AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಲಂಡನ್​​ನ ಭಾರತೀಯ ರೆಸ್ಟೋರೆಂಟ್​​ನಲ್ಲಿ ಅಗ್ನಿ ಅವಘಡ, ಐವರಿಗೆ ಗಂಭೀರ ಗಾಯ

Video: ಲಂಡನ್​​ನ ಭಾರತೀಯ ರೆಸ್ಟೋರೆಂಟ್​​ನಲ್ಲಿ ಅಗ್ನಿ ಅವಘಡ, ಐವರಿಗೆ ಗಂಭೀರ ಗಾಯ

ನಯನಾ ರಾಜೀವ್
|

Updated on: Aug 25, 2025 | 12:08 PM

Share

ಲಂಡನ್​​ನಲ್ಲಿರುವ ಭಾರತೀಯ ರೆಸ್ಟೋರೆಂಟ್​​ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿದ್ದ ಐದು ಜನರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಹ ಹೊರಬಂದಿದ್ದು, ಶಂಕಿತರು ಮೊದಲು ಗ್ರಾಹಕರ ಸಮ್ಮುಖದಲ್ಲಿ ರೆಸ್ಟೋರೆಂಟ್ ಒಳಗೆ ಯಾವುದೋ ದ್ರವವನ್ನು ಸಂಪಡಿಸಿದ್ದಾರೆ.

ಲಂಡನ್, ಆಗಸ್ಟ್​ 25: ಲಂಡನ್​​ನಲ್ಲಿರುವ ಭಾರತೀಯ ರೆಸ್ಟೋರೆಂಟ್​​ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿದ್ದ ಐದು ಜನರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಹ ಹೊರಬಂದಿದ್ದು, ಶಂಕಿತರು ಮೊದಲು ಗ್ರಾಹಕರ ಸಮ್ಮುಖದಲ್ಲಿ ರೆಸ್ಟೋರೆಂಟ್ ಒಳಗೆ ಯಾವುದೋ ದ್ರವವನ್ನು ಸಂಪಡಿಸಿದ್ದಾರೆ.

ಬಳಿಕ ಬೆಂಕಿ ಹಚ್ಚಿದ್ದಾರೆ. ಅಲ್ಲಿರುವವರಿಗೆ ಇದೇನೆಂದು ಅರ್ಥವಾಗುವ ಮುನ್ನವೇ ಬೆಂದು ಹೋಗಿದ್ದಾರೆ.ಇದರಿಂದಾಗಿ ರೆಸ್ಟೋರೆಂಟ್ ಕ್ಷಣಾರ್ಧದಲ್ಲಿ ಬೆಂಕಿಯಲ್ಲಿ ಆಹುತಿಯಾಯಿತು. ಲಂಡನ್‌ನ ಇಲ್ಫೋರ್ಡ್ ಪ್ರದೇಶದಲ್ಲಿ ಇಂಡಿಯನ್ ಅರೋಮಾ ಎಂಬ ಭಾರತೀಯ ರೆಸ್ಟೋರೆಂಟ್ ಇದೆ ಎಂದು ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾರೆ.

ರೆಸ್ಟೋರೆಂಟ್‌ನಲ್ಲಿದ್ದ ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷರು ಬೆಂಕಿಯಲ್ಲಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.ಈ ಪ್ರಕರಣದಲ್ಲಿ ಪೊಲೀಸರು ಶಂಕಿತ ತಂದೆ-ಮಗನನ್ನು ಬಂಧಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ