ಸ್ತ್ರೀ ದೋಷ ನನಗೆ ವರವಾಗಿದೆ ಎಂದ ಚಕ್ರವರ್ತಿ ಚಂದ್ರಚೂಡ್​

| Updated By: ರಾಜೇಶ್ ದುಗ್ಗುಮನೆ

Updated on: Aug 02, 2021 | 4:10 PM

ಚಕ್ರವರ್ತಿ ಚಂದ್ರಚೂಡ್​ ಬಿಗ್​ ಬಾಸ್​ನಲ್ಲಿ ಸಾಕಷ್ಟು ಜನರನ್ನು ವಿರೋಧಿಸಿದ್ದಾರೆ. ಪ್ರಿಯಾಂಕಾ ತಿಮ್ಮೇಶ್​ ಜತೆ ಜಗಳ ಮಾಡಿಕೊಂಡಿದ್ದಾರೆ. ದಿವ್ಯಾ ಸುರೇಶ್​ ಅವರನ್ನು ಕಟುವಾಗಿ ಟೀಕಿಸಿದ್ದಾರೆ.

ಕನ್ನಡ ಬಿಗ್​ ಬಾಸ್​ ಸೀಸನ್ 8ರಲ್ಲಿ ಭಿನ್ನ ಮಾತು ಹಾಗೂ ವರ್ತನೆ ಮೂಲಕ ಗಮನ ಸೆಳೆದವರು ಚಕ್ರವರ್ತಿ ಚಂದ್ರಚೂಡ್​. ಅವರು ನಡೆದುಕೊಂಡ ರೀತಿ ಕೆಲವರಿಗೆ ಇಷ್ಟವಾಗಿಲ್ಲ, ಇನ್ನೂ ಕೆಲವರಿಗೆ ಇಷ್ಟವಾಗಿದೆ. ಕಳೆದ ವಾರದ ಮಿಡ್​ವೀಕ್​ನಲ್ಲಿ ಅವರು ಎಲಿಮಿನೇಟ್​ ಆಗಿದ್ದಾರೆ. ತಮ್ಮ ಬಿಗ್​ ಬಾಸ್​ ಜರ್ನಿಯ ಅನುಭವವನ್ನು ಟಿವಿ9 ಕನ್ನಡದ ಜತೆ ಹಂಚಿಕೊಂಡಿದ್ದಾರೆ.

ಚಕ್ರವರ್ತಿ ಚಂದ್ರಚೂಡ್​ ಬಿಗ್​ ಬಾಸ್​ನಲ್ಲಿ ಸಾಕಷ್ಟು ಜನರನ್ನು ವಿರೋಧಿಸಿದ್ದಾರೆ. ಪ್ರಿಯಾಂಕಾ ತಿಮ್ಮೇಶ್​ ಜತೆ ಜಗಳ ಮಾಡಿಕೊಂಡಿದ್ದಾರೆ. ದಿವ್ಯಾ ಸುರೇಶ್​ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ಕೆಲ ಮಹಿಳಾ ಸ್ಪರ್ಧಿಗಳನ್ನು ಟೀಕಿಸಿದ್ದ ಚಕ್ರವರ್ತಿ ತಮಗೆ ಸ್ತ್ರೀ ದೋಷವಿದೆ ಎಂದು ಸುದೀಪ್​ ಎದುರು ಹೇಳಿಕೊಂಡಿದ್ದರು. ಹೀಗೆ ಹೇಳಿದ್ದೇಕೆ ಎನ್ನುವ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಅಲ್ಲದೆ, ಈ ಸ್ತ್ರೀ ದೋಷ ತಮಗೆ ವರವಾಗಿದೆ ಎಂದು ಕೂಡ ಅವರು ಹೇಳಿಕೊಂಡಿದ್ದಾರೆ. ಆ ಬಗ್ಗೆ ವಿಡಿಯೋದಲ್ಲಿದೆ ಮಾಹಿತಿ.

ಇದನ್ನೂ ಓದಿ: ‘ಆ ಕೈಸನ್ನೆ ತೋರಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ’; ಪ್ರಿಯಾಂಕಾ ತಿಮ್ಮೇಶ್​ ಬಳಿ ಶಿರಬಾಗಿ ಕ್ಷಮೆ ಕೇಳಿದ ಚಕ್ರವರ್ತಿ ಚಂದ್ರಚೂಡ್​

Published on: Aug 02, 2021 04:03 PM