ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಇತ್ತೀಚಿನ ದಿನಗಳಲ್ಲಿ ಅಶ್ವಿನಿ ಗೌಡ ಅವರು ಸೈಲೆಂಟ್ ಆಗಿದ್ದರು. ಆದರೆ ಈಗ ಮತ್ತೆ ಅವರು ಅಬ್ಬರಿಸಲು ಶುರು ಮಾಡಿದ್ದಾರೆ. ‘ಈ ದುರಹಂಕಾರ ನಮ್ಮ ಹತ್ತಿರ ನಡೆಯೋದೇ ಇಲ್ಲ’ ಎಂದು ಚೈತ್ರಾ ಕುಂದಾಪುರ ಅವರು ಅಶ್ವಿನಿಗೆ ಹೇಳಿದ್ದಾರೆ. ಡಿ.12ರ ಎಪಿಸೋಡ್ ಪ್ರೋಮೋ ಇಲ್ಲಿದೆ ನೋಡಿ.
ರಜತ್ ಕಿಶನ್ ಮತ್ತು ಚೈತ್ರಾ ಕುಂದಾಪುರ (Chaithra Kundapura) ಅವರು ಸಿಕ್ಕಾಪಟ್ಟೆ ಕಿರಿಕ್ ಪಾರ್ಟಿಗಳು ಎಂಬುದು ಕಳೆದ ಸೀಸನ್ನಲ್ಲೇ ಗೊತ್ತಾಗಿತ್ತು. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲೂ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಆಟ ಆಡುತ್ತಿದ್ದಾರೆ. ಅವರ ಆಗಮನಕ್ಕೂ ಮುನ್ನ ವೈಲೆಂಟ್ ಆಗಿದ್ದ ಅಶ್ವಿನಿ ಗೌಡ (Ashwini Gowda) ಅವರು ಇತ್ತೀಚಿನ ದಿನಗಳಲ್ಲಿ ಸೈಲೆಂಟ್ ಆಗಿದ್ದರು. ಆದರೆ ಈಗ ಅವರು ಮತ್ತೆ ಅಬ್ಬರಿಸಲು ಶುರು ಮಾಡಿದ್ದಾರೆ. ‘ಈ ದುರಹಂಕಾರ ನಮ್ಮ ಹತ್ರ ನಡೆಯೋದೇ ಇಲ್ಲ’ ಎಂದು ಚೈತ್ರಾ ಕುಂದಾಪುರ ಅವರು ಅಶ್ವಿನಿ ಗೌಡಗೆ ಹೇಳಿದ್ದಾರೆ. ಚೈತ್ರಾ ಜೊತೆ ರಜತ್ ಕೂಡ ಕೈ ಜೋಡಿಸಿದ್ದಾರೆ. ಇದರಿಂದಾಗಿ ದೊಡ್ಡ ಜಗಳ ಉಂಟಾಗಿದೆ. ಡಿಸೆಂಬರ್ 12ರ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

