AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಕೌಟ್ ರೂಟ್ ಕ್ಲಿಯರ್ ಮಾಡಿದ ಜೋ ರೂಟ್

ನಾಕೌಟ್ ರೂಟ್ ಕ್ಲಿಯರ್ ಮಾಡಿದ ಜೋ ರೂಟ್

ಝಾಹಿರ್ ಯೂಸುಫ್
|

Updated on: Aug 25, 2025 | 1:24 PM

Share

Welsh Fire vs Trent Rockets: ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಜೋ ರೂಟ್ 41 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 64 ರನ್ ಬಾರಿಸಿದರು. ಈ ಮೂಲಕ ಟ್ರೆಂಟ್ ರಾಕೆಟ್ಸ್ ತಂಡವನ್ನು 99 ಎಸೆತಗಳಲ್ಲಿ ಗುರಿ ತಲುಪಿಸುವ ಮೂಲಕ 3 ವಿಕೆಟ್​ಗಳ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಟ್ರೆಂಟ್ ರಾಕೆಟ್ಸ್ ತಂಡವು ದಿ ಹಂಡ್ರೆಡ್ ಲೀಗ್​ನ ನಾಕೌಟ್ ಪಂದ್ಯಗಳಿಗೆ ಅರ್ಹತೆ ಪಡೆದುಕೊಂಡಿದೆ.

ದಿ ಹಂಡ್ರೆಡ್ ಲೀಗ್​ನ 27ನೇ ಪಂದ್ಯದಲ್ಲಿ ಟ್ರೆಂಟ್ ರಾಕೆಟ್ಸ್ ತಂಡ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟ್ರೆಂಟ್ ರಾಕೆಟ್ಸ್ ತಂಡವು ದಿ ಹಂಡ್ರೆಡ್ ಲೀಗ್​ನ ನಾಕೌಟ್ ಹಂತಕ್ಕೇರಿದೆ. ಈ ನಿರ್ಣಾಯಕ ಪಂದ್ಯದ ಗೆಲುವಿನ ರೂವಾರಿ ಜೋ ರೂಟ್. ಕಾರ್ಡಿಫ್​ನ ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟ್ರೆಂಟ್ ರಾಕೆಟ್ಸ್ ಹಾಗೂ ವೆಲ್ಷ್ ಫೈರ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಟ್ರೆಂಟ್ ರಾಕೆಟ್ಸ್ ತಂಡದ ನಾಯಕ ಡೇವಿಡ್ ವಿಲ್ಲಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಲ್ಷ್ ಫೈರ್ ತಂಡ ಸ್ಟೀವಿ ಎಸ್ಕಿನಾಝಿ (53) ಅವರ ಅರ್ಧಶತಕದ ನೆರವಿನೊಂದಿಗೆ 100 ಎಸೆತಗಳಲ್ಲಿ 6 ವಿಕೆಟ್ ಕಳೆದುಕೊಂಡು 150 ರನ್ ಕಲೆಹಾಕಿತು.

151 ರನ್​ಗಳ ಗುರಿ ಬೆನ್ನತ್ತಿದ ಟ್ರೆಂಟ್ ರಾಕೆಟ್ಸ್ ತಂಡಕ್ಕೆ ಟಾಮ್ ಬ್ಯಾಂಟನ್ ಹಾಗೂ ಜೋ ರೂಟ್ ಭರ್ಜರಿ ಆರಂಭ ಒದಗಿಸಿದರು. ಮೊದಲ ವಿಕೆಟ್​ಗೆ 66 ರನ್​ ಪೇರಿಸಿದ ಬಳಿಕ ಟಾಮ್ ಬ್ಯಾಂಟನ್ (32) ಔಟಾದರು. ಇದರ ಬೆನ್ನಲ್ಲೇ ದಿಢೀರ್ ಕುಸಿತಕ್ಕೊಳಗಾದ ಟ್ರೆಂಟ್ ರಾಕೆಟ್ಸ್ ತಂಡವು 136 ರನ್​ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಆದರೆ ಮತ್ತೊಂದೆಡೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಜೋ ರೂಟ್ 41 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 64 ರನ್ ಬಾರಿಸಿದರು. ಈ ಮೂಲಕ ಟ್ರೆಂಟ್ ರಾಕೆಟ್ಸ್ ತಂಡವನ್ನು 99 ಎಸೆತಗಳಲ್ಲಿ ಗುರಿ ತಲುಪಿಸುವ ಮೂಲಕ 3 ವಿಕೆಟ್​ಗಳ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಟ್ರೆಂಟ್ ರಾಕೆಟ್ಸ್ ತಂಡವು ದಿ ಹಂಡ್ರೆಡ್ ಲೀಗ್​ನ ನಾಕೌಟ್ ಪಂದ್ಯಗಳಿಗೆ ಅರ್ಹತೆ ಪಡೆದುಕೊಂಡಿದೆ.