ವಿಘ್ನ ವಿನಾಶಕನಿಗೆ ತಿಂಡಿ-ತಿನಿಸುಗಳ ನೈವೇದ್ಯ, ಶಿರಸಿ ಮಲೆನಾಡು ಭಾಗದಲ್ಲಿ ಚಕ್ಕುಲಿ ಕಂಬಳದ ಸಂಭ್ರಮ
[lazy-load-videos-and-sticky-control id=”X_sNd9Pg2lE”] ಕಾರವಾರ: ಹಬ್ಬ ಅಂದ್ರೆ ಅದೇನೋ ಸಡಗರ, ಎಲ್ಲಿಲ್ಲದ ಸಂಭ್ರಮ. ಕರಾವಳಿ ಭಾಗದಲ್ಲಿ ಹಬ್ಬದ ಗಮ್ಮತ್ತು ಒಂದು ರೀತಿಯಾದ್ರೆ, ಮಲೆನಾಡಿಗರ ಸಂಭ್ರಮದ ವಿಶೇಷತೆಯೇ ಬೇರೆ. ಇನ್ನು ಶಿರಸಿಯಲ್ಲಂತೂ ವಿಶೇಷ ತಿಂಡಿ ತಿನಿಸು ಮಾಡೋದ್ರಲ್ಲಿ ಜನರು ನಿರತರಾಗಿದ್ದು, ಕೂಡು ಕುಟುಂಬಗಳು ಒಟ್ಟಿಗೆ ಸೇರಿ ಸಂತಸ ಇಮ್ಮಡಿಯಾಗಿದೆ. ಚಕ್ಕುಲಿ.. ವಿಘ್ನ ವಿನಾಯಕನಿಗೆ ಪ್ರಿಯವಾದ ತಿಂಡಿ. ಹೀಗಾಗಿ ಮಲೆನಾಡ ಭಾಗದಲ್ಲಿ ಚಕ್ಕುಲಿ ಕಂಬಳದ ಸಂಭ್ರಮ ಜೋರಾಗಿದೆ. ಶಿರಸಿಯ ಹೆಗಡೆಕಟ್ಟೆ ಸಮೀಪದ ಕಲ್ಮನೆಯ ಪ್ರತಿಯೊಬ್ಬರು ಚಕ್ಕುಲಿ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ 4 […]
ಕಾರವಾರ: ಹಬ್ಬ ಅಂದ್ರೆ ಅದೇನೋ ಸಡಗರ, ಎಲ್ಲಿಲ್ಲದ ಸಂಭ್ರಮ. ಕರಾವಳಿ ಭಾಗದಲ್ಲಿ ಹಬ್ಬದ ಗಮ್ಮತ್ತು ಒಂದು ರೀತಿಯಾದ್ರೆ, ಮಲೆನಾಡಿಗರ ಸಂಭ್ರಮದ ವಿಶೇಷತೆಯೇ ಬೇರೆ. ಇನ್ನು ಶಿರಸಿಯಲ್ಲಂತೂ ವಿಶೇಷ ತಿಂಡಿ ತಿನಿಸು ಮಾಡೋದ್ರಲ್ಲಿ ಜನರು ನಿರತರಾಗಿದ್ದು, ಕೂಡು ಕುಟುಂಬಗಳು ಒಟ್ಟಿಗೆ ಸೇರಿ ಸಂತಸ ಇಮ್ಮಡಿಯಾಗಿದೆ.
ಚಕ್ಕುಲಿ.. ವಿಘ್ನ ವಿನಾಯಕನಿಗೆ ಪ್ರಿಯವಾದ ತಿಂಡಿ. ಹೀಗಾಗಿ ಮಲೆನಾಡ ಭಾಗದಲ್ಲಿ ಚಕ್ಕುಲಿ ಕಂಬಳದ ಸಂಭ್ರಮ ಜೋರಾಗಿದೆ. ಶಿರಸಿಯ ಹೆಗಡೆಕಟ್ಟೆ ಸಮೀಪದ ಕಲ್ಮನೆಯ ಪ್ರತಿಯೊಬ್ಬರು ಚಕ್ಕುಲಿ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ 4 ದಿನಗಳಿಂದ ಕೈ ಚಕ್ಕುಲಿ ಕಂಬಳ ಶುರುವಾಗಿದೆ. ಕೈಚಕ್ಕುಲಿ ಕಂಬಳದಲ್ಲಿ ವೃತ್ತಾಕಾರವಷ್ಟೇ ಅಲ್ಲದೆ ಕೆಲವ್ರು ಅಕ್ಷರಗಳನ್ನ ಸಹ ಬರೀತಾರೆ. ಅನಾಧಿ ಕಾಲದಿಂದಲೂ ಬಂದ ಚಕ್ಕುಲಿ ಕಂಬಳ ಅಂದ್ರೆ ಇಲ್ಲಿನ ಜನರಿಗೆ ಎಲ್ಲಿಲ್ಲದ ಖುಷಿ.
ಅಂದ್ಹಾಗೇ, ಇತ್ತೀಚಿಗೆ ಎಲ್ಲರೂ ತಂತ್ರಜ್ಞಾನದ ಮೊರೆ ಹೋಗ್ತಿದ್ದಾರೆ. ಆದ್ರೆ ಕಲ್ಮನೆಯಲ್ಲಿ ಮಾತ್ರ ಪ್ರತಿವರ್ಷ ಕೈಯಲ್ಲೇ ಚಕ್ಕುಲಿ ಕಂಬಳವನ್ನ ಮಾಡ್ತಾರೆ. ರೆಡಿಮೇಡ್ ಚಕ್ಕುಲಿಗಿಂತ ಇದ್ರ ರುಚಿ ಚೆನ್ನಾಗಿರುತ್ತೆ. ಅದ್ರಲ್ಲೂ ಹಲವು ವಿಧದ ಚಕ್ಕುಲಿಗಳು ನೋಡೋಕೆ ಆಕರ್ಷಕವಾಗಿರೋದಷ್ಟೇ ಅಲ್ಲದೆ ಬಾಯಲ್ಲಿ ನೀರೂರಿಸ್ತಿವೆ.
ಒಟ್ನಲ್ಲಿ ಕೊರೊನಾದಿಂದ ಈ ಬಾರಿ ಸಾರ್ವಜನಿಕವಾಗಿ ಗಣೇಶನ ಹಬ್ಬದ ಸಂಭ್ರಮ ಕಳೆಗುಂದಿದ್ರೂ ಕೂಡ ಸಾಂಪ್ರದಾಯಿಕ ಆಚರಣೆ ಮಾತ್ರ ನಿಂತಿಲ್ಲ. ಭೋಜನಾಂಪ್ರಿಯ ವಿನಾಯಕನಿಗೆ ವಿಭಿನ್ನ ತಿಂಡಿ ತಿನಿಸುಗಳ ತಯಾರಿಯೊಂದಿಗೆ ಚಕ್ಕುಲಿ ಕಂಬಳ ಭರ್ಜರಿಯಾಗಿ ಸಾಗಿದ್ದು, ಮನೆಗಳಲ್ಲೂ ಗಣೇಶನ ಹಬ್ಬ ರಂಗೇರಿದೆ.