ಕಾಂಗ್ರೆಸ್​ ನಾಯಕರ ಬಗ್ಗೆ ಛಲವಾದಿ ಬಿಗ್​​ ಬಾಂಬ್​: ಸಿಎಂ ಸ್ಥಾನಕ್ಕಾಗಿ ‘ಕೈ’ ಪಾಳಯದಲ್ಲಿ ಕುದುರೆ ವ್ಯಾಪಾರ?

Edited By:

Updated on: Nov 23, 2025 | 1:44 PM

ಕಾಂಗ್ರೆಸ್​​ನಲ್ಲಿ ಸಿಎಂ ಸ್ಥಾನಕ್ಕಾಗಿ ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ, ಮಂತ್ರಿ ಸ್ಥಾನಕ್ಕೆ ಕೋಟಿಗಟ್ಟಲೆ ಡೀಲ್ ಮಾಡಲಾಗುತ್ತಿದೆ ಎಂದು ಪರಿಷತ್​​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ತಮ್ಮದೇ ಪಕ್ಷದಲ್ಲಿ ಶಾಸಕರನ್ನು ಖರೀದಿಸುವ ಪರಿಸ್ಥಿತಿಗೆ ಕಾಂಗ್ರೆಸ್​​ ಬಂದಿದೆ ಎಂದಿರುವ ಅವರು, ಈ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ದೂರು ನೀಡುವುದಾಗಿ ತಿಳಿಸಿದ್ದಾರೆ. ಇದು ಜನರ ಹಣದ ದುರುಪಯೋಗ ಎಂದು ಅವರು ಟೀಕಿಸಿದ್ದಾರೆ.

ಬೆಂಗಳೂರು, ನವೆಂಬರ್​ 23: ಕಾಂಗ್ರೆಸ್​​ನಲ್ಲಿ ಸಿಎಂ ಸ್ಥಾನಕ್ಕಾಗಿ ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ, ಮಂತ್ರಿ ಸ್ಥಾನಕ್ಕೆ ಕೋಟಿಗಟ್ಟಲೆ ಡೀಲ್ ಮಾಡಲಾಗುತ್ತಿದೆ ಎಂದು ಪರಿಷತ್​​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಮೊದಲು 50 ಕೋಟಿ ರೂಪಾಯಿ, ನಂತರ 75 ರಿಂದ 100 ಕೋಟಿ ರೂಪಾಯಿ ನೀಡಿ ಶಾಸಕರನ್ನು ಖರೀದಿಸಲಾಗುತ್ತಿದೆ . ತಮ್ಮದೇ ಪಕ್ಷದ ಶಾಸಕರನ್ನು ಖರೀದಿಸುವ ಸ್ಥಿತಿ ಕಾಂಗ್ರೆಸ್‌ನಲ್ಲಿ ಉದ್ಭವಿಸಿದೆ ಎಂದು ಅವರು ಹೇಳಿದ್ದಾರೆ. ಮಂತ್ರಿ ಸ್ಥಾನ ಬೇಕಾದವರಿಗೆ ಎಐಸಿಸಿ ನಾಯಕ ಸುರ್ಜೇವಾಲಾ 200 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎಂದು ಸಹ ಆರೋಪಿಸಿರುವ ಅವರು, ರವೀಂದ್ರ ಪಪ್ಪಿ ಈಗಾಗಲೇ ಮುಂಗಡ ಹಣ ನೀಡಿ ಬಂಧಿತರಾಗಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಈ ಕುರಿತು ಜಾರಿ ನಿರ್ದೇಶನಾಲಯಕ್ಕೆ (ಇಡಿ) ದೂರು ನೀಡೋದಾಗಿ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.