AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಲುಗಳ ಸುರಿಮಳೆ... ಚೀನಾವನ್ನು ಮಕಾಡೆ ಮಲಗಿಸಿ ಫೈನಲ್​ಗೆ ಎಂಟ್ರಿ ಕೊಟ್ಟ ಭಾರತ

ಗೋಲುಗಳ ಸುರಿಮಳೆ… ಚೀನಾವನ್ನು ಮಕಾಡೆ ಮಲಗಿಸಿ ಫೈನಲ್​ಗೆ ಎಂಟ್ರಿ ಕೊಟ್ಟ ಭಾರತ

ಝಾಹಿರ್ ಯೂಸುಫ್
|

Updated on: Sep 07, 2025 | 7:27 AM

Share

Hockey Asia Cup 2025: ಮೊದಲಾರ್ಧದಲ್ಲೇ ಪರಾಕ್ರಮ ಮರೆದ ಟೀಮ್ ಇಂಡಿಯಾದ ಮುನ್ಪಡೆ ಆಟಗಾರರು ಇಡೀ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದರು. ಇತ್ತ ಗೋಲುಗಳಿಸಲು ಪರದಾಡಿದ ಚೀನಾಗೆ 46ನೇ ನಿಮಿಷದಲ್ಲಿ ಅಭಿಷೇಕ್ ಮತ್ತೊಂದು ಆಘಾತ ನೀಡಿದರು. ಅದರಂತೆ ಗೋಲುಗಳ ಅಂತರ 6-0 ಗೆ ಏರಿತು. ಇನ್ನು 50ನೇ ನಿಮಿಷದಲ್ಲಿ ಅಭಿಷೇಕ್ ಕಡೆಯಿಂದಲೇ ಮತ್ತೊಂದು ಗೋಲು ದಾಖಲಾಯಿತು.

ಏಷ್ಯಾಕಪ್ ಹಾಕಿಯ ಸೂಪರ್-4 ಪಂದ್ಯದಲ್ಲಿ ಭಾರತ ತಂಡ ಅಮೋಘ ಜಯ ಸಾಧಿಸಿದೆ. ಅದು ಕೂಡ ಬಲಿಷ್ಠ ಚೀನಾ ತಂಡವನ್ನು 7-0 ಅಂತರದಿಂದ ಮಣಿಸುವ ಮೂಲಕ. ಈ ಭರ್ಜರಿ ಗೆಲುವಿನೊಂದಿಗೆ ಟೀಮ್ ಇಂಡಿಯಾ ಏಷ್ಯಾಕಪ್ ಹಾಕಿಯ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಬಿಹಾರದ ರಾಜಗೀರ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಲಾಗಿತ್ತು.

ಆದರೆ ಭಾರತೀಯ ಹೊಂದಾಣಿಕೆಯ ಪ್ರದರ್ಶನದ ಮುಂದೆ ಚೀನಾ ಆಟಗಾರರು ಮೈಮರೆತರು. ಪರಿಣಾಮ ಪಂದ್ಯದ 4ನೇ ನಿಮಿಷದಲ್ಲೇ ಶಿಲಾನಂದ್ ಲಾಕ್ರ ಗೋಲು ದಾಖಲಿಸಿದೆ. ಇದರ ಬೆನ್ನಲ್ಲೇ  ದಿಲ್‌ಪ್ರೀತ್ ಸಿಂಗ್ (7ನೇ ನಿಮಿಷ) ಎರಡನೇ ಗೋಲು ಬಾರಿಸಿದರು.

ಇನ್ನು 18ನೇ ನಿಮಿಷದಲ್ಲಿ ಸಿಕ್ಕ ಉತ್ತಮ ಪಾಸನ್ನು ಗೋಲಾಗಿ ಪರಿವರ್ತಿಸುವಲ್ಲಿ ಮನ್ದೀಪ್ ಸಿಂಗ್ ಯಶಸ್ವಿಯಾದರು. ಆ ಬಳಿಕ  ರಾಜ್ ಕುಮಾರ್ ಪಾಲ್ (37ನೇ ನಿಮಿಷ) ಮತ್ತು ಸುಖ್‌ಜೀತ್ ಸಿಂಗ್ (39ನೇ ನಿಮಿಷ) ಕಡೆಯಿಂದ ಗೋಲುಗಳು ಮೂಡಿಬಂದವು.

ಮೊದಲಾರ್ಧದಲ್ಲೇ ಪರಾಕ್ರಮ ಮರೆದ ಟೀಮ್ ಇಂಡಿಯಾದ ಮುನ್ಪಡೆ ಆಟಗಾರರು ಇಡೀ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದರು. ಇತ್ತ ಗೋಲುಗಳಿಸಲು ಪರದಾಡಿದ ಚೀನಾಗೆ 46ನೇ ನಿಮಿಷದಲ್ಲಿ ಅಭಿಷೇಕ್ ಮತ್ತೊಂದು ಆಘಾತ ನೀಡಿದರು. ಅದರಂತೆ ಗೋಲುಗಳ ಅಂತರ 6-0 ಗೆ ಏರಿತು. ಇನ್ನು 50ನೇ ನಿಮಿಷದಲ್ಲಿ ಅಭಿಷೇಕ್ ಕಡೆಯಿಂದಲೇ ಮತ್ತೊಂದು ಗೋಲು ದಾಖಲಾಯಿತು.

ಈ ಮೂಲಕ ನಿರ್ಣಾಯಕ ಪಂದ್ಯವನ್ನು 7-0 ಅಂತರದಿಂದ ಗೆಲ್ಲುವ ಮೂಲಕ ಭಾರತ ತಂಡ ಫೈನಲ್​ಗೇರಿದೆ. ಅದರಂತೆ ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಕೊರಿಯಾ ತಂಡಗಳು ಮುಖಾಮುಖಿಯಾಗಲಿದೆ.