳಸಿಕೊಂಡಿದ್ದಾರೆ.

ಹಾವಿನ ವಿಷ ಸರಬರಾಜು ಮಾಡುವ ಗ್ಯಾಂಗ್ ಅನ್ನು ಹಿಡಿಯಲು ಕಾರಣರಾದ ಮೇನಕಾ ಗಾಂಧಿ

ಎಲ್ವಿಶ್ ಯಾದವ್ ಅವರ ಯೂಟ್ಯೂಬ್ ವಿಡಿಯೋಗಳಲ್ಲಿ ಹಾವುಗಳನ್ನು ಬಳಸಿಕೊಂಡಿರುವುದು ಅವರನ್ನು ಕಾನೂನಿನ ಕುಣಿಕೆಗೆ ಸಿಕ್ಕಿಸಲು ಕಾರಣವಾಗಿದೆ. ಮನೇಕಾ ಗಾಂಧಿ ನೇತೃತ್ವದ ಪೀಪಲ್ ಫಾರ್ ಅನಿಮಲ್ಸ್ ಎಂಬ ಪ್ರಾಣಿ ಹಕ್ಕು ಗುಂಪು ಅನಾಮಧೇಯರಾಗಿ ಎಲ್ವಿಶ್ ಯಾದವ್ ಅವರಿಗೆ ಕರೆ ಮಾಡಿ ತಮಗೆ ಹಾವುಗಳು ಹಾಗೂ ಅವುಗಳ ವಿಷ ಬೇಕು ಎಂದು ಫೋನ್​ನಲ್ಲಿ ಕೇಳಿದ್ದಾರೆ. ಆಗ ಎಲ್ವಿಶ್ ಯಾದವ್ ಅವರು ರಾಹುಲ್ ಎಂಬಾತನ ನಂಬರ್ ಕೊಟ್ಟಿದ್ದಾರೆ. ನೋಯ್ಡಾ ಸೆಕ್ಟರ್ 51ರಲ್ಲಿನ ಬ್ಯಾಂಕ್ವೆಟ್​ವೊಂದಕ್ಕೆ ಬರಲು ರಾಹುಲ್ ತಿಳಿಸಿದ್ದಾನೆ.

ಇದನ್ನೂ ಓದಿ: ಸಂದೇಶ್​ಖಾಲಿಯಲ್ಲಿ ಇಡಿ ಅಧಿಕಾರಿಗಳ ಮೇಲೆ ದಾಳಿ ಪ್ರಕರಣ, ಷಹಜಹಾನ್ ಶೇಖ್​ ಸಹೋದರ ಸೇರಿ ಮೂವರ ಬಂಧನ

ಪ್ರಾಣಿ ಹಕ್ಕು ತಂಡದವರು ಆ ಬಾಂಕ್ವೆಟ್ ಹಾಲ್​ಗೆ ಹೋದಾಗ ಅಲ್ಲಿ ನಾಲ್ವರು ಹಾವಾಡಿಗರು, ಒಂಬತ್ತು ಹಾವು ಮತ್ತು 20ಎಂಲ್ ಹಾವಿನ ವಿಷ ಸಂಗ್ರಹ ಇದ್ದದ್ದು ತಿಳಿಯುತ್ತದೆ. ಕೂಡಲೇ ಈ ತಂಡದ ಸದಸ್ಯರು ನೋಯ್ಡಾ ಪೊಲೀಸ್​ನ ತಂಡಕ್ಕೆ ಕರೆ ಮಾಡಿ ತಿಳಿಸುತ್ತದೆ. ತತ್​ಕ್ಷಣವೇ ಬರುವ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ, ಐವರನ್ನು ಬಂಧಿಸುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:31 pm, Sun, 17 March 24

ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ