ಕೇಂದ್ರ ಮಾಡ್ತಿರೋದು ಜಾತಿಗಣತಿ, ನಾವು ಮಾಡ್ತಿರೋದು ಜಾತಿಗಣತಿ ಜೊತೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ಸಿದ್ದರಾಮಯ್ಯ

Updated on: Jun 16, 2025 | 3:20 PM

ಸಿದ್ದರಾಮಯ್ಯ ಮಾಧ್ಯಮಗಳ ಬಳಿ ಬಂದಾಗ ಅವರ ಎಡಭಾಗದಲ್ಲಿದ್ದ ರೈತಾಪಿ ಸಮುದಾಯದ ಜನಗಳು ನೀರಾವರಿ ಬಗ್ಗೆ ಏನೋ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಮುಖ್ಯಮಂತ್ರಿ ಆಯ್ತಪ್ಪ ನೋಡಿ ಹೇಳ್ತೇನೆ ಅಂತ ಸಿಡುಕಿನಿಂದ ಹೇಳುತ್ತಾರೆ. ನಂತರ ಅವರು ಮಾಧ್ಯಮದವರ ಕಡೆ ತಿರುಗಿ, ನಾನಾಗಿಯೇ ಏನೂ ಹೇಳಲ್ಲ, ನೀವೇನಾದರೂ ಕೇಳಿದರೆ ಹೇಳ್ತೀನಿ ಅನ್ನುತ್ತಾರೆ.

ದಾವಣಗೆರೆ, ಜೂನ್ 16: ದಾವಣಗೆರೆ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಮ್ಮ ಸರ್ಕಾರ ಮಾಡುತ್ತಿರುವ ಜಾತಿಗಣತಿಯ ಬಗ್ಗೆ ಸ್ಪಷ್ಟನೆ ನೀಡಿದರು. ಕೇಂದ್ರ ಸರ್ಕಾರ ಜಾತಿ ಗಣತಿ ಮೇ 2027ಕ್ಕೆ ಅನ್ವಯವಾಗುವಂತೆ ಮಾಡುತ್ತಿದೆ, ಅವರು ಸಾಮಾಜಿಕ ಮತ್ತು ಶೈಕ್ಷಣಿಕ ಸರ್ವೇಯನ್ನೂ ಮಾಡುತ್ತೇವೆ ಅಂತ ಎಲ್ಲೂ ಹೇಳಿಲ್ಲ, ಅವರು ಮಾಡ್ತಿರೋದು ಜಾತಿಗಣತಿಯಾದರೆ ತಮ್ಮ ಸರ್ಕಾರ ಮಾಡುತ್ತಿರೋದು ಜಾತಿಗಣತಿಯ ಜೊತೆ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:  ಕೇಂದ್ರ ಸರ್ಕಾರದ ಜನಗಣತಿ ಜೊತೆಗೆ ಜಾತಿಗಣತಿ ನಿರ್ಧಾರ ಸ್ವಾಗತಿಸುವೆ: ಸಿದ್ದರಾಮಯ್ಯ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ