ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ರನ್ನು ಅವರ ನಿವಾಸದಲ್ಲಿ ಭೇಟಿಯಾದ ಕೆಎಲ್ಇ ಸೊಸೈಟಿ ಅಧ್ಯಕ್ಷ ಪ್ರಭಾಕರ್ ಕೋರೆ
ಬೆಳಗಾವಿ ಕೆಎಲ್ ಇ ಸಮೂಹ ಶಿಕ್ಷಣ ಸಂಸ್ಥೆಗಳ ಚೇರ್ಮನ್, ಮಾಜಿ ರಾಜ್ಯಸಭಾ ಸದಸ್ಯ ಮತ್ತು ಹಿರಿಯ ಬಿಜೆಪಿ ನಾಯಕ ಪ್ರಭಾಕರ್ ಕೋರೆ ಇಂದು ಶಿವಕುಮಾರ್ ಅವರನ್ನು ಭೇಟಿಯಾದರು. ಬಹಳಷ್ಟು ಜನಕ್ಕೆ ಗೊತ್ತಿರಲಾರದು, ಕೆಎಲ್ ಈ (ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ) ಅಧೀನದಲ್ಲಿ 282 ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳಿವೆ.
ಬೆಂಗಳೂರು: ಕೆಲ ಬಿಜೆಪಿ ನಾಯಕರು ಇದ್ಕಕ್ಕಿದ್ದಂತೆ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿಯಾಗಿ ಕುತೂಹಲ ಸೃಷ್ಟಿಸುತ್ತಾರೆ. ಎಂಪಿ ರೇಣುಕಾಚಾರ್ಯ, ಬಿವೈ ರಾಘವೇಂದ್ರ, ಎಸ್ ಸೋಮಶೇಖರ್, ಮುನಿರತ್ನ ನಾಯ್ಡು (Munirathna Naidu) ಇನ್ನೂ ಕೆಲ ನಾಯಕರು ಶಿವಕುಮಾರ್ ರನ್ನು ನಗರದ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿದ್ದನ್ನು ಹಿಂದೆ ವರದಿ ಮಾಡಲಾಗಿದೆ. ಆಫ್ ಕೋರ್ಸ್ ಅವರ ಭೇಟಿಗಳ ಹಿಂದೆ ವೈಯಕ್ತಿಕ, ರಾಜಕೀಯ, ವೃತ್ತಿಪರ ಕಾರಣಗಳಿರುತ್ತವೆ ಅ ವಿಷಯ ಬೇರೆ. ಬೆಳಗಾವಿ ಕೆಎಲ್ ಇ ಸಮೂಹ ಶಿಕ್ಷಣ ಸಂಸ್ಥೆಗಳ ಚೇರ್ಮನ್, ಮಾಜಿ ರಾಜ್ಯಸಭಾ ಸದಸ್ಯ ಮತ್ತು ಹಿರಿಯ ಬಿಜೆಪಿ ನಾಯಕ ಪ್ರಭಾಕರ್ ಕೋರೆ (Prabhakar Kore) ಇಂದು ಶಿವಕುಮಾರ್ ಅವರನ್ನು ಭೇಟಿಯಾದರು. ಕಾರಣ ನಮಗೆ ಗೊತ್ತಾಗಲು ಸಾಧ್ಯವೂ ಇಲ್ಲ. ಬಹಳಷ್ಟು ಜನಕ್ಕೆ ಗೊತ್ತಿರಲಾರದು, ಕೆಎಲ್ ಈ (ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ) ಅಧೀನದಲ್ಲಿ 282 ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳಿವೆ. ಕೋರೆ ಅವರು ಕೆಎಲ್ ಈ ಸೊಸೈಟಿಯ ಅಧ್ಯಕ್ಷನಾಗಿರುವ ಜೊತೆಗೆ ಹುಬ್ಬಳ್ಳಿಯ ಕೆಎಲ್ ಈ ತಾಂತ್ರಿಕ ವಿಶ್ವವಿದ್ಯಾಲಯದ ಉಪ ಕುಲಪತಿಗಳೂ ಆಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಖಾದಿತೊಟ್ಟು ಕಾರಲ್ಲಿ ಸುತ್ತಬಯಸುವ ಕಾರ್ಯಕರ್ತರು ಪಕ್ಷಕ್ಕೆ ಬೇಕಿಲ್ಲ: ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ