Video: ಗೂಳಿ ದಾಳಿಗೆ ವೃದ್ಧನ ಹೊಟ್ಟೆಯಿಂದ ಹೊರಬಂದ ಕರುಳು; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ

|

Updated on: Sep 07, 2024 | 11:50 AM

ವರದಿಗಳ ಪ್ರಕಾರ, 85 ವರ್ಷದ ಕೃಪಾಲ್ ಸಿಂಗ್ ಅವರ ಎದೆ ಮತ್ತು ಹೊಟ್ಟೆಗೆ ಗೂಳಿಯ ಕೊಂಬು ಚುಚ್ಚಿ ಕೊಂಡಿದೆ. ಹೊಟ್ಟೆಗೆ ತಿವಿದ ಕಾರಣ ವೃದ್ಧನ ಹೊಟ್ಟೆಯಿಂದ ಕರುಳು ಹೊರಬಂದಿದ್ದು, ಘಟನೆಯ ಸಂಪೂರ್ಣ ದೃಶ್ಯ ಅಂಗಡಿಯೊಂದರ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಉತ್ತರ ಪ್ರದೇಶ: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೃದ್ಧರೊಬ್ಬರ ಮೇಲೆ ಏಕಾಏಕಿ ಗೂಳಿಯೊಂದು ದಾಳಿ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಗೂಳಿಯ ದಾಳಿಗೆ ವೃದ್ಧ ಮಾರುದ್ಧ ದೂರಕ್ಕೆ ಬಿದ್ದಿದ್ದು, ಹೊಟ್ಟೆಯಿಂದ ಕರುಳು ಹೊರ ಬಂದಿದೆ. ತಕ್ಷಣ ಸ್ಥಳೀಯರು ವೃದ್ಧನನ್ನು ಹತ್ತಿರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನವಾಗಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, 85 ವರ್ಷದ ಕೃಪಾಲ್ ಸಿಂಗ್ ಅವರ ಎದೆ ಮತ್ತು ಹೊಟ್ಟೆಗೆ ಗೂಳಿಯ ಕೊಂಬು ಚುಚ್ಚಿ ಕೊಂಡಿದೆ. ಹೊಟ್ಟೆಗೆ ತಿವಿದ ಕಾರಣ ವೃದ್ಧನ ಹೊಟ್ಟೆಯಿಂದ ಕರುಳು ಹೊರಬಂದಿದ್ದು, ಸ್ಥಳೀಯರು ದಂಗಾಗಿ ಹೋಗಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಅಂಗಡಿಯೊಂದರ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಬ್ಯಾಂಕ್‌ನಿಂದ ಬಿಡಿಸಿ ತಂದ ಚಿನ್ನ, ನಡುರಸ್ತೆಯಲ್ಲೇ ಕಳ್ಳತನ ; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ