ಅಮೆರಿಕದಲ್ಲಿ ಕೂತು ಬಾಗಲಕೋಟೆ ಮನೆ ಕಳ್ಳತನ ತಪ್ಪಿಸಿದ ಶೃತಿ: ಆಗಿದ್ದೇನು?
ಅವರು ನಿವೃತ್ತ ಇಂಜಿನಿಯರ್ ,ಮನೆಯಲ್ಲಿ ಇಬ್ಬರು ವೃದ್ದ ದಂಪತಿ ಮಾತ್ರ ವಾಸವಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಚಡ್ಡಿ ಕಳ್ಳರ ಗ್ಯಾಂಗ್ ಕಳ್ಳತನಕ್ಕೆ ಎಂದು ಮನೆಯೊಳಗೆ ನುಗ್ಗಿದೆ. ಆದರೆ ಇದನ್ನು ಗಮನಿಸಿದ್ದು ಅಮೇರಿಕದಲ್ಲಿ ನೆಲೆಸಿರುವ ನಿವೃತ್ತ ಇಂಜಿನಿಯರ್ ಮಗಳು ಶೃತಿ ಮೊಬೈಲ್ ನಲ್ಲಿ ಗಮನಿಸಿದ್ದಾರೆ. ಮನೆ ಸಿಸಿ ಕ್ಯಾಮೆರಾ ಲಿಂಕ್ ಗಳು ತಮ್ಮ ಮೊಬೈಲ್‌ನಲ್ಲಿ ಅಳವಡಿಸಿಕೊಂಡಿದ್ದರಿಂದ ಕಳ್ಳರು ಮನೆಯೊಳಗೆ ನುಗ್ಗಿರುವುದು ಕಂಡುಬಂದಿದೆ. ಕೂಡಲೇ ಅವರು ಮನೆಯೊಳಗಿದ್ದ ತಮ್ಮ ತಂದೆಗೆ ಕರೆ ಮಾಡಿ ಅಲರ್ಟ್ ಮಾಡಿದ್ದಾರೆ. ಆಗ ಎಚ್ಚೆತ್ತ ಹನುಮಂತಗೌಡ ಸಂಕಪ್ಪನವರ್ ಬಾಗಿಲು ತೆರೆದಾಗ ಚಡ್ಡಿ ಗ್ಯಾಂಗ್ ಅಲ್ಲಿಂದ ಎಸ್ಕೇಪ್ ಆಗಿದೆ.
ಬಾಗಲಕೋಟೆ, (ಆಗಸ್ಟ್ 27): ಅವರು ನಿವೃತ್ತ ಇಂಜಿನಿಯರ್ ,ಮನೆಯಲ್ಲಿ ಇಬ್ಬರು ವೃದ್ದ ದಂಪತಿ ಮಾತ್ರ ವಾಸವಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಚಡ್ಡಿ ಕಳ್ಳರ ಗ್ಯಾಂಗ್ ಕಳ್ಳತನಕ್ಕೆ ಎಂದು ಮನೆಯೊಳಗೆ ನುಗ್ಗಿದೆ. ಆದರೆ ಇದನ್ನು ಗಮನಿಸಿದ್ದು ಅಮೇರಿಕದಲ್ಲಿ ನೆಲೆಸಿರುವ ನಿವೃತ್ತ ಇಂಜಿನಿಯರ್ ಮಗಳು ಶೃತಿ ಮೊಬೈಲ್ ನಲ್ಲಿ ಗಮನಿಸಿದ್ದಾರೆ. ಮನೆ ಸಿಸಿ ಕ್ಯಾಮೆರಾ ಲಿಂಕ್ ಗಳು ತಮ್ಮ ಮೊಬೈಲ್‌ನಲ್ಲಿ ಅಳವಡಿಸಿಕೊಂಡಿದ್ದರಿಂದ ಕಳ್ಳರು ಮನೆಯೊಳಗೆ ನುಗ್ಗಿರುವುದು ಕಂಡುಬಂದಿದೆ. ಕೂಡಲೇ ಅವರು ಮನೆಯೊಳಗಿದ್ದ ತಮ್ಮ ತಂದೆಗೆ ಕರೆ ಮಾಡಿ ಅಲರ್ಟ್ ಮಾಡಿದ್ದಾರೆ. ಆಗ ಎಚ್ಚೆತ್ತ ಹನುಮಂತಗೌಡ ಸಂಕಪ್ಪನವರ್ ಬಾಗಿಲು ತೆರೆದಾಗ ಚಡ್ಡಿ ಗ್ಯಾಂಗ್ ಅಲ್ಲಿಂದ ಎಸ್ಕೇಪ್ ಆಗಿದೆ. ತಂತ್ರಜ್ಞಾನ ಇಷ್ಟೊಂದು ಮುಂದುವರೆದಿದ್ದರಿಂದ ಮನೆ ದರೋಡೆಯೊಂದು ತಪ್ಪಿದಂತಾಗಿದೆ.
