ಗಂಡನ ಬಗ್ಗೆ ಬಿಗ್ ಬಾಸ್ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆಯ ಗಂಭೀರ ಆರೋಪ
ಚೈತ್ರಾ ಕುಂದಾಪುರ ಅವರ ಕುಟುಂಬದಲ್ಲಿನ ಬಿರುಕು ದೊಡ್ಡದಾಗಿದೆ. ಚೈತ್ರಾ ವಿರುದ್ಧ ತಂದೆ ಬಾಲಕೃಷ್ಣ ನಾಯ್ಕ್ ಅವರು ಅನೇಕ ಆರೋಪಗಳನ್ನು ಮಾಡಿದ್ದಾರೆ. ಪತಿ ಶ್ರೀಕಾಂತ್ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಹೇಳಿದ ಮಾತುಗಳು ಸುಳ್ಳು ಎಂದು ಬಾಲಕೃಷ್ಣ ನಾಯ್ಕ್ ಅವರು ಹೇಳಿದ್ದಾರೆ. ವಿಡಿಯೋ ಇಲ್ಲಿದೆ..
‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋಗೆ ಚೈತ್ರಾ ಕುಂದಾಪುರ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿ ಆಟ ಆಡುತ್ತಿದ್ದಾರೆ. ಇತ್ತೀಚಿನ ಸಂಚಿಕೆಯಲ್ಲಿ ಅವರು ತಮ್ಮ ಪತಿ ಶ್ರೀಕಾಂತ್ ಬಗ್ಗೆ ಮಾತನಾಡಿದ್ದರು. ಮೊದಲಿನಿಂದಲೂ ಶ್ರೀಕಾಂತ್ ಅವರು ತಮ್ಮ ಬದುಕಿಗೆ ಬೆಂಬಲವಾಗಿ ನಿಂತಿದ್ದರು ಎಂದು ಚೈತ್ರಾ (Chaithra Kundapura) ಹೇಳಿದ್ದರು. ಆದರೆ ಅವರು ಹೇಳಿದ್ದು ಸುಳ್ಳು ಎಂದು ಚೈತ್ರಾ ತಂದೆ ಬಾಲಕೃಷ್ಣ ನಾಯ್ಕ್ ಅವರು ಹೇಳಿದ್ದಾರೆ. ‘ಶ್ರೀಕಾಂತನೇ ತನ್ನ ವಿದ್ಯಾಭ್ಯಾಸಕ್ಕೆ ಬೆಂಬಲವಾಗಿ ಇದ್ದ ಅಂತ ಅವಳು ಹೇಳಿದ್ದಾಳೆ. ಅದು ಸುಳ್ಳು. ಅವನು ಕೂಡ ನನಗೆ ಮಾನಸಿಕ ಹಿಂಸೆ ನೀಡಿದ್ದಾನೆ’ ಎಂದು ಬಾಲಕೃಷ್ಣ ನಾಯ್ಕ್ (Balakrishna Naik) ಅವರು ಹೇಳಿದ್ದಾರೆ. ಇನ್ನೂ ಸಾಕಷ್ಟು ಆರೋಪಗಳನ್ನು ಅವರು ಮಾಡಿದ್ದಾರೆ. ವಿಡಿಯೋ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
