Video: ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಮನೆಗೆ ನುಗ್ಗಿದ ಮುಸುಕುಧಾರಿಗಳು
ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಮನೆಗೆ ಮುಸುಕುಧಾರಿಗಳು ನುಗ್ಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಜೇಂದ್ರ ನಗರದ ಬಿಜಲ್ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.ಪಟ್ವಾರಿಯವರ ಕಚೇರಿಯನ್ನು ದೋಚುವ ಮೊದಲು ಒಳನುಗ್ಗಿದವರು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ವರದಿಯಾಗಿದೆ. ಮೊಬೈಲ್ ಫೋನ್‌ಗಳು ಮತ್ತು ಇತರ ವಸ್ತುಗಳನ್ನು ಇರಿಸಲಾಗಿದ್ದ ಡ್ರಾಯರ್‌ಗಳು ಮತ್ತು ಲಾಕರ್‌ಗಳನ್ನು ಒಡೆದವರು ಏನೂ ಕದಿಯದೆ ವಾಪಸಾಗಿದ್ದಾರೆ.
ಮಧ್ಯಪ್ರದೇಶ, ಸೆಪ್ಟೆಂಬರ್ 07: ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಮನೆಗೆ ಮುಸುಕುಧಾರಿಗಳು ನುಗ್ಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಜೇಂದ್ರ ನಗರದ ಬಿಜಲ್ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.ಪಟ್ವಾರಿಯ ಕಚೇರಿಯನ್ನು ದೋಚುವ ಮೊದಲು ಒಳನುಗ್ಗಿದವರು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ವರದಿಯಾಗಿದೆ. ಮೊಬೈಲ್ ಫೋನ್‌ಗಳು ಮತ್ತು ಇತರ ವಸ್ತುಗಳನ್ನು ಇರಿಸಲಾಗಿದ್ದ ಡ್ರಾಯರ್‌ಗಳು ಮತ್ತು ಲಾಕರ್‌ಗಳನ್ನು ಒಡೆದವರು ಏನೂ ಕದಿಯದೆ ವಾಪಸಾಗಿದ್ದಾರೆ.ನಗರ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜ್‌ಕುಮಾರ್ ಠಾಕೂರ್, ಎಂಪಿಇಬಿ ಅಧಿಕಾರಿ ನರೇಂದ್ರ ಠಾಕೂರ್ ಮತ್ತು ಪುನಾಸಾದಲ್ಲಿರುವ ಆರ್ಯ ಕುಟುಂಬದ ಮನೆಗಳು ಸೇರಿದಂತೆ ಪ್ರದೇಶದ ಇತರ ಮೂರು ಮನೆಗಳಿಗೂ ನುಗ್ಗಿದ್ದರು.ಕಳ್ಳರು ಈ ಮನೆಗಳ ಗ್ರಿಲ್‌ಗಳನ್ನು ಕತ್ತರಿಸಿ ಕಳ್ಳತನಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ ಏನಾದರೂ ಕದ್ದಿದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

