AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾನ-ಧರ್ಮಕ್ಕೆ ಇಂದು ಸುವರ್ಣಾವಕಾಶ! ಚೈತ್ರ ಪೌರ್ಣಮಿಯ ಪುಣ್ಯ ಸ್ನಾನ ಮತ್ತು ಮಂತ್ರ ಜಪದ ವಿಶೇಷ ಫಲ

ದಾನ-ಧರ್ಮಕ್ಕೆ ಇಂದು ಸುವರ್ಣಾವಕಾಶ! ಚೈತ್ರ ಪೌರ್ಣಮಿಯ ಪುಣ್ಯ ಸ್ನಾನ ಮತ್ತು ಮಂತ್ರ ಜಪದ ವಿಶೇಷ ಫಲ

ಅಕ್ಷಯ್​ ಪಲ್ಲಮಜಲು​​
|

Updated on: Apr 02, 2026 | 6:49 AM

Share

ಚೈತ್ರ ಪೌರ್ಣಮಿಯು ಭಗವಂತನ ಕೃಪೆ ಪಡೆಯಲು ಅತ್ಯಂತ ಪವಿತ್ರ ದಿನ. ಈ ದಿನ ವಿಷ್ಣು ಮತ್ತು ಚಿತ್ರಗುಪ್ತನ ಪೂಜೆ, ಪವಿತ್ರ ಸ್ನಾನ, ಮಂತ್ರ ಜಪ ಮತ್ತು ದಾನ ಧರ್ಮಾದಿಗಳನ್ನು ಮಾಡುವುದರಿಂದ ಕೆಟ್ಟ ಕರ್ಮಗಳು ಕಡಿಮೆಯಾಗುತ್ತವೆ. ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ, ಕೌಟುಂಬಿಕ ಕಲಹ ನಿವಾರಣೆಗೆ ಹಳದಿ ಬಟ್ಟೆಯ ತಂತ್ರವನ್ನು ಅನುಸರಿಸಬಹುದು. ಇದು ನಿಮ್ಮ ಸಂಕಲ್ಪಗಳನ್ನು ಈಡೇರಿಸುವ ಶಕ್ತಿ ಹೊಂದಿದೆ.

ಬೆಂಗಳೂರು, ಏ.1: ಚೈತ್ರ ಪೌರ್ಣಮಿ ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವದ ಪರ್ವ ದಿನಗಳಲ್ಲಿ ಒಂದಾಗಿದೆ. ಇದನ್ನು ದವನದ ಹುಣ್ಣಿಮೆ ಎಂದೂ ಕರೆಯಲಾಗುತ್ತದೆ. ವರ್ಷದ ಪ್ರಥಮ ಮಾಸವಾದ ಚೈತ್ರ ಮಾಸದಲ್ಲಿ ಬರುವ ಈ ಮೊದಲ ಪೂರ್ಣಿಮೆಗೆ ವಿಶೇಷ ಪ್ರಾಮುಖ್ಯತೆ ಇದೆ. ಈ ದಿನ ಭಗವಾನ್ ವಿಷ್ಣು ಮತ್ತು ಕರ್ಮಗಳ ಲೆಕ್ಕ ಇಡುವ ಚಿತ್ರಗುಪ್ತನನ್ನು ಪೂಜಿಸಲಾಗುತ್ತದೆ. ಪವಿತ್ರ ಸ್ನಾನ ಮಾಡಿ, ವಿಷ್ಣು ಸಹಸ್ರನಾಮ ಜಪಿಸುವುದು ಅಥವಾ “ಓಂ ನಮೋ ಭಗವತೇ ವಾಸುದೇವಾಯ” ಮಂತ್ರ ಪಠಿಸುವುದು ಶ್ರೇಷ್ಠ. ಅನ್ನದಾನ, ವಸ್ತ್ರದಾನ ಮಾಡುವುದರಿಂದ ಕರ್ಮಗಳ ಪ್ರಭಾವ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಸಾಕ್ಷಾತ್ ಇಂದ್ರ ಮತ್ತು ಶಿವನು ಕೂಡ ಈ ಪೌರ್ಣಮಿಯ ಮಹತ್ವವನ್ನು ಸಾರಿದ್ದಾರೆ. ದೇವಾಲಯಗಳಿಗೆ ಭೇಟಿ ನೀಡುವುದು, ಹಿರಿಯರ ಆಶೀರ್ವಾದ ಪಡೆಯುವುದು, ದಾನ ಧರ್ಮಗಳನ್ನು ಮಾಡುವುದು ಈ ದಿನದ ಆಚರಣೆಯ ಪ್ರಮುಖ ಭಾಗವಾಗಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More