Loading video

ಚಕ್ರವರ್ತಿ ಸೂಲಿಬೆಲೆ ವಾಕ್​ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿಲ್ಲ, ಅದರೆ ಅವರು ಸುಳ್ಳಿನ ಚಕ್ರವರ್ತಿ ಅಂತ ಗೊತ್ತು: ಲಕ್ಷ್ಮಿ ಹೆಬ್ಬಾಳ್ಕರ್

Updated on: Jun 20, 2025 | 12:56 PM

ಹಿಂದೂ ಕಾರ್ಯಕರ್ತರು ಜಿಲ್ಲೆಯಲ್ಲಿ ಕೋಮು ಪ್ರಚೋದನೆ ಮಾಡಲ್ಲ, ಸೌಹಾರ್ದತೆಯನ್ನು ಕಾಪಾಡುತ್ತೇವೆ ಅನ್ನುತ್ತಾರೆ ಆದರೆ ಸರ್ಕಾರ ರಚಿಸಿರುವ ಕೋಮು ನಿಗ್ರಹ ದಳವನ್ನು ವಿರೋಧಿಸುತ್ತಾರೆ, ಇಂಥ ವಿರೋದಾಭಾಸಗಳು ಅವರಲ್ಲಿ ಯಾಕೆ? ಅವರ ಮನಸ್ಥಿತಿಯನ್ನು ಉಡುಪಿಯ ಜನ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ, ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಉಡುಪಿ, ಜೂನ್ 20: ಚಕ್ರವರ್ತಿ ಸೂಲೆಬೆಲೆ (Chakravarti Sulibele) ತಮ್ಮ ಉಡುಪಿ ಪ್ರವಾಸದಲ್ಲಿ ಭಾಷಣ ಮಾಡದಂತೆ ಯಾರೂ ತಡೆಯುತ್ತಿಲ್ಲ, ಅದರೆ ಅವರು ಸುಳ್ಳಿನ ಚಕ್ರವರ್ತಿ ಎಂದು ನಾಡಿನ ಜನತೆಗೆ ಗೊತ್ತಿದೆ, ಉಡುಪಿಯ ಜನ ಶಾಂತಿಪ್ರಿಯರು, ಶಾಂತಿ ಕದಡುವ ಪ್ರಯತ್ನ ಅವರಿಂದ ನಡೆಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಚಕ್ರವರ್ತಿ ತಮ್ಮ ಮಾತುಗಳಲ್ಲಿ ಭಗವದ್ಗೀತೆ, ರಾಮಾಯಣದ ಉದಾಹರಣೆಗಳನ್ನು ಬಹಳ ಪ್ರಯೋಗಿಸುತ್ತಾರೆ, ಕಪ್ಪನ್ನು ಬಿಳಿ ಮಾಡುವುದರಲ್ಲಿ ಮತ್ತು ಬಿಳಿಯನ್ನು ಕಪ್ಪು ಮಾಡುವುದರಲ್ಲಿ ಅವರು ಪರಿಣಿತರು ಎಂದು ಸಚಿವೆ ಹೆಬ್ಬಾಳ್ಕರ್ ಹೇಳಿದರು. ತಮ್ಮ ಸರ್ಕಾರ ಯಾರ ವಾಕ್​ ಸ್ವಾತಂತ್ರ್ಯಕ್ಕೂ ಅಡ್ಡಿ ಬರಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ:  ಸೂಲಿಬೆಲೆಗೆ ಕಲಬುರಗಿ ಜಿಲ್ಲಾ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿದ ಕೋರ್ಟ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ