ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಖಾಸಗಿ ಆಸ್ಪತ್ರೆಯೊಂದಕ್ಕೆ ಆಗಮಿಸಿರುವ ಸಿಸಿಟಿವಿ ದೃಶ್ಯಗಳು ಟಿವಿ9ಗೆ ಲಭ್ಯ!

|

Updated on: Jan 14, 2025 | 12:06 PM

ಅಪಘಾತಕ್ಕೀಡಾದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರಿನ ಸ್ಥಿತಿ ನೋಡಿದರೆ ಅದರಲ್ಲಿ ಪ್ರಯಾಣಿಸುತ್ತಿದ್ದವರು ಅದರಲ್ಲೂ ವಿಶೇಷವಾಗಿ ಚಾಲಕ ಬದುಕುಳಿದಿದ್ದೇ ಪವಾಡ. ಮರಕ್ಕೆ ಢಿಕ್ಕಿ ಹೊಡೆದ ಬಳಿಕ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಆದರೆ ಚಾಲಕ ಆರಾಮವಾಗಿ ಓಡಾಡಿಕೊಂಡಿದ್ದಾರೆ ಮತ್ತು ಅವರೇ ಪೊಲೀಸ್ ಸ್ಟೇಷನ್ ಗೆ ಹೋಗಿ ಅಪಘಾತ ನಡೆದ ಬಗ್ಗೆ ದೂರನ್ನೂ ದಾಖಲಿಸಿದ್ದಾರೆ.

ಬೆಳಗಾವಿ: ಸಂಕ್ರಾಂತಿ ಹಬ್ಬದ ದಿನದಂದೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಇಬ್ಬರೂ ಆಸ್ಪತ್ರೆ ಸೇರಿದ್ದು ದುರದೃಷ್ಟಕರ. ಲಕ್ಷ್ಮಿ ಅವರು ಅಪಘಾತ ನಡೆದ ಸ್ಥಳದಿಂದ ಕಾರೊಂದರಲ್ಲಿ ಖಾಸಗಿ ಆಸ್ಪತ್ರೆಗೆ ಅಗಮಿಸುವ ಸಿಸಿಟಿವಿ ದೃಶ್ಯಗಳು ಟಿವಿ9 ಲಭ್ಯವಾಗಿವೆ. ಸಚಿವೆ ಕಾರಿಂದ ಕೆಳಗಿಳಿಯಲು ಬಹಳ ಕಷ್ಟ ಪಟ್ಟರು. ಅವರನ್ನು ಪರೀಕ್ಷಿಸಿದ ವೈದ್ಯರು ಹೇಳುವ ಪ್ರಕಾರ ಎರಡು ಬೆನ್ನುಮೂಳೆ ಜಖಂಗೊಂಡಿವೆ ಮತ್ತು ಕುತ್ತಿಗೆಯ ಮೂಳೆಗೂ ಪೆಟ್ಟಾಗಿದೆ. ಮೂಳೆಗಳಿಗೆ ತೀವ್ರವಾಗಿ ಪೆಟ್ಟಾಗಿರುವುದರಿಂದ ಅವರಿಗೆ ಕೆಲದಿನಗಳ ಮಟ್ಟಿಗೆ ಎದ್ದು ಓಡಾಡಲು ಆಗದಿರಬಹುದು. ಅವರನ್ನು ವ್ಹೀಲ್ ಚೇರ್​ನಲ್ಲಿ ಕೂರಿಸಿಕೊಂಡು ಒಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಗಂಭೀರ ಸ್ವರೂಪದ ಗಾಯಗಾಳಾಗಿಲ್ಲ ಎಂದ ಮಗ ಮೃಣಾಲ್