ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಬಿಗ್ ಬಾಸ್ನಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಇದೆ. ಈ ಬಾರಿ ಅವರು ಗಿಲ್ಲಿ ನಟ ಅವರು ಗೆಲ್ಲಬಹುದು ಎಂಬ ಅಭಿಪ್ರಾಯ ಅನೇಕರದ್ದು. ಈಗ ಚೈತ್ರಾ ಅವರು ಒಂದು ಶಾಕಿಂಗ್ ವಿಚಾರ ಹೇಳಿದರು. ಅವರ ಪ್ರಕಾರ ಬಿಗ್ ಬಾಸ್ಬನ ಗೆಲ್ಲೋದು ಯಾರು ಎಂಬುದನ್ನು ರಿವೀಲ್ ಮಾಡಿದರು. ಆ ಬಗ್ಗೆ ಇಲ್ಲಿದೆ ವಿವರ.
ಚೈತ್ರಾ ಅವರು ಬಿಗ್ ಬಾಸ್ನಿಂದ ಹೊರ ಬಂದಿದ್ದಾರೆ. ಈ ವೇಳೆ ಅವರು ಟಿವಿ9 ಕನ್ನಡಕ್ಕೆ ಸಂದರ್ಶನ ನೀಡಿದರು. ಈ ವೇಳೆ ಬಿಗ್ ಬಾಸ್ ಯಾರು ಗೆಲ್ಲುತ್ತಾರೆ ಎಂದು ಕೇಳಲಾಯಿತು. ಇದಕ್ಕೆ ಅವರು ಉತ್ತರಿಸಿದ್ದಾರೆ. ‘ಯಾರು ಗೆಲ್ಲುತ್ತಾರೆ, ಯಾರು ಗೆಲ್ಲಬೇಕು ಎಂದು ನಾನು ಹೇಳೋದು ಸರಿ ಆಗೋದಿಲ್ಲ. ಎಲ್ಲರೂ ಚೆನ್ನಾಗಿ ಆಡುತ್ತಿದ್ದಾರೆ. ಫ್ಯಾಮಿಲಿ ವೀಕ್ ಆದ ಬಳಿಕ ಸ್ಪರ್ಧಿಗಳಲ್ಲಿ ಒಂದಷ್ಟು ಬದಲಾವಣೆ ಆಗಬಹುದು’ ಎಂದು ಚೈತ್ರಾ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
