ಖಾದಿತೊಟ್ಟು ಕಾರಲ್ಲಿ ಸುತ್ತಬಯಸುವ ಕಾರ್ಯಕರ್ತರು ಪಕ್ಷಕ್ಕೆ ಬೇಕಿಲ್ಲ: ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಬೂತ್ ಮಟ್ಟದಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಾ ಪಕ್ಷಕ್ಕಾಗಿ ವೋಟು ಗಿಟ್ಟಿಸುವ ಸಾಮರ್ಥ್ಯ ಹೊಂದರುವರು ಮಾತ್ರ ನಾಯಕತ್ವ ಪಡೆಯುವ ಆಸೆ ಇಟ್ಟುಕೊಳ್ಳಿ, ಕೇವಲ ಖಾದಿ ಬಟ್ಟೆ ತೊಟ್ಟು ಕಾರಲ್ಲಿ ಓಡಾಡುತ್ತಾ ಸಮಯ ವ್ಯರ್ಥ ಮಾಡುವ ಮತ್ತು ಎಂಎಲ್ ಎ, ಎಮ್ಮೆಲ್ಸಿ ಟಿಕೆಟ್ ಕೇಳುವ ಕಾರ್ಯಕರ್ತರು ಪಕ್ಷಕ್ಕೆ ಬೇಕಿಲ್ಲ ಎಂದು ಶಿವಕುಮಾರ್ ಹೇಳಿದರು.

ಖಾದಿತೊಟ್ಟು ಕಾರಲ್ಲಿ ಸುತ್ತಬಯಸುವ ಕಾರ್ಯಕರ್ತರು ಪಕ್ಷಕ್ಕೆ ಬೇಕಿಲ್ಲ: ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
|

Updated on: May 21, 2024 | 3:10 PM

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪಕ್ಷದ ಕಾರ್ಯಕರ್ತರಿಗೆ ಶ್ರದ್ಧೆವಹಿಸಿ ಕೆಲಸಮಾಡುವಂತೆ ಎಚ್ಚರಿಕೆ ಮಿಶ್ರಿತ ಸಲಹೆ ನೀಡಿದರು. ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ (KPCC Office) ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ಅವರು, ಪಕ್ಷದ ಎಲ್ಲ ಹಂತದ ಪದಾಧಿಕಾರಿಗಳನ್ನು (office bearers) ಬದಲಾವಣೆ ಮಾಡುವ ಸಮಯ ಬಂದಿದೆ. ಬೂತ್ ಮಟ್ಟದಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಾ ಪಕ್ಷಕ್ಕಾಗಿ ವೋಟು ಗಿಟ್ಟಿಸುವ ಸಾಮರ್ಥ್ಯ ಹೊಂದರುವರು ಮಾತ್ರ ನಾಯಕತ್ವ ಪಡೆಯುವ ಆಸೆ ಇಟ್ಟುಕೊಳ್ಳಿ, ಕೇವಲ ಖಾದಿ ಬಟ್ಟೆ ತೊಟ್ಟು ಕಾರಲ್ಲಿ ಓಡಾಡುತ್ತಾ ಸಮಯ ವ್ಯರ್ಥ ಮಾಡುವ ಮತ್ತು ಎಂಎಲ್ ಎ, ಎಮ್ಮೆಲ್ಸಿ ಟಿಕೆಟ್ ಕೇಳುವ ಕಾರ್ಯಕರ್ತರು ಪಕ್ಷಕ್ಕೆ ಬೇಕಿಲ್ಲ, ಹೊಸ ನಾಯಕರನ್ನು ಬೆಳೆಸಲು ಪಕ್ಷ ಸದಾ ಸಿದ್ಧವಿದೆ ಎಂದು ಶಿವಕುಮಾರ್ ಹೇಳಿದರು. ತಾವು ನೀಡಿದ ಸೂಚನೆಗಳು ಪಕ್ಷದ ಎಲ್ಲ ಕಾರ್ಯಕರ್ತರಿಗೆ ಮತ್ತು ಸೋಶಿಯಲ್ ಮೀಡಿಯ ಸೆಲ್ ಗೂ ಅನ್ವಯಿಸುತ್ತದೆ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್: ಬಿಲ್ಡರ್, ಒತ್ತುವರಿ ಮಾಡಿದವರಿಗೆ ಶಾಕ್ ಕೊಟ್ಟ ಡಿಸಿಎಂ

Follow us